6 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದ ಜಿಡಿಪಿ

ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 4.5ರಷ್ಟಿದೆ ಅಂತ ಕೇಂದ್ರ ಸರ್ಕಾರ ಪ್ರಕಟಿಸಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಮಟ್ಟ ಶೇ.5ಕ್ಕೆ ಕುಸಿದಿತ್ತು. ಇದೀಗ ಮತ್ತೂ ಕೆಳಮಟ್ಟಕ್ಕೆ ಕುಸಿದಿದ್ದು, 6 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಜಿಡಿಪಿ ಬೆಳವಣಿಗೆ ದರ ಇಳಿದೆ. ಲಂಕಾಗೆ ₹3 ಸಾವಿರ ಕೋಟಿ ಘೋಷಣೆ: ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ 50 ಮಿಲಿಯನ್ ಅಮೆರಿಕನ್ ಡಾಲರ್ ಸೇರಿದಂತೆ ಒಟ್ಟು 3 ಸಾವಿರ ಕೋಟಿ ರೂಪಾಯಿ ನೆರವನ್ನು ಶ್ರೀಲಂಕಾಕ್ಕೆ ಘೋಷಿಸಿದ್ದಾರೆ. […]

6 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದ ಜಿಡಿಪಿ
sadhu srinath

|

Nov 30, 2019 | 7:41 AM

ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 4.5ರಷ್ಟಿದೆ ಅಂತ ಕೇಂದ್ರ ಸರ್ಕಾರ ಪ್ರಕಟಿಸಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಮಟ್ಟ ಶೇ.5ಕ್ಕೆ ಕುಸಿದಿತ್ತು. ಇದೀಗ ಮತ್ತೂ ಕೆಳಮಟ್ಟಕ್ಕೆ ಕುಸಿದಿದ್ದು, 6 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಜಿಡಿಪಿ ಬೆಳವಣಿಗೆ ದರ ಇಳಿದೆ.

ಲಂಕಾಗೆ ₹3 ಸಾವಿರ ಕೋಟಿ ಘೋಷಣೆ: ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ 50 ಮಿಲಿಯನ್ ಅಮೆರಿಕನ್ ಡಾಲರ್ ಸೇರಿದಂತೆ ಒಟ್ಟು 3 ಸಾವಿರ ಕೋಟಿ ರೂಪಾಯಿ ನೆರವನ್ನು ಶ್ರೀಲಂಕಾಕ್ಕೆ ಘೋಷಿಸಿದ್ದಾರೆ. ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆ ನಡೆಸಿ ಈ ಹಣ ಘೋಷಿಸಿದ್ದಾರೆ.

ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಡಿ.15 ತನಕ ಟೈಮ್‌: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಪಾವತಿಗಾಗಿ ಫಾಸ್ಟ್ ಟ್ಯಾಗ್‌ ಕಡ್ಡಾಯಗೊಳಿಸಿ ವಿಧಿಸಿದ್ದ ಗಡುವುನ್ನ ಡಿಸೆಂಬರ್ 15ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಫಾಸ್ಟ್‌ ಟ್ಯಾಗ್ ಅಳವಡಿಸುವಂತೆ ಡಿಸೆಂಬರ್‌ 1ರ ತನಕ ಗಡುವು ನೀಡಲಾಗಿತ್ತು. ಇದೀಗ ಈ ಗಡುವುನ್ನ ಕೇಂದ್ರ ಸರ್ಕಾರ ವಿಸ್ತರಿಸಿದೆ.

ಪರಿಸರ ಸ್ನೇಹಿ ರೈಲ್ವೆ ನಿಲ್ದಾಣ: ಪರಿಸರ ಸ್ನೇಹಿ ವಸ್ತುಗಳಲ್ಲಿ ಟೀ ಮತ್ತು ಆಹಾರ ಪದಾರ್ಥಗಳು ವಿತರಿಸಲು 25ಕ್ಕೂ ಅಧಿಕ ರೈಲ್ವೆ ನಿಲ್ದಾಣಗಳನ್ನು ಗುರುತಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿನ ಎಲ್ಲಾ ನಿಲ್ದಾಣಗಳು ಉತ್ತರ ಭಾರತಕ್ಕೆ ಸೇರಿವೆ. ದಕ್ಷಿಣ ಭಾರತದ ನಿಲ್ದಾಣಗಳು ಯಾವುದೂ ಇಲ್ಲ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada