ಚಿನ್ನವನ್ನು ಕದ್ದು ಸಾಗಿಸಲು ಈ ಬುದ್ಧಿವಂತರು ಬಳಸಿದ ತಂತ್ರವೇನು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Nov 27, 2020 | 3:54 PM

ವಿನೂತನ ರೀತಿಯಲ್ಲಿ ಚಿನ್ನವನ್ನು ಕದ್ದು ಸಾಗಿಸಲು ಮುಂದಾಗಿ ಪರಿಶೀಲನೆಯ ವೇಳೆ ಸಿಕ್ಕಿಬಿದ್ದ ಪುಣ್ಯಾತ್ಮರು... ಕಲ್ಲಿಕೋಟೆ ವಿಮಾನ ನಿಲ್ಧಾಣದಲ್ಲಿ ಘಟನೆ.

ಚಿನ್ನವನ್ನು ಕದ್ದು ಸಾಗಿಸಲು ಈ ಬುದ್ಧಿವಂತರು ಬಳಸಿದ ತಂತ್ರವೇನು ಗೊತ್ತಾ?
ಕಳ್ಳಸಾಗಣೆ ವೇಳೆ ಪತ್ತೆಯಾದ ಚಿನ್ನ
Follow us on

ಕೊಚ್ಚಿ: ಚಿನ್ನ ಕಳ್ಳಸಾಗಣೆ ತಡೆಯಲು ಭದ್ರತಾ ಪಡೆಯವರು ಎಷ್ಟೇ ಸಾಹಸಪಟ್ಟರೂ ಖದೀಮರು ಹೊಸದೊಂದು ದಾರಿ ಹುಡುಕಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು ಕೇರಳದ ಕೋಯಿಕ್ಕೋಡ್​​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ ಬರೋಬ್ಬರಿ 18 ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ತಪಾಸಣೆ ವೇಳೆ 24 ಕ್ಯಾರೆಟ್​ನ ಒಟ್ಟು 364ಗ್ರಾಂ ಚಿನ್ನ ಪತ್ತೆಯಾಗಿದ್ದು ವಿದ್ಯುತ್ ಉಪಕರಣದಲ್ಲಿ ಚಿನ್ನ ಸಿಕ್ಕಿದ್ದು ತನಿಖಾಧಿಕಾರಿಗಳಿಗೂ ಹುಬ್ಬೇರುವಂತೆ ಮಾಡಿದೆ. ವಿದ್ಯುತ್ ಉಪಕರಣ ಹಾಗೂ ಚೆಕ್​ ಇನ್​ ಬ್ಯಾಗೇಜ್​ನಲ್ಲಿ ಚಿನ್ನದ ಸ್ಕ್ರೂ ಬಳಸಿ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.