ಹೈದರಾಬಾದ್: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಪೊಲೀಸ್ ಸಿಬ್ಬಂದಿ ಹತ್ಯೆ ಮಾಡಿರುವ ಭೀಕರ ಘಟನೆ ಆಂಧ್ರದ ವಿಜಯವಾಡದ ಹೊರ ವಲಯದಲ್ಲಿ ನಡೆದಿದೆ. ಮಹೇಶ ಹತ್ಯೆಗೀಡಾಗಿರೋ ದುರ್ದೈವಿ.
ತಡರಾತ್ರಿ ವಿಜಯವಾಡದ ಹೊರ ವಲಯದಲ್ಲಿನ ಬಾರೊಂದರಲ್ಲಿ ಸ್ನೇಹಿತರೊಂದಿಗೆ ಮದ್ಯ ಕುಡಿಯುತ್ತಿದ್ದ ಮಹೇಶ್ಗೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡಿದ್ದ ಮಹೇಶನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ರಸ್ತೆ ಮಧ್ಯೆ ಮೃತಪಟ್ಟಿದ್ದಾರೆ.
ಮೃತ ಮಹೇಶ್ ಆಂಧ್ರಪ್ರದೇಶದ ವಿಜಯವಾಡದ ಪೊಲೀಸ್ ಕಮಿಷನರೇಟ್ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ. ಸದ್ಯ ವಿಜಯವಾಡ ಪೊಲೀಸ್ ಕಮೀಷನರ್ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂರು ವಿಶೇಷ ತಂಡ ರಚಿಸಿ ಹಂತಕರಿಗೆ ಬಲೆ ಬೀಸಿದ್ದಾರೆ. ಈ ಕೊಲೆಗೆ ರಿಯಲ್ ಎಸ್ಟೇಟ್, ಇನ್ನಿತರೆ ಕಾರಣಗಳ ಶಂಕೆ ವ್ಯಕ್ತವಾಗಿದ್ದು, ಈ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ.