‘ಟಿವಿ9 ಬಾಂಗ್ಲಾ’ ಲೋಕಾರ್ಪಣೆ: ಅತಿದೊಡ್ಡ ನ್ಯೂಸ್​ ನೆಟ್​ವರ್ಕ್​ ಮುಕುಟಕ್ಕೆ ಮತ್ತೊಂದು ಗರಿ

|

Updated on: Jan 14, 2021 | 7:30 AM

‘ಟಿವಿ9 ಬಾಂಗ್ಲಾ’ ಸುದ್ದಿವಾಹಿನಿ ಎಲ್ಲಾ ಪ್ರತಿಷ್ಠಿತ ಡಿಟಿಎಚ್​ಗಳು ಮತ್ತು ಕೇಬಲ್ ನೆಟ್​ವರ್ಕ್​ಗಳಲ್ಲಿ ಲಭ್ಯವಿದೆ. ‘ಟಿವಿ9 ಬಾಂಗ್ಲಾ’ ಈ ಮೂಲಕ ದೇಶದ ನಾಲ್ಕು ದಿಕ್ಕುಗಳಲ್ಲೂ ಟಿವಿ9 ನೆಟ್​ವರ್ಕ್ ಹೆಜ್ಜೆಗುರುತು ಮೂಡಿದಂತೆ ಆಗಿದೆ.

‘ಟಿವಿ9 ಬಾಂಗ್ಲಾ’ ಲೋಕಾರ್ಪಣೆ: ಅತಿದೊಡ್ಡ ನ್ಯೂಸ್​ ನೆಟ್​ವರ್ಕ್​ ಮುಕುಟಕ್ಕೆ ಮತ್ತೊಂದು ಗರಿ
ಟಿವಿ9 ಬಾಂಗ್ಲಾ
Follow us on

ಕೊಲ್ಕತ್ತಾ: ಭಾರತದ ಅತ್ಯಂತ ದೊಡ್ಡ ಟೆಲಿವಿಷನ್ ನ್ಯೂಸ್ ನೆಟ್ ವರ್ಕ್, ಟಿವಿ9 ನೆಟ್ ವರ್ಕ್. ಇವತ್ತಿನಿಂದ ನಮ್ಮ ನೆಟ್ ವರ್ಕ್ ಮತ್ತಷ್ಟು ವಿಸ್ತಾರ ಕಾಣ್ತಿದೆ. ಟಿವಿ9 ನೆಟ್​ವರ್ಕ್​ನ 6ನೇ ಚಾನೆಲ್ ‘ಟಿವಿ9 ಬಾಂಗ್ಲಾ’ ಇಂದು ಲೋಕಾರ್ಪಣೆಯಾಗಿದೆ. ಈ ಮೂಲಕ ಸಂಕ್ರಾಂತಿ ಶುಭದಿನದಂದು ದೇಶದ ಅತಿದೊಡ್ಡ ನ್ಯೂಸ್​ ನೆಟ್​ವರ್ಕ್ ಟಿವಿ9 ಮುಕುಟಕ್ಕೆ ಮತ್ತೊಂದು ಗರಿ ಬಂದಂತೆ ಆಗಿದೆ.

ಈಗಾಗಲೇ ಕನ್ನಡ, ತೆಲುಗು, ಮರಾಠಿ, ಗುಜರಾತಿ, ಹಿಂದಿಯಲ್ಲಿ ಟಿವಿ9 ಮುಂಚೂಣಿಯಲ್ಲಿದೆ. ವಿಶ್ವಾಸಾರ್ಹ ಸುದ್ದಿಮೂಲ ಎನಿಸಿಕೊಂಡಿರುವ ಟಿವಿ9 ನೆಟ್​ವರ್ಕ್​ ಕೋಟ್ಯಂತರ ಜನರ ಮನಗೆದ್ದಿದೆ. ‘ಟಿವಿ9 ಬಾಂಗ್ಲಾ’ ವಿಶ್ವದರ್ಜೆಯ ಸುದ್ದಿವಾಹಿನಿಯನ್ನು ಪಶ್ಚಿಮ ಬಂಗಾಳಕ್ಕೆ ಕೊಟ್ಟಿದೆ.

ಅತ್ಯಗತ್ಯ ಸೌಲಭ್ಯ, ತಂತ್ರಜ್ಞಾನಗಳಿರುವ ಸುಸಜ್ಜಿತ ಸ್ಟುಡಿಯೋ, ಅತ್ಯುತ್ತಮ ಪತ್ರಕರ್ತರು ಮತ್ತು ಆ್ಯಂಕರ್​ಗಳ ಬಳಗವನ್ನು ‘ಟಿವಿ9 ಬಾಂಗ್ಲಾ’ ಸುದ್ದಿವಾಹಿನಿ ಹೊಂದಿದೆ. ‘ಟಿವಿ9 ಬಾಂಗ್ಲಾ’ ಸುದ್ದಿವಾಹಿನಿ ಎಲ್ಲಾ ಪ್ರತಿಷ್ಠಿತ ಡಿಟಿಎಚ್​ಗಳು ಮತ್ತು ಕೇಬಲ್ ನೆಟ್​ವರ್ಕ್​ಗಳಲ್ಲಿ ಲಭ್ಯವಿದೆ. ‘ಟಿವಿ9 ಬಾಂಗ್ಲಾ’ ಈ ಮೂಲಕ ದೇಶದ ನಾಲ್ಕು ದಿಕ್ಕುಗಳಲ್ಲೂ ಟಿವಿ9 ನೆಟ್​ವರ್ಕ್ ಹೆಜ್ಜೆಗುರುತು ಮೂಡಿದಂತೆ ಆಗಿದೆ.

Published On - 7:04 am, Thu, 14 January 21