ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಠಾಕೂರ್ಬರಿ ದೇವಸ್ಥಾನಕ್ಕೆ ಬಿಜೆಪಿ ಕೇಂದ್ರ ಸಚಿವರು ಅಪಮಾನ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಗಳ ನಡೆಯುತ್ತಿದೆ. ಮತುವಾ ಸಮುದಾಯದ ದೇವಾಲಯವಾದ ಠಾಕೂರ್ಬರಿ ದೇವಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. ಬಗ್ಗೆ ವೀಡಿಯೊ ಕೂಡ ಒಂದು ವೈರಲ್ ಆಗಿದೆ. ಬಿಜೆಪಿ ನಾಯಕ ಮತ್ತು ಕೇಂದ್ರ ಬಂದರು ಮತ್ತು ಶಿಪ್ಪಿಂಗ್ ರಾಜ್ಯ ಸಚಿವ ಶಂತನು ಠಾಕೂರ್ ಅವರ ಭದ್ರತಾ ಸಿಬ್ಬಂದಿಗಳು ಬೂಟು ಹಾಕಿಕೊಂಡು ಆವರಣಕ್ಕೆ ಬಂದಿದ್ದು, ಮಹಿಳೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ರಾಜಕೀಯದ ಹೆಸರಿನಲ್ಲಿ ಠಾಕೂರ್ಬಾರಿ ದೇವಾಲಯದ ಪಾವಿತ್ರ್ಯವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಟಿಎಂಸಿ ಹಿರಿಯ ನಾಯಕ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ. ಇದು ಸಚಿವರ ನಾಚಿಕೆಗೇಡಿನ ಪ್ರದರ್ಶನ ಎಂದು ಹೇಳಿದ್ದಾರೆ.
CISF ಭದ್ರತಾ ಪಡೆಗಳು ಠಾಕೂರ್ಬರಿ ದೇವಸ್ಥಾನಕ್ಕೆ ಬೂಟುಗಳನ್ನು ಧರಿಸಿ ಬಂದಿದ್ದು ಮತ್ತು ಮಹಿಳಾ ಭಕ್ತರ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಮೂಲಕ ದೇಗುಲಕ್ಕೆ ಅಗೌರವ ತೋರಿದ ಸಚಿವ ಶಂತನು ಠಾಕೂರ್ ಅವರ ಅತಿರೇಕದ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ರಾಜಕೀಯದ ಹೆಸರಿನಲ್ಲಿ ಠಾಕೂರ್ಬರಿ ದೇವಾಲಯದ ಪವಿತ್ರತೆಯನ್ನು ಅಪವಿತ್ರಗೊಳಿಸಿದ್ದಾರೆ. ಎಂದು ಸಚಿವ ಶಂತನು ಠಾಕೂರ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
CISF ಪಡೆ ಶೂ ಹಾಕಿಕೊಂಡು ದೇವಾಲಯದ ಆವರಣವನ್ನು ಪ್ರವೇಶಿಸಿದಲ್ಲದೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ, ಜತೆಗೆ ಅವರ ಆಭರಣಗಳನ್ನು ಕಸಿದುಕೊಂಡು ಅಸಂಸದೀಯ ಭಾಷೆ ಬಳಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದು ಅಗೌರವದಿಂದ ನಡೆದುಕೊಂಡಿದ್ದರೆ. ಇದು ಪವಿತ್ರ ದೇಗುಲಕ್ಕೆ ಘೋರ ಅಪಮಾನ ಮತ್ತು ಮಹಿಳೆಯರ ಘನತೆಗೆ ಭಂಗ ಮತ್ತು ಶಾಂತಿಪ್ರಿಯ ಮತುವವರ ಮುಖಕ್ಕೆ ಕಪಾಳಮೋಕ್ಷವಾಗಿದೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಆರೋಪಿಸಿದ್ದಾರೆ.
TMC goons have attacked the Holy Shree Dham Temple; Thakurbari of the Matua Community, in front of the Police.
I request the Hon’ble Union Home Minister; Shri @AmitShah Ji & @HMOIndia to kindly intervene urgently & provide protection to the members & office bearers of the All… pic.twitter.com/lE1icS68TY— Suvendu Adhikari • শুভেন্দু অধিকারী (@SuvenduWB) June 11, 2023
ಇಂದಿನ ದಾಳಿಯು ಮತುವ ಸಮುದಾಯದ ಮೇಲಿನ ಸಿಎಂ ದ್ವೇಷಕ್ಕೆ ಮತ್ತೊಂದು ಉದಾಹರಣೆಯಾಗಿದೆ ಮತ್ತು ಅವರ ನೈಜ ಮುಖ ಬಹಿರಂಗವಾಗಿದೆ. ಠಾಕೂರ್ಬಾರಿಯಲ್ಲಿ ಸುಮಾರು 5000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದು ಭಕ್ತ ರಕ್ಷಣೆಗೆ ಅಲ್ಲ, ಟಿಎಂಸಿ ಗೂಂಡಾಗಳನ್ನು ಉಳಿಸಲು. ಈ ಘಟನೆ ಅವಮಾನದ ಮಿತಿಯನ್ನು ಮೀರಿರುವುದರಿಂದ ಸಿಎಂ ಮಮತಾ ಬ್ಯಾನರ್ಜಿ ಅವರು ಬೇಷರತ್ ಕ್ಷಮೆಯಾಚನೆ ಮಾಡಬೇಕು, ಗಾಯಾಳುಗಳು, ಬಹುತೇಕ ಮಹಿಳೆಯರು ಸೇರಿದಂತೆ ಆಸ್ಪತ್ರೆಗೆ ದಾಖಲಾಗಿದ್ದು, ಸಿಎಂ ಮತ್ತು ಅವರ ಆಪ್ತರು ಈ ವಿಷಯವನ್ನು ರಾಜಕೀಯ ಮಾಡುತ್ತಿದ್ದಾರೆ, ಇದು ರಾಜ್ಯ ಸರ್ಕಾರದ ಕೃತ್ಯವಾಗಿದೆ ಎಂದು ಕೇಂದ್ರ ಸಚಿವ ಶಾಂತನು ಠಾಕೂರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:20 am, Mon, 12 June 23