ಪಶುವೈದ್ಯೆ ಪ್ರಿಯಾಂಕಾ ರೇಪ್-ಹತ್ಯೆ: ನಾಲ್ವರು ಅಂದರ್, ಆತಂಕಕಾರಿ ಅಂಶಗಳು ಬಯಲು
ಹೈದರಾಬಾದ್: ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಮೇಲೆ ರಂಗಾರೆಡ್ಡಿ ಜಿಲ್ಲೆ ವ್ಯಾಪ್ತಿಯ ಶಾದ್ನಗರ ಟೋಲ್ಗೇಟ್ ಬಳಿ ಎರಡು ದಿನಗಳ ಹಿಂದೆ ಗ್ಯಾಂಗ್ ರೇಪ್ ಮಾಡಿ, ಸಜೀವವಾಗಿ ದಹಿಸಿ, ಸಾಯಿಸಿದ್ದ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಮಹಿಳಾ ಆಯೋಗ ಹೈದರಾಬಾದ್ಗೆ ತಂಡವನ್ನು ಕಳುಹಿಸಿದೆ. ಪ್ರಕರಣದಲ್ಲಿ ಅನೇಕ ಆತಂಕಕಾರಿ ಅಂಶಗಳು ಬಯಲಿಗೆ ಬರುತ್ತಿವೆ. ಕುಕೃತ್ಯವನ್ನು ಮೆಹಬೂಬ್ನಗರದ ಮೊಹಮ್ಮದ್ ಪಾಷಾ ಗ್ಯಾಂಗ್ ಎಸಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಲಾರಿ ಚಾಲಕ ಮೊಹಮ್ಮದ್ […]
ಹೈದರಾಬಾದ್: ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಮೇಲೆ ರಂಗಾರೆಡ್ಡಿ ಜಿಲ್ಲೆ ವ್ಯಾಪ್ತಿಯ ಶಾದ್ನಗರ ಟೋಲ್ಗೇಟ್ ಬಳಿ ಎರಡು ದಿನಗಳ ಹಿಂದೆ ಗ್ಯಾಂಗ್ ರೇಪ್ ಮಾಡಿ, ಸಜೀವವಾಗಿ ದಹಿಸಿ, ಸಾಯಿಸಿದ್ದ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಮಹಿಳಾ ಆಯೋಗ ಹೈದರಾಬಾದ್ಗೆ ತಂಡವನ್ನು ಕಳುಹಿಸಿದೆ.
ಪ್ರಕರಣದಲ್ಲಿ ಅನೇಕ ಆತಂಕಕಾರಿ ಅಂಶಗಳು ಬಯಲಿಗೆ ಬರುತ್ತಿವೆ. ಕುಕೃತ್ಯವನ್ನು ಮೆಹಬೂಬ್ನಗರದ ಮೊಹಮ್ಮದ್ ಪಾಷಾ ಗ್ಯಾಂಗ್ ಎಸಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಲಾರಿ ಚಾಲಕ ಮೊಹಮ್ಮದ್ ಪಾಷಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಜೊಳ್ಳ ಶಿವ, ಜೊಳ್ಳ ನವೀನ್ ಮತ್ತು ಚನ್ನಕೇಶವ ಇತರೆ ಬಂಧಿತ ಆರೋಪಿಗಳು.
ಆರೋಪಿ ಪಾಷಾ, ಈ ಹಿಂದೆಯೂ ಇಂತಹುದೇ ಕುಕೃತ್ಯಗಳನ್ನ ಎಸಗಿರುವುದಾಗಿ ತಿಳಿದುಬಂದಿದೆ. ಪಾಷಾಗೆ ಈ ಮೂವರೂ ಸಾಥ್ ನೀಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಡಾ. ಪ್ರಿಯಾಂಕಾ ರೆಡ್ಡಿ ಮೈಮೇಲೆ ಸೀಮೆಎಣ್ಣೆ ಸುರಿದು, ಸಜೀವದಹನ ಮಾಡಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಅದಕ್ಕೂ ಮುನ್ನ ಗ್ಯಾಂಗ್ರೇಪ್ ನಡೆದಿರುವುದು ದೃಢಪಟ್ಟಿದೆ.
ಡಾ.ಪ್ರಿಯಾಂಕಾ ರೆಡ್ಡಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಹಿಂದಿನ ಚಕ್ರ ಪಂಕ್ಚರ್ ಆಗಿದೆ ಎಂದು ಅವರನ್ನು ಯಾಮಾರಿಸಲಾಗಿದೆ. ಆಗ ನೆರವಿಗೆ ಬಂದಿದ್ದ ಲಾರಿ ಡ್ರೈವರ್, ಕ್ಲೀನರ್ ಪ್ರಿಯಾಂಕಾ ರೆಡ್ಡಿಯನ್ನು ಲಾರಿಯಲ್ಲಿ ಅಪಹರಿಸಿ ಗ್ಯಾಂಗ್ರೇಪ್ ಮಾಡಿದ ನಂತರ, ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ್ದಾರೆ.
ಈ ಮಧ್ಯೆ, ಪ್ರಿಯಾಂಕಾ ರೆಡ್ಡಿ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯವೂ ಎದ್ದುಕಾಣುತ್ತಿದೆ. ಪೊಲೀಸರು ಸಕಾಲಕ್ಕೆ ಸ್ಪಂದಿಸಿದ್ದರೆ ಈ ಘಟನೆ ತಡೆಯಬಹುದಿತ್ತು, ನನ್ನ ಮಗಳು ನಮಗೆ ಫೋನ್ ಮಾಡಿದ ಕೂಡಲೇ 10.30ಕ್ಕೆ ನಾವು ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಸ್ಪಂದಿಸಿಲ್ಲ ಎಂದಿದ್ದಾರೆ. ಪೊಲೀಸರು ಘಟನಾ ಸ್ಥಳ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಕರಣ ದಾಖಲಿಸದೇ ಕಾಲಹರಣ ಮಾಡಿದ್ದಾರೆ ಎಂದು ಪೊಲೀಸರ ವರ್ತನೆಗೆ ಪ್ರಿಯಾಂಕಾರ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ರೆಡ್ಡಿ ತಾಯಿ ವಿಜಯಮ್ಮ ಹೇಳುವಂತೆ ಘಟನೆಗೂ ಮುನ್ನ ಪ್ರಿಯಾಂಕಾ ಭಯಭೀತಳಾಗಿ ಸೋದರಿಗೆ ಫೋನ್ ಕರೆ ಮಾಡಿದ್ದಾರೆ. ತಾನು ಏಕಾಂಗಿಯಾಗಿದ್ದು, ತನ್ನನ್ನು ಭಯ ಆವರಿಸಿದೆ ಎಂದು ಹೇಳಿಕೊಂಡಿದ್ದಾಳೆ. ಸಂಕಷ್ಟದಿಂದ ತನ್ನನ್ನು ಪಾರಾಗುವುದು ಹೇಗೆ ಎಂದು ಕೇಳಿಕೊಳ್ಳುತ್ತಾಳೆ. ಸ್ಕೂಟಿ ವಾಹನವನ್ನು ಅಲ್ಲೇ ಬಿಟ್ಟು ಬಂದುಬಿಡು, ಅಟ್ಲೀಸ್ಟ್ ಹತ್ತಿರದಲ್ಲೇ ಇರುವ ಟೋಲ್ ಬೂತ್ ಬಳಿ ಹೋಗು ಎಂದು ನಾಲ್ಕಾರು ಬಾರಿ ಸೋದರಿ ಸೂಕ್ತ ಸಲಹೆ ನೀಡಿರುವುದು ಫೋನ್ ಸಂಭಾಷಣೆ ಆಡಿಯೋದಲ್ಲಿ ತಿಳಿದುಬಂದಿದೆ.
Published On - 1:50 pm, Fri, 29 November 19