Arvind Kejriwal: ನೀವೇಕೆ ಈಗ ಮಫ್ಲರ್ ಹಾಕಿಕೊಳ್ಳುತ್ತಿಲ್ಲ?; ಮಹಿಳೆಯ ಪ್ರಶ್ನೆಗೆ ಅರವಿಂದ್ ಕೇಜ್ರಿವಾಲ್ ಉತ್ತರ ಹೀಗಿತ್ತು

ರಾಜಕೀಯ ಜೀವನ ಆರಂಭಿಸಿದ ಸಂದರ್ಭದಲ್ಲಿ ಸಾದಾ ಸೀದಾ ಪ್ಯಾಂಟ್, ಶರ್ಟ್​, ತಲೆಗೊಂದು ಮಫ್ಲರ್ ಕಟ್ಟಿಕೊಂಡು, ಕನ್ನಡಕ ಹಾಕಿಕೊಂಡು ಇರುತ್ತಿದ್ದ ಅರವಿಂದ್ ಕೇಜ್ರಿವಾಲ್ ಈಗ ತಮ್ಮ ಸ್ಟೈಲ್​ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ.

Arvind Kejriwal: ನೀವೇಕೆ ಈಗ ಮಫ್ಲರ್ ಹಾಕಿಕೊಳ್ಳುತ್ತಿಲ್ಲ?; ಮಹಿಳೆಯ ಪ್ರಶ್ನೆಗೆ ಅರವಿಂದ್ ಕೇಜ್ರಿವಾಲ್ ಉತ್ತರ ಹೀಗಿತ್ತು
ಅರವಿಂದ್ ಕೇಜ್ರಿವಾಲ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 02, 2022 | 1:03 PM

ನವದೆಹಲಿ: ಅತ್ಯಂತ ಸರಳ ಉಡುಗೆಯಿಂದಲೇ ಖ್ಯಾತಿ ಗಳಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಆಮ್ ಆದ್ಮಿಗಳ ಸಿಎಂ ಎನಿಸಿಕೊಂಡವರು.  ಹಲವು ವಾರಗಳಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅರವಿಂದ್ ಕೇಜ್ರಿವಾಲ್ ದೆಹಲಿ ಮತ್ತು ಗುಜರಾತ್‌ನಲ್ಲಿ (Gujarat Assembly Elections) ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಮುಂಬರುವ ಚುನಾವಣೆಗಳಿಗೆ ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ಮತಗಳನ್ನು ಸಂಗ್ರಹಿಸಲು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಮುಂಬರುವ ಎಂಸಿಡಿ ಚುನಾವಣೆಗೆ ಅರವಿಂದ್ ಕೇಜ್ರಿವಾಲ್ ಮೈದಾನದಲ್ಲಿ ಪ್ರಚಾರ ನಡೆಸುತ್ತಿದ್ದು, ಬುಧವಾರ ದೆಹಲಿಯಲ್ಲಿ ಪಾದಯಾತ್ರೆ ನಡೆಸಿದರು. ಅಲ್ಲದೆ, ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದರು. ಅಲ್ಲಿ ಅವರು ಮಹಿಳೆಯೊಬ್ಬರೊಂದಿಗೆ ತಮಾಷೆಯ ಮಾತುಕತೆಯನ್ನು ನಡೆಸಿದರು.

ಇದನ್ನೂ ಓದಿ: ಗುಜರಾತ್​​ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿ ಗುಟ್ಟಾಗಿ ಸಹಾಯ ಮಾಡುತ್ತಿದೆ; ಅರವಿಂದ್ ಕೇಜ್ರಿವಾಲ್ ಶಾಕಿಂಗ್ ಹೇಳಿಕೆ

ಚುನಾವಣಾ ಪ್ರಚಾರಕ್ಕೆ ಬಂದಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ ಮಹಿಳೆಯೊಬ್ಬರು ಕೇಳಿದ ಪ್ರಶ್ನೆ ಇದೀಗ ಟ್ವಿಟ್ಟರ್​ನಲ್ಲೂ ವೈರಲ್ ಆಗಿದೆ. ಕೇಜ್ರಿವಾಲ್ ರಾಜಕೀಯ ಜೀವನ ಆರಂಭಿಸಿದ ಸಂದರ್ಭದಲ್ಲಿ ಅವರು ತಮ್ಮ ಉಡುಗೆಯಿಂದ ಬಹಳ ಫೇಮಸ್ ಆಗಿದ್ದರು. ಸಾದಾ ಸೀದಾ ಪ್ಯಾಂಟ್, ಶರ್ಟ್​, ತಲೆಗೊಂದು ಮಫ್ಲರ್ ಕಟ್ಟಿಕೊಂಡು, ಕನ್ನಡಕ ಹಾಕಿಕೊಂಡು ಇರುತ್ತಿದ್ದ ಅರವಿಂದ್ ಕೇಜ್ರಿವಾಲ್ ಈಗ ತಮ್ಮ ಸ್ಟೈಲ್​ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿಯಾದ ನಂತರ ಅವರು ಮಫ್ಲರ್ ಕಟ್ಟಿಕೊಳ್ಳುವುದನ್ನು ಬಿಟ್ಟಿದ್ದಾರೆ.

ಇದನ್ನೂ ಓದಿ: ಗುಜರಾತಿನಲ್ಲಿ ಅಂತಿಮ ಸುತ್ತಿನ ಪ್ರಚಾರ: ಸೂರತ್​​ನಲ್ಲಿ ನಡೆಯಲಿದೆ ಅರವಿಂದ ಕೇಜ್ರಿವಾಲ್, ಮೋದಿ ರ್ಯಾಲಿ

ಈ ಬಗ್ಗೆಯೇ ಮಹಿಳೆಯೊಬ್ಬರು ಪ್ರಶ್ನೆ ಕೇಳಿದ್ದಾರೆ. ದೆಹಲಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದ ಕೇಜ್ರಿವಾಲ್ ಅವರಿಗೆ ಮಹಿಳೆಯೊಬ್ಬರು “ಆಪ್ನೆ ಮಫ್ಲರ್ ಕ್ಯೂ ನಹೀ ಪೆಹನಾ? (ನೀವು ನಿಮ್ಮ ಮಫ್ಲರ್ ಅನ್ನು ಏಕೆ ಧರಿಸುತ್ತಿಲ್ಲ?) ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಜೋರಾಗಿ ನಕ್ಕ ಅರವಿಂದ್ ಕೇಜ್ರಿವಾಲ್, ಈಗ ದೆಹಲಿಯಲ್ಲಿ ಹೆಚ್ಚೇನೂ ಚಳಿ ಇಲ್ಲ. ಆದ್ದರಿಂದ ಮಫ್ಲರ್ ಧರಿಸಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ಅವರು ತಮ್ಮ ಬೆಂಬಲಿಗರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಅಲ್ಲಿಂದ ಮುಂದೆ ಸಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ