ಉತ್ತರ ಪ್ರದೇಶ: ಹಿಂದೂ ಯುವಕರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಇಬ್ಬರು ಮುಸ್ಲಿಂ ಯುವತಿಯರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 02, 2022 | 11:22 AM

ಅರ್ಚಕರು ಇರಮ್ ಮತ್ತು ಶಹನಾಜ್ ರನ್ನು ಶುದ್ಧೀಕರಿಸಿ ಹೆಸರುಗಳನ್ನು ಬದಲಾಯಿಸಿದ ನಂತರವೇ ಮದುವೆ ಶಾಸ್ತ್ರ ಪೂರೈಸಿದರು. ಮದುವೆ ಸಮಾರಂಭ ಪೂರ್ಣಗೊಂಡ ನಂತರ ವಧುಗಳು ಅರ್ಚಕರಿಂದ ಆಶೀರ್ವಾದ ಪಡೆದರು.

ಉತ್ತರ ಪ್ರದೇಶ: ಹಿಂದೂ ಯುವಕರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಇಬ್ಬರು ಮುಸ್ಲಿಂ ಯುವತಿಯರು!
ಹಿಂದೂ ವಿವಾಹ (ಸಾಂಕೇತಿಕ ಚಿತ್ರ)
Follow us on

ಬರೇಲಿ: ಹಿಂದೂ ಯುವಕರನ್ನು ಮದುವೆಯಾಗಲು ಇಬ್ಬರು ಮುಸ್ಲಿಂ ಯುವತಿಯರು (Muslim girls) ಹಿಂದೂ ಧರ್ಮಕ್ಕೆ ಮತಾಂತರ (covert) ಹೊಂದಿದ ಪ್ರಸಂಗ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಮದಿನಾಥ್ ನಲ್ಲಿರುವ ಅಗಸ್ತ ಮುನಿ ಆಶ್ರಮದಲ್ಲಿ ಪಂಡಿತ್ ಕೆ ಕೆ ಶಂಕಾಧರ್ ಅವರು ಹಿಂದೂ ವಿಧಿವಿಧಾನಗಳ (Hindu rituals) ಪ್ರಕಾರ ಅವರ ಮದುವೆಯನ್ನು ನೆರವೇರಿಸಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ಇರಮ್ ಜೈದಿ ಸ್ವಾತಿಯಾದರೆ ಶಹನಾಜ್ ಸುಮನ್ ಆದಳು. ಇರಮ್ ಜೈದಿಯನ್ನು ವರಿಸಿದ ಯುವಕನ ಹೆಸರು ಆದೇಶ ಕುಮಾರ್ ಮತ್ತು ಶಹನಾಜ್ ಳನ್ನು ಅಜಯ್ ಮದುವೆಯಾಗಿದ್ದಾನೆ. ಹಿಂದೂ ಧರ್ಮದ ಮೇಲೆ ತಮಗೆ ಅಪಾರ ನಿಷ್ಠೆ ಇದೆ ಎಂದು ಇರಮ್ ಮತ್ತು ಶಹನಾಜ್ ಹೇಳಿದ್ದಾರೆ.

‘ಮುಸ್ಲಿಂ ಸಮಾಜದಲ್ಲಿ ಮಹಿಳೆಯರಿಗೆ ಗೌರವ ಇಲ್ಲ. ಸಮುದಾಯದ ಪುರುಷರು ತಮಗೆ ಬೇಡವಾದಾಗ ಮೂರು ಬಾರಿ ತಲ್ಲಾಖ್ ಅಂತ ಹೇಳಿ ಮಹಿಳೆಯರಿಗೆ ವಿಚ್ಛೇದನ ನೀಡಿ ಹಲಾಲ ಸಂಸ್ಕಾರಕ್ಕೊಳಗೊಂಡು ಪುನಃ ತಾವು ವಿಚ್ಛೇದನ ನೀಡಿದ ಹೆಂಡತಿಯನ್ನು ಸೇರಿಸಿಕೊಳ್ಳುತ್ತಾರೆ,’ ಎಂದು ಯುವತಿಯರು ಹೇಳಿದ್ದಾರೆ.

ಅರ್ಚಕರು ಇರಮ್ ಮತ್ತು ಶಹನಾಜ್ ರನ್ನು ಶುದ್ಧೀಕರಿಸಿ ಹೆಸರುಗಳನ್ನು ಬದಲಾಯಿಸಿದ ನಂತರವೇ ಮದುವೆ ಶಾಸ್ತ್ರ ಪೂರೈಸಿದರು. ಮದುವೆ ಸಮಾರಂಭ ಪೂರ್ಣಗೊಂಡ ನಂತರ ವಧುಗಳು ಅರ್ಚಕರಿಂದ ಆಶೀರ್ವಾದ ಪಡೆದರು.

ಮದುವೆಯಾಗಿ ಕೆಲ ಗಂಟೆಗಳ ಬಳಿಕ ಯುವತಿಯರು ಬರೇಲಿಯ ಎಸ್ ಎಸ್ ಪಿಯನ್ನು ಭೇಟಿಯಾಗಿ ಪೋಷಕರು ಮತ್ತು ಸಹೋದರರಿಂದ ತಮಗೆ ಜೀವಭಯವಿದೆ ಎಂದು ದೂರಿದರು. ಕುಟುಂಬಸ್ಥರು ತಮಗಾಗಿ ಗೋರಿಗಳನ್ನು ತೋಡಿಟ್ಟಿದ್ದಾರೆಂಬ ಆಘಾತಕಾರಿ ಸಂಗತಿಯನ್ನೂ ಅವರು ಪೊಲೀಸ್ ಅಧಿಕಾರಿಗೆ ತಿಳಿಸಿದರು.
ಯುವತಿಯರಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:22 am, Fri, 2 December 22