ನನಗೂ ಅಡೆತಡೆಗಳ ಕೊರತೆ ಇಲ್ಲ, ಆದರೆ ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವುದನ್ನು ಕಲಿಯಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ಟಿವಿ9 ನೆಟ್ವರ್ಕ್ ಆಯೋಜಿಸಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೂ ಸಾಕಷ್ಟು ಅಡೆತಡೆಗಳಿವೆ ಆದರೆ ಯಾವುದಕ್ಕೂ ಹೆದರಬಾರದು, ಆದರೆ ಸಮಸ್ಯೆಗಳನ್ನು ಅವಕಾಶವನ್ನಾಗಿ ಪರಿವರ್ತಿಸುವ ಬದಲು ಜನರು ಅವಕಾಶಗಳನ್ನೇ ಸಮಸ್ಯೆಗಳನ್ನಾಗಿ ಪತಿವರ್ತಿಸಿಕೊಳ್ಳುತ್ತಿದ್ದಾರೆ ಎಂದರು.
ಕೊರತೆ ಇರುವ ಕಡೆ ಕೆಲಸ ಮಾಡುತ್ತೇವೆ, ರಫ್ತು ಕಡಿಮೆ ಮಾಡುತ್ತೇವೆ, ಮುಂದೆ ಸಾಗಿ ಗೆಲ್ಲುತ್ತೇವೆ ಮತ್ತು ಭಾರತವನ್ನು ವಿಶ್ವಗುರುವನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿ, ಗಡ್ಕರಿ ಅವರು 18 ನೇ ಶತಮಾನವು ಮೊಘಲ್ ಸುಲ್ತಾನರ, 19 ನೇ ಶತಮಾನ ಯೂನಿಯನ್ ಜ್ಯಾಕ್, 20 ನೇ ಶತಮಾನ ಅಮೆರಿಕ ಮತ್ತು 21 ನೇ ಶತಮಾನ ಭಾರತದದ್ದಾಗಿದೆ ಎಂದು ಹೇಳಿದರು.
ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಕುರಿತು ಕೇಂದ್ರ ಸಚಿವ ಗಡ್ಕರಿ ಅವರು ಮಾತನಾಡಿ, ಇದು ಉದ್ಯೋಗವನ್ನು ತೆಗೆದುಹಾಕುವ ಯೋಜನೆಯಲ್ಲ, ಉದ್ಯೋಗವನ್ನು ಹೆಚ್ಚಿಸುವ ಯೋಜನೆಯಾಗಿದೆ. ನಾನು ಅದನ್ನು ಸಂಪೂರ್ಣವಾಗಿ ಓದಿದ್ದೇನೆ ಮತ್ತು ಇದು ತುಂಬಾ ಒಳ್ಳೆಯ ಯೋಜನೆಯಾಗಿದೆ. ಇನ್ನು 4 ವರ್ಷದಲ್ಲಿ ಯಾರ ಕೆಲಸವೂ ಮುಗಿಯುವುದಿಲ್ಲ, ಅದನ್ನು ಮೊದಲು ಜನರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿ, ದೇಶದಲ್ಲಿ ಇಥೆನಾಲ್ ತಯಾರಿಸಲು ಸಿದ್ಧತೆ ನಡೆದಿದೆ. ಪೆಟ್ರೋಲ್ ದರಕ್ಕಿಂತ ಅರ್ಧದಷ್ಟು ಬೆಲೆಗೆ ಇಥೆನಾಲ್ ದೊರೆಯುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಇಥೆನಾಲ್ ಬಳಕೆಯಿಂದ ಮಾಲಿನ್ಯವೂ ಕಡಿಮೆಯಾಗಲಿದೆ. ಒಂದು ಲೀಟರ್ ಪೆಟ್ರೋಲ್ ಒಂದು ಲೀಟರ್ ಇಥೆನಾಲ್ಗೆ ಸಮನಾಗಿರುತ್ತದೆ. ದೇಶದಲ್ಲಿ ಎಥೆನಾಲ್ ಉತ್ಪಾದನೆ ಹೆಚ್ಚಾಗುತ್ತಿದೆ. 80 ರೂ,ಗೆ ಒಂದು ಲೀಟರ್ ಇಥೆನಾಲ್ ದೊರೆಯಲಿದೆ.
ದೆಹಲಿ ಜನರ ಬಗ್ಗೆ ನನಗೆ ಬೇಸರವಿದೆ, ದೊಡ್ಡ ದೊಡ್ಡ ಮನೆಯನ್ನು ನಿರ್ಮಾಣ ಮಾಡುತ್ತಾರೆ, ಇಂತಹ ದೊಡ್ಡ ಮನೆಗಳನ್ನು ನಿರ್ಮಾಣ ಮಾಡುವವರು ಮನೆಯ ಕೆಳಗಡೆ ನಾಲ್ಕು ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಏಕೆ ಮಾಡುವುದಿಲ್ಲ. ಹಾಗಾಗಿ ಕಾನೂನು ಉಲ್ಲಂಘಿಸಿ ರಸ್ತೆಯಲ್ಲಿ ನಿಲ್ಲಿಸಿದ ಕಾರುಗಳ ಫೋಟೋವನ್ನು ನೀಡಿ ಹಣ ಪಡೆಯಿರಿ ಎಂಬುದನ್ನು ಜಾರಿಗೆ ತರಲಾಗಿತ್ತು ಎಂದರು.
ರಸ್ತೆಯಲ್ಲಿ ಹೋಗಲು 10 ರೂಪಾಯಿ, ರೈಲಿನಲ್ಲಿ ಹೋಗಲು 6 ರೂಪಾಯಿ ತೆಗೆದುಕೊಂಡರೆ, ಜಲಮಾರ್ಗದಲ್ಲಿ ಹೋಗಲು ಕೇವಲ 1 ರೂಪಾಯಿ ಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜಲಮಾರ್ಗಗಳು ಬಹಳ ಮುಖ್ಯ.