ಮಳೆಗೆ ಆಶ್ರಯ ಪಡೆದಿದ್ದ ಕಟ್ಟಡವೇ ಕುಸಿದು ಬಿತ್ತು.. ಒಬ್ಬಾತನ ಅಂತ್ಯಕ್ರಿಯೆಗೆ ಹೋಗಿ 28 ಜನ ಪರಲೋಕಕ್ಕೆ!

ಒಬ್ಬನೇ ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಹೋದ 23 ಜನ ಜೀವಚ್ಛವವಾದ ದುರ್ಘಟನೆ ನಿನ್ನೆ ಉತ್ತರ ಪ್ರದೇಶದಲ್ಲಿ ನಡೆದು ಹೋಗಿದೆ.

ಮಳೆಗೆ ಆಶ್ರಯ ಪಡೆದಿದ್ದ ಕಟ್ಟಡವೇ ಕುಸಿದು ಬಿತ್ತು.. ಒಬ್ಬಾತನ ಅಂತ್ಯಕ್ರಿಯೆಗೆ ಹೋಗಿ 28 ಜನ ಪರಲೋಕಕ್ಕೆ!
ಸ್ಮಶಾನದಲ್ಲಿನ ಕಟ್ಟಡದ ಮೇಲ್ಚಾವಣಿ ಕುಸಿದು 23 ಜನರ ಸಾವು
Ayesha Banu

|

Jan 04, 2021 | 2:02 PM

ಒಬ್ಬನೇ ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಹೋದ 28 ಜನ ಜೀವಚ್ಛವವಾದ ದುರ್ಘಟನೆ ನಿನ್ನೆ ಉತ್ತರ ಪ್ರದೇಶದಲ್ಲಿ ನಡೆದು ಹೋಗಿದೆ. ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿರೋ ಈ ದುರಂತ ಇಡೀ ದೇಶದ ಜನರನ್ನೇ ಬೆಚ್ಚಿ ಬೀಳಿಸಿದೆ.

ಉತ್ತರ ಪ್ರದೇಶದ ಘಾಜಿಯಾಬಾದ್​ ಜಿಲ್ಲೆಯ ಮುರಾದಾಬಾದ್​ನಲ್ಲಿ ಜೈ ರಾಂ ಎಂಬಾತ ಮೃತಪಟ್ಟಿದ್ದ. ಈತನ ಅಂತ್ಯಕ್ರಿಯೆ ನೆರವೇರಿಸಲು ಆತನ ಸಂಬಂಧಿಕರು ಮತ್ತು ಸ್ನೇಹಿತರು ಸ್ಮಶಾನಕ್ಕೆ ಹೋಗಿದ್ರು. ಈ ವೇಳೆ ಈ ದುರಂತ ನಡೆದಿದೆ.

ಒಬ್ಬಾತನ ಅಂತ್ಯಕ್ರಿಯೆಗೆ ಹೋಗಿ 28 ಜನ ಪರಲೋಕಕ್ಕೆ! ಮುರಾದಾಬಾದ್​ ನಿವಾಸಿಯಾಗಿದ್ದ ಜೈರಾಂ ಎಂಬಾತ ಭಾನುವಾರ ಮೃತಪಟ್ಟಿದ್ದ. ಈತನ ಅಂತ್ಯಕ್ರಿಯೆ ನೆರವೇರಿಸಲು ಮುರಾದಾಬಾದ್​ನಲ್ಲಿ ಸ್ಮಶಾಕ್ಕೆ ಆತನ ಸಂಬಂಧಿಕರು ಮತ್ತು ಸ್ನೇಹಿತರು ಹೋಗಿದ್ರು. ಈ ವೇಳೆ ಜೋರು ಮಳೆ ಸುರಿಯಲು ಶುರುವಾಗಿದೆ.

ಮಳೆ ಶುರುವಾಗಿದ್ದರಿಂದ ಅಂತ್ಯಕ್ರಿಯೆ ನೆರವೇರಿಸಲು ಸೇರಿದ್ದ ಜನರು ಅಲ್ಲೇ ಹತ್ತಿರದಲ್ಲಿ ಇದ್ದ ಕಟ್ಟಡದಲ್ಲಿ ಆಶ್ರಯ ಪಡೆದಿದ್ರು. ಕಟ್ಟಡ ಹಳೆಯದಾಗಿತ್ತು. ಜೊತೆಗೆ ಜೋರು ಮಳೆ ಸುರಿದ ಕಾರಣ ಕಟ್ಟಡದ ಮಣ್ಣು ಸರಿದು ಏಕಾಏಕಿ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿದೆ. ಈ ವೇಳೆ ಅಲ್ಲಿ ಆಶ್ರಯ ಪಡೆದಿದ್ದ 70ಕ್ಕೂ ಹೆಚ್ಚು ಜನ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ರು.

38 ಜನರ ರಕ್ಷಣೆ ಯಾವಾಗ ಕಟ್ಟಡ ಕುಸಿದು ಬಿತ್ತೋ.. ಅಲ್ಲಿ ನೆರೆದಿದ್ದವರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸೋ ಜೊತೆಗೆ ಜಿಲ್ಲಾಡಳಿತಕ್ಕೆ ಸುದ್ದಿ ಮುಟ್ಟಿಸಿದ್ರು. ತಕ್ಷಣವೇ ಕಾರ್ಯಪ್ರವೃತ್ತರಾದ ಎನ್​ಡಿಆರ್​ಎಫ್ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆಗೆ ಮುಂದಾದ್ರು. ಈ ವೇಳೆ ಸುಮಾರು 38 ಜನರನ್ನ ರಕ್ಷಿಸಲಾಗಿದ್ದು.. ಅವಶೇಷಗಳಡಿ ಸಿಲುಕಿ 28 ಜನ ಮೃತಪಟ್ಟಿದ್ದಾರೆ. ಅಲ್ದೆ, 15 ಜನರಿಗೆ ಗಂಭೀರ ಗಾಯಗಳಾಗಿದ್ದು, ಘಾಜಿಯಾಬಾದ್ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಘಟನೆಯ ಕುರಿತು ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ಇಂತಾ ದುರಂತ ಸಂಭವಿಸಬಾರದಿತ್ತು. ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಅಂತಾ ಹೇಳಿದ್ದಾರೆ. ಒಟ್ನಲ್ಲಿ ಬಾರದ ಲೋಕಕ್ಕೆ ಹೋದವನ ಕಳುಹಿಸಿಕೊಡಲು ಹೋದವರು ಸಹ ಆತನ ಹಿಂದೆಯೇ ಹೋಗಿದ್ದು ದುರಂತವೇ ಸರಿ.

ಅಂತ್ಯಕ್ರಿಯೆಗೆ ಬಂದವರೂ ಮಸಣ ಸೇರಿದರು: ಸ್ಮಶಾನದಲ್ಲಿನ ಕಟ್ಟಡದ ಮೇಲ್ಛಾವಣಿ ಕುಸಿದು 18 ಮಂದಿ ಸಾವು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada