25 ರೂ. ಸಬ್ಸಿಡಿ ಈರುಳ್ಳಿಗೆ ಮುಗಿಬಿದ್ದ ಜನ

|

Updated on: Dec 01, 2019 | 12:51 PM

ಹೈದರಾಬಾದ್: ಆಂಧ್ರಪ್ರದೇಶದ ವಿಜಯವಾಡದಲ್ಲಿ‌ ಸಬ್ಸಿಡಿ ಈರುಳ್ಳಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈರುಳ್ಳಿ ದರ 100 ದಾಟಿದ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಈರುಳ್ಳಿ ಖರೀದಿಸಲು ಭಾರಿ ಪ್ರಮಾಣದಲ್ಲಿ‌ ಜನ ಸೇರಿದ್ದಾರೆ. ಭವಾನಿಪುರದ‌ ರೈತ ಬಜಾರ್​ನಲ್ಲಿ ಸಬ್ಸಿಡಿ ದರಕ್ಕೆ‌ ಈರುಳ್ಳಿ ಮಾರಾಟ ವಾಗುತ್ತಿದ್ದು, 25 ರೂಪಾಯಿಗೆ ಕೆ.ಜಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ರೈತ ಬಜಾರ್​ನಲ್ಲಿ ಒಂದೇ ಮಾರಾಟ ಕೇಂದ್ರ ಇರೋ ಕಾರಣ ಭಾರಿ ನೂಕಾಟ, ತಳ್ಳಾಟದಲ್ಲೇ ಜನ ಈರುಳ್ಳಿ ಖರೀದಿಗೆ ಇಳಿದಿದ್ದಾರೆ. ಹೊರಗಡೆ ಮಾರುಕಟ್ಟೆಯಲ್ಲಿ‌ 80 ರೂಪಾಯಿಗೂ ಅಧಿಕ ದರಕ್ಕೆ […]

25 ರೂ. ಸಬ್ಸಿಡಿ ಈರುಳ್ಳಿಗೆ ಮುಗಿಬಿದ್ದ ಜನ
Follow us on

ಹೈದರಾಬಾದ್: ಆಂಧ್ರಪ್ರದೇಶದ ವಿಜಯವಾಡದಲ್ಲಿ‌ ಸಬ್ಸಿಡಿ ಈರುಳ್ಳಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈರುಳ್ಳಿ ದರ 100 ದಾಟಿದ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಈರುಳ್ಳಿ ಖರೀದಿಸಲು ಭಾರಿ ಪ್ರಮಾಣದಲ್ಲಿ‌ ಜನ ಸೇರಿದ್ದಾರೆ. ಭವಾನಿಪುರದ‌ ರೈತ ಬಜಾರ್​ನಲ್ಲಿ ಸಬ್ಸಿಡಿ ದರಕ್ಕೆ‌ ಈರುಳ್ಳಿ ಮಾರಾಟ ವಾಗುತ್ತಿದ್ದು, 25 ರೂಪಾಯಿಗೆ ಕೆ.ಜಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.

ರೈತ ಬಜಾರ್​ನಲ್ಲಿ ಒಂದೇ ಮಾರಾಟ ಕೇಂದ್ರ ಇರೋ ಕಾರಣ ಭಾರಿ ನೂಕಾಟ, ತಳ್ಳಾಟದಲ್ಲೇ ಜನ ಈರುಳ್ಳಿ ಖರೀದಿಗೆ ಇಳಿದಿದ್ದಾರೆ. ಹೊರಗಡೆ ಮಾರುಕಟ್ಟೆಯಲ್ಲಿ‌ 80 ರೂಪಾಯಿಗೂ ಅಧಿಕ ದರಕ್ಕೆ ಈರುಳ್ಳಿ ಸಿಗ್ತಿದೆ. ಹೀಗಾಗಿ 25 ರೂಪಾಯಿಗೆ ಸಬ್ಸಿಡಿ ದರದ ಈರುಳ್ಳಿ ಖರೀದಿಸಲು ಭಾರೀ ಪ್ರಮಾಣದ ಜನ ಸೇರಿದ್ದಾರೆ. ಅಲ್ಲದೆ ಈರುಳ್ಳಿ ಮಾರಾಟ ಕೇಂದ್ರಗಳ‌ನ್ನು ಹೆಚ್ಚಿಸುವಂತೆಯೂ ಇಲ್ಲಿನ ಜನರು ಒತ್ತಾಯಿಸಿದ್ದಾರೆ.

Published On - 12:10 pm, Sun, 1 December 19