26/11 ಉಗ್ರ ದಾಳಿ ಕೇಂದ್ರ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿನ ದೌರ್ಬಲ್ಯವನ್ನು ಬಹಿರಂಗಪಡಿಸಿತು: ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ
ಗೃಹ ಸಚಿವಾಲಯದ ಅಡಿಯಲ್ಲಿನ ಏಜೆನ್ಸಿಗಳು ಮತ್ತು ಸಶಸ್ತ್ರ ಪಡೆಗಳ ಗುಪ್ತಚರವು ಸಾಮಾನ್ಯವಾಗಿ ಕ್ಯಾಬಿನೆಟ್ ಕಾರ್ಯದರ್ಶಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಿಳಿಸುವುದಿಲ್ಲ. ಇವು ಕೆಲವೇ ಕೆಲ ಸಂಗತಿಗಳನ್ನು ಗೃಹ ಸಚಿವಾಲಯ ಅಥವಾ ಎನ್ಎಸ್ಎಗೆ ಮಾತ್ರ ನೀಡಲು ಆದ್ಯತೆ ನೀಡುತ್ತದೆ.
ನವೆಂಬರ್ 2008 ರಲ್ಲಿ ಪಾಕಿಸ್ತಾನಿ (Pakistan) ಉಗ್ರರು ಮುಂಬೈಗೆ ಬಂದಿಳಿದಾಗ ದೇಶದ ಉನ್ನತ ನಾಗರಿಕ ಸೇವಕರಾಗಿದ್ದ ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಕೆಎಂ ಚಂದ್ರಶೇಖರ್, ದಾಳಿ ನಡೆದಾಗ “ಕೇಂದ್ರ ಮಟ್ಟದಲ್ಲಿ ಯಾರು ಏನು ಮಾಡಬೇಕೆಂಬುದರ ಬಗ್ಗೆ ನಿಜವಾದ ಸ್ಪಷ್ಟತೆ ಇರಲಿಲ್ಲ” ಎಂದು ಹೇಳಿದ್ದಾರೆ. 1998 ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಹುದ್ದೆಯ ರಚನೆಯ ನಂತರದ ಪರಿಸ್ಥಿತಿಯನ್ನು ಚಂದ್ರಶೇಖರ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ As good as my word ಎಂಬ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಎನ್‌ಎಸ್‌ಎ ಸ್ಥಾನವನ್ನು ರಚಿಸುವ ಸರ್ಕಾರದ ನಿರ್ಧಾರವು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಇಲ್ಲಿ ಸರ್ಕಾರವು ಎನ್ಎಸ್ಎ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ನಡುವೆ ಅಧಿಕಾರದ ಜವಾಬ್ದಾರಿಗಳನ್ನು ವಿತರಿಸಲು ಆಯ್ಕೆ ಮಾಡಿದೆ ಅವರು ಬರೆದಿದ್ದಾರೆ. ಇದು ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುವಲ್ಲಿ ಪಾತ್ರಗಳ ನಡುವೆ ಗೊಂದಲದ ಸಾಧ್ಯತೆಯನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.26/11 ದಾಳಿ (26/11 attacks) ಗಂಭೀರ ತುರ್ತು ಪರಿಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಉನ್ನತ ಮಟ್ಟದ ದೌರ್ಬಲ್ಯವನ್ನು ಬಹಿರಂಗಪಡಿಸಿದವು ಎಂದು ಚಂದ್ರಶೇಖರ್ ಬರೆದಿದ್ದಾರೆ.2007 ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್, ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಿದ್ದು 2011 ರವರೆಗೆ ಅವರು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
“ಗೃಹ ಸಚಿವಾಲಯದ ಅಡಿಯಲ್ಲಿನ ಏಜೆನ್ಸಿಗಳು ಮತ್ತು ಸಶಸ್ತ್ರ ಪಡೆಗಳ ಗುಪ್ತಚರವು ಸಾಮಾನ್ಯವಾಗಿ ಕ್ಯಾಬಿನೆಟ್ ಕಾರ್ಯದರ್ಶಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಿಳಿಸುವುದಿಲ್ಲ. ಇವು ಕೆಲವೇ ಕೆಲ ಸಂಗತಿಗಳನ್ನು ಗೃಹ ಸಚಿವಾಲಯ ಅಥವಾ ಎನ್ಎಸ್ಎಗೆ ಮಾತ್ರ ನೀಡಲು ಆದ್ಯತೆ ನೀಡುತ್ತದೆ. ಅದೇ ವೇಳೆ ಭಯೋತ್ಪಾದಕ ದಾಳಿ, ಹೈಜಾಕ್ ಅಥವಾ ವಿವಿಧ ರೀತಿಯ ಉಗ್ರ ದಾಳಿಯೇ ಇರಬಹುದು. ಸಾಕಷ್ಟು ಮತ್ತು ಸಮಯೋಚಿತ ಮಾಹಿತಿಯಿಲ್ಲದೆ, ಕ್ಯಾಬಿನೆಟ್ ಕಾರ್ಯದರ್ಶಿ ಇನ್ನೂ ಬಿಕ್ಕಟ್ಟಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಬರೆದಿದ್ದಾರೆ.
ಇದಲ್ಲದೆ, ಯಾವುದೇ ನೈಜ ಸಮನ್ವಯ ಕಾರ್ಯವಿಧಾನ ಇರಲಿಲ್ಲ ಎಂದು ಅವರು ಹೇಳಿದರು.
26/11 ರಂದು ನಿಜವಾದ ಬಿಕ್ಕಟ್ಟು ಉಂಟಾದಾಗ ಕೇಂದ್ರ ಮಟ್ಟದಲ್ಲಿ ಯಾರು ಏನು ಮಾಡಬೇಕೆಂಬುದರ ಬಗ್ಗೆ ನಿಜವಾದ ಸ್ಪಷ್ಟತೆ ಇರಲಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯು ಭಾರತೀಯ ಸಂವಿಧಾನದ ಅಡಿಯಲ್ಲಿ ರಾಜ್ಯದ ವಿಷಯವಾಗಿದೆ. ಕೇಂದ್ರದ ಮಧ್ಯಸ್ಥಿಕೆಯು ಸಂಬಂಧಪಟ್ಟ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಮಾತ್ರವೇ ಎಂಬುದರ ಬ್ಗಗೆ ಇಲ್ಲಿ ಗೊಂದಲವಿತ್ತು.
ನಾನು ಈ ಬಿಕ್ಕಟ್ಟು ನಿಭಾಯಿಸಲು ಶ್ರಮಿಸಿದೆ. ನನ್ನ ಬಳಿ ಯಾವುದೇ ಹಿನ್ನೆಲೆ ಮಾಹಿತಿ ಇರಲಿಲ್ಲ, ಯಾವುದೇ ಗುಪ್ತಚರ ಇನ್‌ಪುಟ್‌ಗಳಿಲ್ಲ, ತಡರಾತ್ರಿಯವರೆಗೂ ಮುಂಬೈನಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂಬುದರ ಸಂಪೂರ್ಣ ಜ್ಞಾನವೂ ಇರಲಿಲ್ಲ. .ಬಿಕ್ಕಟ್ಟಿನ ಆಯಾಮಗಳು ಮತ್ತು ಬಿಕ್ಕಟ್ಟನ್ನು ತನ್ನದೇ ಆದ ರೀತಿಯಲ್ಲಿ ನಿಭಾಯಿಸುವ ರಾಜ್ಯ ಸರ್ಕಾರದ ಸಾಮರ್ಥ್ಯದ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Fri, 2 December 22