Exit Poll Result 2021: ಕೇರಳದಲ್ಲಿ ಮತ್ತೊಮ್ಮೆ ಎಲ್​ಡಿಎಫ್ Tv9-Polstrat ಸಮೀಕ್ಷೆ

|

Updated on: Apr 29, 2021 | 7:37 PM

Kerala Exit Poll Result 2021: ಕೇರಳದ 14 ಜಿಲ್ಲೆಗಳಲ್ಲಿ ನಡೆಸಿದ ಮತಗಟ್ಟೆ ಸಮೀಕ್ಷೆಯಲ್ಲಿ (Exitpoll)ಸಂಗ್ರಹಿಸಿದ ಜನಾಭಿಪ್ರಾಯ ಮತ್ತು ಅಂಕಿ ಅಂಶಗಳ ಪ್ರಕಾರ ಎರಡನೇ ಬಾರಿ ಎಲ್​ಡಿಎಫ್ ಕೇರಳದಲ್ಲಿ ಗದ್ದುಗೇರಲಿದೆ ಎಂಬುದನ್ನು ಸೂಚಿಸುತ್ತದೆ.

Exit Poll Result 2021: ಕೇರಳದಲ್ಲಿ ಮತ್ತೊಮ್ಮೆ ಎಲ್​ಡಿಎಫ್ Tv9-Polstrat ಸಮೀಕ್ಷೆ
ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್​ ಧ್ವಜಗಳು
Follow us on

ದೆಹಲಿ: ಕೇರಳದಲ್ಲಿ ಮತೊಮ್ಮೆ ಎಲ್​ಡಿಎಫ್ ಸರ್ಕಾರವೇ ಅಧಿಕಾರಕ್ಕೇರಲಿದೆ ಎಂಬ ಅಭಿಪ್ರಾಯ Tv9-Polstrat ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಕೇರಳದ 14 ಜಿಲ್ಲೆಗಳಲ್ಲಿ ನಡೆಸಿದ ಮತಗಟ್ಟೆ ಸಮೀಕ್ಷೆಯಲ್ಲಿ (Exitpoll)ಸಂಗ್ರಹಿಸಿದ ಜನಾಭಿಪ್ರಾಯ ಮತ್ತು ಅಂಕಿ ಅಂಶಗಳ ಪ್ರಕಾರ ಎರಡನೇ ಬಾರಿ ಎಲ್​ಡಿಎಫ್ ಕೇರಳದಲ್ಲಿ ಗದ್ದುಗೇರಲಿದೆ ಎಂಬುದನ್ನು ಸೂಚಿಸುತ್ತದೆ.

ಟಿವಿ9 ಮತಗಟ್ಟೆ ಸಮೀಕ್ಷೆ ಪ್ರಕಾರ ಯಾವ  ಪಕ್ಷಕ್ಕೆ ನೀವು ಮತದಾನ ಮಾಡಿದ್ದೀರಿ ಎಂಬ ಪ್ರಶ್ನೆಗೆ ಶೇ 42.70 ಮಂದಿ ಎಲ್​ಡಿಎಫ್ ಎಂದು ಉತ್ತರಿಸಿದ್ದಾರೆ. ಅದೇ ವೇಳೆ ಶೇ  40.10 ಮಂದಿ ಯುಡಿಎಫ್,  ಶೇ 15.40 ಎನ್​ಡಿಎ, ಶೇ, 1.80 ಇತರೆ ಎಂದು ಉತ್ತರಿಸಿದ್ದಾರೆ.

ಕಣದಲ್ಲಿರುವ  ಪ್ರಮುಖ ಪಕ್ಷಗಳು ಎಷ್ಟು ಸೀಟು ಗೆಲ್ಲಲಿವೆ ಎಂಬ ಪ್ರಶ್ನೆಗೆ 70-80 ಎಲ್​ಡಿಎಫ್, 59 – 69 ಯುಡಿಎಫ್, ಎನ್ ಡಿಎ  0-2 , ಇತರೆ- 0 ಎಂದು ಜನಾಭಿಪ್ರಾಯ ಸಿಕ್ಕಿದೆ.

ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳಿವೆ. 2016ರ ಚುನಾವಣೆಯಲ್ಲಿ  ಎಲ್​ಡಿಎಫ್- 91 ,ಯುಡಿಎಫ್-47 ,ಎನ್ ಡಿಎ-1  ಇತರೆ -1 ಸೀಟು ಗಳಿಸಿಕೊಂಡಿತ್ತು.

ಇದನ್ನೂ ಓದಿ:  Kerala Assembly Elections 2021: ಕೇರಳದಲ್ಲಿ ಬಿಜೆಪಿ ಕಿಂಗ್ ಮೇಕರ್ ಆಗಲಿದೆ: ಇ.ಶ್ರೀಧರನ್