ಇನ್ನೂ ಬುದ್ಧಿ ಕಲಿಯದ ಪಾಪಿ ಪಾಕ್​, ಬಿಸಿ ಮುಟ್ಟಿಸಲು ಮುಂದಾದ ಭಾರತ

ಅದೆಷ್ಟೇ ಬುದ್ಧಿ ಕಲಿಸಿದ್ರೂ ಪಾಕಿಸ್ತಾನ ಸರಿದಾರಿಗೆ ಬರ್ತಿಲ್ಲ. ಚೀನಾ ಜೊತೆ ಸೇರಿ ಭಾರತದ ವಿರುದ್ಧ ಹಲ್ಲುಮಸೆಯುತ್ತಿದೆ. ಹೀಗಾಗಿ ಪಾಕ್​ಗೆ ಬಿಸಿ ಮುಟ್ಟಿಸಲು ಭಾರತ ಕೂಡ ನಾನಾ ರಣತಂತ್ರ ರೂಪಿಸುತ್ತಿದೆ. ರಣತಂತ್ರ ಶಸ್ತ್ರಾಸ್ತ್ರಗಳಿಗೆ ಮಾತ್ರ ಮೀಸಲಾಗಿಲ್ಲ, ಅಂತಾರಾಷ್ಟ್ರೀಯವಾಗಿ ಪಾಪಿ ಪಾಕ್​ನ ನರಿಬುದ್ಧಿ ಪ್ರೂವ್ ಮಾಡೋದ್ರಲ್ಲೂ ಭಾರತ ಯಶ ಕಂಡಿದೆ. ಪಾಕ್​ಗೆ ಬುದ್ಧಿ ಬಂದೇ ಇಲ್ಲ:  ಪಾಪಿ ಪಾಕ್​ಗೆ ಬುದ್ಧಿ ಬಂದೇ ಇಲ್ಲ. ಭಾರತದ ಕೈಯಲ್ಲಿ ಅದೆಷ್ಟೇ ಏಟು ತಿಂದ್ರೂ ಸರಿದಾರಿಯಲ್ಲಿ ನಡೀಬೇಕು ಅನ್ನೋ ಪಾಠವನ್ನೂ ಕಲಿತಿಲ್ಲ. ಚೀನಾ ಜೊತೆ […]

ಇನ್ನೂ ಬುದ್ಧಿ ಕಲಿಯದ ಪಾಪಿ ಪಾಕ್​, ಬಿಸಿ ಮುಟ್ಟಿಸಲು ಮುಂದಾದ ಭಾರತ
Follow us
ಸಾಧು ಶ್ರೀನಾಥ್​
|

Updated on: Dec 01, 2019 | 7:06 AM

ಅದೆಷ್ಟೇ ಬುದ್ಧಿ ಕಲಿಸಿದ್ರೂ ಪಾಕಿಸ್ತಾನ ಸರಿದಾರಿಗೆ ಬರ್ತಿಲ್ಲ. ಚೀನಾ ಜೊತೆ ಸೇರಿ ಭಾರತದ ವಿರುದ್ಧ ಹಲ್ಲುಮಸೆಯುತ್ತಿದೆ. ಹೀಗಾಗಿ ಪಾಕ್​ಗೆ ಬಿಸಿ ಮುಟ್ಟಿಸಲು ಭಾರತ ಕೂಡ ನಾನಾ ರಣತಂತ್ರ ರೂಪಿಸುತ್ತಿದೆ. ರಣತಂತ್ರ ಶಸ್ತ್ರಾಸ್ತ್ರಗಳಿಗೆ ಮಾತ್ರ ಮೀಸಲಾಗಿಲ್ಲ, ಅಂತಾರಾಷ್ಟ್ರೀಯವಾಗಿ ಪಾಪಿ ಪಾಕ್​ನ ನರಿಬುದ್ಧಿ ಪ್ರೂವ್ ಮಾಡೋದ್ರಲ್ಲೂ ಭಾರತ ಯಶ ಕಂಡಿದೆ.

ಪಾಕ್​ಗೆ ಬುದ್ಧಿ ಬಂದೇ ಇಲ್ಲ:  ಪಾಪಿ ಪಾಕ್​ಗೆ ಬುದ್ಧಿ ಬಂದೇ ಇಲ್ಲ. ಭಾರತದ ಕೈಯಲ್ಲಿ ಅದೆಷ್ಟೇ ಏಟು ತಿಂದ್ರೂ ಸರಿದಾರಿಯಲ್ಲಿ ನಡೀಬೇಕು ಅನ್ನೋ ಪಾಠವನ್ನೂ ಕಲಿತಿಲ್ಲ. ಚೀನಾ ಜೊತೆ ಸೇರಿ ಒಂದಲ್ಲಾ ಒಂದು ಮಸಲತ್ತು ಮಾಡುತ್ತಿದೆ. ಅದ್ರಲ್ಲೂ ಉಗ್ರರನ್ನು ಭಾರತದ ಒಳಗೆ ನುಗ್ಗಿಸಲು ಸ್ಕೆಚ್ ಹಾಕ್ತಿದೆ. ಈ ಹೊತ್ತಲ್ಲೇ ಭಾರತ ಪಾಕ್ ಬುಡಕ್ಕೆ ಬಾಂಬ್ ಇಡಲು ಸಿದ್ಧವಾಗಿದೆ.

200 ಶಸ್ತ್ರಸಜ್ಜಿತ ವಾಹನಗಳು ಗಡಿ ಭದ್ರತೆಗೆ ಮೀಸಲು! ಚೀನಾ ಜತೆ ಕಾರಿಡಾರ್ ನೆಪದಲ್ಲಿ ಪಾಕ್ ಹೊಂಚು ಹಾಕಿ ಕೂತಿದೆ. ಉಗ್ರರನ್ನು ಭಾರತದೊಳಗೆ ನುಗ್ಗಿಸಿ, ತೊಂದರೆ ಕೊಡಲು ಸ್ಕೆಚ್ ಹಾಕಿದೆ. ಇನ್ನು ಗಡಿಯಲ್ಲೂ ಪದೇ ಪದೆ ಗುಂಡಿನ ದಾಳಿ ನಡೆಸಿ, ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಪಿಗೆ ಬುದ್ಧಿ ಕಲಿಸಲು ಮತ್ತೆ ಭಾರತ ಮುಂದಾಗಿದೆ. ಈ ಬಾರಿ ಗಡಿ ಭದ್ರ ಮಾಡಲು ರಣತಂತ್ರ ರೂಪಿಸಲಾಗಿದ್ದು, ಭಾರತ ಮತ್ತು ಪಾಕ್ ಗಡಿ ಸಂಧಿಸುವ ರಾಜಸ್ಥಾನ, ಪಂಜಾಬ್​ನಲ್ಲಿ ಸುಮಾರು 200 ಶಸ್ತ್ರಸಜ್ಜಿತ ವಾಹನಗಳನ್ನ ನೇಮಿಸಲು ಮುಂದಾಗಿದೆ.

ನೌಕಾಪಡೆಗೂ ಮರುಜೀವ ತುಂಬಲು ನಿರ್ಧಾರ: ನೌಕಾಪಡೆ ತನ್ನ ಯುದ್ಧನೌಕೆಗಳು ಮತ್ತು ಬಂದರು ರಕ್ಷಿಸಲು ಪರ್ಯಾಯ ವಿಧಾನಗಳನ್ನು ಅನ್ವೇಷಿಸುತ್ತಿದೆ. 2005ರಿಂದ ಈಚೆಗೆ ಈ ವಿಭಾಗದಲ್ಲಿ ಸೀಮಿತ ಬೆಳವಣಿಗೆ ಕಾಣಲಾಗಿದ್ದು, ಯುದ್ಧನೌಕೆಗಳ ರಕ್ಷಣೆಗೆ ಮಾನವರಹಿತ ಹಡಗುಗಳು ಹಾಗೂ ಅಂಡರ್ ವಾಟರ್ ಮಿಸೈಲ್​ಗಳ ಅಭಿವೃದ್ಧಿಗೂ ಸೇನೆ ಮುಂದಾಗಿದೆ.

ಉಗ್ರ ಪೋಷಣೆ ನಿಲ್ಲಿಸುವಂತೆ ಪಾಕ್​ಗೆ ತಾಕೀತು: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತ ಹಾಗೂ ಜಪಾನ್ ನಡುವೆ ಮಹತ್ವದ ಮಾತುಕತೆ ನಡೆದಿದೆ. ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಖಾತೆ ಮಂತ್ರಿ ಜಯಶಂಕರ್ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾಕ್​ನ ಉಗ್ರ ಪೋಷಿತ ಮನಸ್ಥಿತಿಯ ಬಗ್ಗೆ ಭಾರತ ಹಾಗೂ ಜಪಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಹಾಗೇ ಇದನ್ನ ನಿಲ್ಲಿಸುವಂತೆಯೂ ಎರಡೂ ರಾಷ್ಟ್ರಗಳು ಪಾಪಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿವೆ.

ನಾಯಿ ಬಾಲದಂತೆ ಪಾಕ್ ಕೂಡ ಬುದ್ಧಿ ಬದಲಿಸಿಕೊಳ್ಳುತ್ತಿಲ್ಲ. ಅತ್ತ ಚೀನಾ ಕೂಡ ಹಿಂದು-ಮುಂದು ನೋಡದೆ ಪಾಕ್ ಬೆಂಬಲಕ್ಕೆ ನಿಂತಿದ್ದು, ಪಾಕಿಸ್ತಾನದ ಆರ್ಥಿಕ ಸ್ಥಿತಿ ಅಭಿವೃದ್ಧಿಪಡಿಸುವ ನೆಪದಲ್ಲಿ ಭಾರತದ ವಿರುದ್ಧ ಎತ್ತಿಕಟ್ಟುತ್ತಿದೆ. ಹೀಗಾಗಿ ಪಾಕ್​ನ ಮಾನವನ್ನು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲು ಸಜ್ಜಾಗಿದೆ.