ಮಹಾರಾಷ್ಟ್ರದ (Maharashtra) ಪಾಲ್ಘರ್‌ನಲ್ಲಿ (Palghar) ಕ್ರಮವಾಗಿ ಸಂಜೆ 5:15 ಮತ್ತು 5:28 ಕ್ಕೆ ರಿಕ್ಟರ್ ಮಾಪಕದಲ್ಲಿ 3.5 ಮತ್ತು 3.3 ರ ತೀವ್ರತೆಯ ಎರಡು ಪ್ರಬಲ ಭೂಕಂಪಗಳು(Earthquake) ಸಂಭವಿಸಿವೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಹೇಳಿದೆ.ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಹೊರತಾಗಿ, ಪಾಲ್ಘರ್ ಜಿಲ್ಲಾಧಿಕಾರಿಗಳ ಕಚೇರಿ ಕೂಡಾ ಭೂಕಂಪ ವರದಿಯನ್ನು ದೃಢಪಡಿಸಿದೆ. ಇದುವರೆಗೆ ಯಾವುದೇ ಹಾನಿ ವರದಿಯಾಗಿಲ್ಲ.
Earthquake of Magnitude:3.3, Occurred on 27-05-2023, 17:15:56 IST, Lat: 20.05 & Long: 72.86, Depth: 8 Km ,Location: Palghar, Maharashtra, India for more information Download the BhooKamp App https://t.co/UjGZRzJw9V@Indiametdept @ndmaindia @Dr_Mishra1966 @Ravi_MoES @OfficeOfDrJS pic.twitter.com/qwuTbMbA1j
— National Center for Seismology (@NCS_Earthquake) May 27, 2023
ಕಳೆದ ವರ್ಷ ನವೆಂಬರ್‌ನಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಬೆಳಗ್ಗೆ 4 ಗಂಟೆಗೆ 19.95 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 72.94 ಡಿಗ್ರಿ ಪೂರ್ವ ರೇಖಾಂಶದಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪನದ ಆಳವು ನೆಲದಿಂದ 5 ಕಿಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:56 pm, Sat, 27 May 23