ಅದೊಂದು ಸಣ್ಣ ಕಲಹ, ಆಳಂದಿಯಲ್ಲಿ ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿಲ್ಲ: ದೇವೇಂದ್ರ ಫಡ್ನವಿಸ್
ಪುಣೆಯ ಆಳಂದಿಯಲ್ಲಿ ಭಕ್ತರು ಹಾಗೂ ಪೊಲೀಸರ ನಡುವೆ ಸಣ್ಣ ಪ್ರಮಾಣದ ಜಗಳ ನಡೆದಿದೆ, ಆದರೆ ಭಕ್ತರ ಮೇಲೆ ಲಾಠಿಚಾರ್ಜ್ ಮಾಡಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(Devendra Fadnavis) ಹೇಳಿದ್ದಾರೆ.
ಪುಣೆಯ ಆಳಂದಿಯಲ್ಲಿ ಭಕ್ತರು ಹಾಗೂ ಪೊಲೀಸರ ನಡುವೆ ಸಣ್ಣ ಪ್ರಮಾಣದ ಜಗಳ ನಡೆದಿದೆ, ಆದರೆ ಭಕ್ತರ ಮೇಲೆ ಲಾಠಿಚಾರ್ಜ್ ಮಾಡಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(Devendra Fadnavis) ಹೇಳಿದ್ದಾರೆ. ನಾಗ್ಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ವಾರಕರಿ ಸಮುದಾಯದ ಮೇಲೆ ಯಾವುದೇ ಲಾಠಿಚಾರ್ಜ್ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸರು ವಾಕರಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದಾರೆ. ಆಳಂದಿ ಪಟ್ಟಣದ ಸಂತ ಜ್ಞಾನೇಶ್ವರ ಸಮಾಧಿ ದೇವಸ್ಥಾನಕ್ಕೆ ಭಕ್ತರು ಪ್ರವೇಶಿಸಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಮತ್ತಷ್ಟು ಓದಿ: Maharashtra: ಮಹಾರಾಷ್ಟ್ರದ ಅಮಲ್ನೇರ್ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ, ಕರ್ಫ್ಯೂ ಜಾರಿ, 31 ಜನರ ಬಂಧನ
ಮಹಾರಾಷ್ಟ್ರದ ಗೃಹ ಸಚಿವರ ಜವಾಬ್ದಾರಿ ನಿಭಾಯಿಸುತ್ತಿರುವ ಫಡ್ನವಿಸ್ ಮಾತನಾಡಿ, ಕಳೆದ ವರ್ಷ ಇದೇ ಸ್ಥಳದಲ್ಲಿ ಕಾಳ್ತುಳಿತದಂತಹ ಪರಿಸ್ಥಿತಿಯಿಂದ ನಾವು ಪಾಠ ಕಲಿತಿದ್ದೇವೆ, ಪ್ರವೇಶ ಪಾಸ್ಗಳನ್ನು ನೀಡಲು ಪ್ರಯತ್ನಿಸಿದ್ದೇವೆ. ಯಾತ್ರೆಯಲ್ಲಿ ಭಾಗವಹಿಸುವ ಪ್ರತಿ ಗುಂಪಿಗೆ 75 ಪಾಸ್ಗಳನ್ನು ವಿತರಿಸಲು ನಿರ್ಧರಿಸಲಾಯಿತು, ಸುಮಾರು 400-500 ಯುವಕರು ಯಾತ್ರೆಗೆ ಸೇರುವುದಾಗಿ ಪಟ್ಟು ಹಿಡಿದಿದ್ದು ಪ್ರವೇಶಕ್ಕೆ ಹಾಕಿರುವ ನಿಯಮಗಳನ್ನು ಪಾಲಿಸಿಲ್ಲ ಎಂದಿದ್ದಾರೆ.
ಬ್ಯಾರಿಕೇಡ್ಗಳನ್ನು ಮುರಿದರು ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರು, ಈ ಸಂದರ್ಭದಲ್ಲಿ ಕೆಲವು ಪೊಲೀಸರು ಗಾಯಗೊಂಡರು, ಪರಿಸ್ಥಿತಿ ನಿಯಂತ್ರಣದಲ್ಲಿದೆ, ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡುತ್ತೇನೆ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ, ವಾರಕರಿ ಸಮುದಾಯ ಮತ್ತು ಜನರ ಸುರಕ್ಷತೆ ಎರಡು ಕೂಡ ಮುಖ್ಯ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ