ಪವಿತ್ರ ಪುಣ್ಯಕ್ಷೇತ್ರಂ ತಿರುಪತಿಯ ತಿರುಮಲ ಬೆಟ್ಟದಲ್ಲಿ ಖಾಸಗಿ ಹೋಟೆಲ್ ಗಳ ( private hotels, eateries) ರೂಮ್ ಬಾಡಿಗೆ ಎಂಬ ಹಗಲು ದರೋಡೆ ಮೇಲೆ ದೇವಸ್ಥಾನದ ಆಡಳಿತ ಮಂಡಳಿ- ಟಿಟಿಡಿ ಕ್ರಮ ಕೈಗೊಳ್ಳಲು ಮುಂದಾಗಿದೆ. ತಿರುಪತಿ ತಿಮ್ಮಪ್ಪನ ಭಕ್ತರ ವಾಸ್ತವ್ಯ, ಊಟ ತಿಂಡಿ ಆಹಾರ ಸಾಮಗ್ರಿಗಳ ಅವಶ್ಯಕತೆಗಳನ್ನು ಮನಗಂಡು ಅದಕ್ಕೆಲ್ಲ ಆಸರೆಯಾಗುವ ಸೋಗಿನಲ್ಲಿ ಖಾಸಗಿ ಹೋಟೆಲ್‌ಗಳು ವಿಧಿಸುತ್ತಿರುವ ದುಬಾರಿ ಬಾಡಿಗೆ, ದರಗಳನ್ನು ನಿಯಂತ್ರಿಸಲು ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಇನ್ನೂ ಹೇಳಬೇಕೆಂದರೆ ತಿರುಮಲದಲ್ಲಿ ನಡೆದಿರುವ ಖಾಸಗಿ ಹೋಟೆಲುಗಳ ಈ ಹಗಲು ದರೋಡೆ ಮೇಲೆ ಪ್ರಹಾರ ಮಾಡಿದೆ. ಭಕ್ತರ ದೂರುಗಳನ್ನು (Tourism) ಗಮನಕ್ಕೆ ತೆಗೆದುಕೊಂಡು ಕಡಿಮೆ ದರದಲ್ಲಿ ಉತ್ತಮ ಆಹಾರ ಸರಬರಾಜು ಮಾಡುವ ಬಗ್ಗೆ ಆಲೋಚಿಸಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ಗಳ ನಿರ್ವಹಣೆ ಜವಾಬ್ದಾರಿಯನ್ನು ಎಪಿ ಟೂರಿಜಂ ಇಲಾಖೆಗೆ ಒಪ್ಪಿಸಲು ಮುಂದಾಗಿದೆ. ಈಗಾಗಲೇ ಎರಡು ಹೋಟೆಲ್‌ಗಳ ನಿರ್ವಹಣೆಯನ್ನು ಟಿಟಿಡಿ (TTD) ಆಡಳಿತ ಮಂಡಳಿಯು ಎಪಿ ಟೂರಿಜಂ (AP Tourism Corporation) ಅಧೀನಕ್ಕೆ ನೀಡಿದೆ. ದುಬಾರಿ ದರಗಳನ್ನು ವಿಧಿಸಿರುವ ಕೆಲವು ಹೋಟೆಲ್‌ಗಳ ಲೈಸೆನ್ಸುಗಳನ್ನು ರದ್ದುಗೊಳಿಸುವ ಬಗ್ಗೆಯೂ ಆಲೋಚಿಸುತ್ತಿದೆ.
ಇಲ್ಲಿ ದಾಖಲಾರ್ಹ ಸಂಗತಿಯೆಂದರೆ ಈ ಹಿಂದೆಯೂ ಅನೇಕ ಬಾರಿ ಖಾಸಗಿ ಹೋಟೆಲುಗಳ ವಿರುದ್ಧ ಇಂತಹ ಕಠಿಣ ಕ್ರಮಗಳನ್ನ ಕೈಗೊಳ್ಳಲು ಯತ್ನಿಸಿತ್ತಾದರೂ ಅವೆಲ್ಲಾ ವಿಫಲವಾಗಿವೆ ಎಂಬುದು ಗಮನಾರ್ಹ. ಆದಾಗ್ಯೂ, ಟಿಟಿಡಿ ಆಡಳಿತ ಮಂಡಳಿಯ ಎಕ್ಸಿಕ್ಯೂಟೀವ್ ಆಫೀಸರ್ ಜೊತೆ ಭಕ್ತರು ನೇರವಾಗಿ ಮಾತನಾಡಿ, ತಮ್ಮ ದೂರುದುಮ್ಮಾನುಗಳನ್ನು ಹೇಳಿಕೊಳ್ಳುವ ವೇದಿಕೆಯಾಗಿ ಡಯಲ್ ಯುವರ್ ಈಓ (Dial your EO -TTD) ದೂರವಾಣಿ ಕರೆ ಕಾರ್ಯಕ್ರಮವನ್ನು ಕಳೆದ ವಾರ ನಡೆಸಲಾಗಿದೆ.
ಆ ವೇಳೆ ಭಕ್ತರಿಂದ ಬಂದ ದೂರುಗಳನ್ನು ಪರಿಶೀಲಿಸಿ, ಟಿಟಿಡಿಈ ಆ್ಯಕ್ಷನ್ ಪ್ಲಾನ್ ಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಟ್ಟದ ಮೇಲೆ ಒಂದು ರೆಸ್ಟೋರೆಂಟ್ ತನ್ನಿಷ್ಟಕ್ಕೆ ಬಂದಂತೆ ತಿಂಗಳಿಗೆ ಸುಮಾರು 50 ಲಕ್ಷ ರೂಪಾಯಿವರೆಗೆ ಬಾಡಿಗೆ ವಿಧಿಸುತ್ತಿದೆ. ಈ ಹಗಲು ದರೋಡೆಯನ್ನು ತಡೆಯುವಂತೆ ಭಕ್ತರು TTD EO ಗೆ ಕರೆ ಮಾಡಿ ಗಮನ ಸೆಳೆದಿದ್ದಾರೆ. ಇನ್ನು, ದೇವಸ್ಥಾನದ ಆಜುಬಾಜು ಇರುವ ಸಾವಿರಾರು ಫಾಸ್ಟ್ ಫುಡ್ ಸೆಂಟರ್ ಗಳಲ್ಲಿಯೂ ಇದೇ ರೀತಿಯಲ್ಲಿ ದರೋಡೆ ನಡೆಯುತ್ತಿರುವುದನ್ನು ಗಮನಿಸಿ ಟಿಟಿಡಿ ಈ ಆಕ್ಷನ್ ಪ್ಲಾನ್ ಸ್ಟಾರ್ಟ್ ಮಾಡಿದೆ.
#TTD#TTDevasthanams #DialYourEO pic.twitter.com/IGGiZK2vAp
— Tirumala Tirupati Devasthanams (@TTDevasthanams) October 5, 2023
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಆಂಧ್ರ ಪ್ರದೇಶ ಟೂರಿಸಂ ಕಾರ್ಪೊರೇಷನ್ (ಎಪಿ ಟಿಡಿಸಿ) ಕಡಿಮೆ ಟೆಂಡರ್ ಮೂಲಕ ಕಡಿಮೆ ದರದಲ್ಲಿ ಉತ್ತಮ ಆಹಾರವನ್ನು ಭಕ್ತರಿಗೆ ನೀಡುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ ತಿರುಮಲಕ್ಕೆ ಬಂದ ಭಕ್ತರಿಗೆ ಅನ್ನ ಪ್ರಸಾದಗಳು ಯಾವುದೇ ವೆಚ್ಚವಿಲ್ಲದೆ ಟಿಟಿಡಿ ಒದಗಿಸುವ ಪ್ರಸ್ತಾವನೆ ಮುಂದಿಡಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಟಿಫಿನ್ ಗಾಗಿ ಪ್ರವಾಸಿ ಭಕ್ತರು ಹೋಟೆಲ್‌ಗಳಿಗೆ ಹೋದಾಗ 500 ರೂಪಾಯಿಗಳವರೆಗೂ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಗಲು ದರೋಡೆ ಸಮ್ಮುಖದಲ್ಲಿ ಅವುಗಳಿಗೆ ನಿಯಂತ್ರಣ ಹಾಕಲು ಎಪಿ ಟೂರಿಜಂ ನಿಗಮಕ್ಕೆ ಹೋಟೆಲ್‌ಗಳನ್ನು ನೀಡುವ ಬಗ್ಗೆ ಸದ್ಯಕ್ಕೆ ಟಿಟಿಡಿ ನಿರ್ಣಯ ತೆಗೆದುಕೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:23 am, Tue, 10 October 23