2ನೇ ಬಾರಿ ಲಾಕ್‌ಔಟ್ ಘೋಷಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿ, ಮುಂದುವರಿದ ಕಾರ್ಮಿಕರ ಮುಷ್ಕರ..

ಅದು ರಾಜ್ಯದ ಪ್ರತಿಷ್ಠಿತ ಕಂಪನಿ. ಸಾವಿರಾರು ಕಾರ್ಮಿಕರು ಆ ಕಂಪನಿಯಲ್ಲಿ ಕೆಲ್ಸ ನಿರ್ವಹಿಸುತ್ತಿದ್ದಾರೆ. ಆದ್ರೆ ಕಾರ್ಮಿಕರು ಹಾಗೂ ಕಂಪನಿ ಆಡಳಿತ ಮಂಡಳಿ ಹಗ್ಗ ಜಗ್ಗಾಟದಿಂದ ಒಂದೆಡೆ ಕಂಪನಿ ಎರಡನೇ ಬಾರಿಗೆ ಲಾಕ್‌ಔಟ್‌ ಘೋಷಣೆ ಮಾಡಿದ್ರೆ, ಮತ್ತೊಂದೆಡೆ ಕಾರ್ಮಿಕರು ತಮ್ಮ ಪಟ್ಟುಬಿಡದೆ ಪ್ರತಿಭಟನೆ ಮುಂದುವರೆಸಿದ್ದಾರೆ.

2ನೇ ಬಾರಿ ಲಾಕ್‌ಔಟ್ ಘೋಷಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿ, ಮುಂದುವರಿದ ಕಾರ್ಮಿಕರ ಮುಷ್ಕರ..
2ನೇ ಬಾರಿ ಲಾಕ್‌ಔಟ್ ಘೋಷಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Nov 26, 2020 | 11:28 AM

ರಾಮನಗರ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿರೋ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿಯ ಆಡಳಿತ ಮಂಡಳಿ, ಎರಡನೇ ಬಾರಿಗೆ ಕಂಪನಿಗೆ ಲಾಕ್‌ಔಟ್ ಘೋಷಣೆ ಮಾಡಿದೆ. ಅತ್ತ ಕಂಪನಿಯ ಆಡಳಿತ ಮಂಡಳಿಯ ನಡೆಯನ್ನ ವಿರೋಧಿಸಿ ಕಾರ್ಮಿಕರು ಸಹ ಪ್ರತಿಭಟನೆ ಮುಂದುವರೆಸಿದ್ದಾರೆ.

ಅಂದಹಾಗೆ, ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಹಗ್ಗಾ ಜಗ್ಗಾಟದಿಂದ ನವೆಂಬರ್ 10ರಂದು ಲಾಕ್ಔಟ್‌ ಘೋಷಣೆ ಮಾಡಿತ್ತು. ಇದನ್ನ ಖಂಡಿಸಿ ಕಾರ್ಮಿಕರು ಸಹ ಪ್ರತಿಭಟನೆ ಮುಂದುವರೆಸಿದ್ರು.

ಹೀಗಾಗಿ ರಾಜ್ಯ ಸರ್ಕಾರ ಸಹ ಮಧ್ಯಪ್ರವೇಶಿಸಿ ಕಂಪನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮುಖಂಡರ ಸಭೆ ನಡೆಸಿ, ರಾಜಿ ಸಂಧಾನ ಸಹ ಮಾಡಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು.

ಅಲ್ಲದೆ ಲಾಕ್ಔಟ್‌ ಹಾಗೂ ಮುಷ್ಕರ ಎರಡನ್ನೂ ನಿಷೇಧಿಸಿ ರಾಜ್ಯ ಸರ್ಕಾರ ನವೆಂಬರ್‌ 18ರಂದು ಆದೇಶಿಸಿತ್ತು. ಈ ನಿಟ್ಟಿನಲ್ಲಿ ಕಂಪನಿ ಲಾಕ್‌ಔಟ್‌ ತೆರವುಗೊಳಿಸಿ ನವೆಂಬರ್‌ 10ರಂದು ಆದೇಶಿಸಿತ್ತು.

ಈ ನಿಟ್ಟಿನಲ್ಲಿ ಕಂಪನಿ ಲಾಕ್ಔಟ್‌ ತೆರವುಗೊಳಿಸಿ ನವೆಂಬರ್‌ 19ರಿಂದ ಕೆಲಸ ಪುನಾರಂಭ ಮಾಡಿತ್ತು. ಆದ್ರೆ ಕಾರ್ಮಿಕರು ಮುಷ್ಕರ ಮುಂದುವರೆಸಿದ್ದರಿಂದ ಮತ್ತೆ ಎರಡನೇ ಬಾರಿ ಟೊಯೋಟಾ ಕಂಪನಿ ಮತ್ತೆ ಲಾಕ್ಔಟ್‌ ಘೋಷಣೆ ಮಾಡಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಆಡಳಿತ ಮಂಡಳಿ, ಕಾರ್ಮಿಕರು ಶಿಸ್ತು, ಕಂಪನಿಯ ನಿಯಮಗಳನ್ನ ಪಾಲಿಸುತ್ತಿಲ್ಲ. ಕೆಲಸಕ್ಕೆ ಬರೋ ಕಾರ್ಮಿಕರಿಗೆ, ಮುಖಂಡರು ಬೆದರಿಕೆ ಹಾಕ್ತಿದ್ದಾರೆ. ಕೆಲಸಕ್ಕೆ ಕಾರ್ಮಿಕರು ಹಾಜರಾಗಿಲ್ಲ. ಹೀಗಾಗಿ ನಾವು ಎರಡನೇ ಬಾರಿ ಲಾಕ್ಔಟ್‌ ಮಾಡಿದ್ದೇವೆ ಎಂದಿದೆ.

ಒಟ್ನಲ್ಲಿ ಕಂಪನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಆರೋಪ ಪ್ರತ್ಯಾರೋಪದಿಂದ ಕಂಪನಿ ಲಾಕ್‌ಔಟ್‌ ಆಗಿದ್ರೆ ಕಾರ್ಮಿಕರು ಹೋರಾಟ ಮುಂದುವರೆಸಿದ್ದಾರೆ. ಹೀಗಾಗಿ ಸರ್ಕಾರ ಈ ವಿಚಾರವಾಗಿ ಮತ್ತೆ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸೋ ಕೆಲ್ಸ ಮಾಡ್ಬೇಕಿದೆ.

Published On - 6:40 am, Thu, 26 November 20

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್