ತೆಲಂಗಾಣ, ಏಪ್ರಿಲ್ 15: ಇಬ್ಬರು ಸಹೋದರಿಯರು ಕಾರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ರಂಗಾರೆಡ್ಡಿಯಲ್ಲಿ ನಡೆದಿದೆ. ಅವರಿಬ್ಬರು ಕಾರು ಹತ್ತಿ ಕುಳಿತು ಒಂದು ಗಂಟೆಗಳೇ ಕಳೆದಿದ್ದರೂ ಯಾರೂ ಕೂಡ ಅದನ್ನು ಗಮನಿಸಿರಲಿಲ್ಲ. ತೆಲಂಗಾಣ(Telangana)ದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದಮರಗಿರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.
ತನುಶ್ರೀ, ಅಭಿನೇತ್ರಿ ಮೃತರು, ಪೋಷಕರು ಸಂಬಂಧಿಕರೊಬ್ಬರ ವಿವಾಹದ ಬಗ್ಗೆ ಚರ್ಚಿಸಲು ಮಕ್ಕಳನ್ನು ಕರೆದುಕೊಂಡು ಅಜ್ಜಿಯ ಮನೆಗೆ ಹೋಗಿದ್ದರು. ಚರ್ಚೆ ನಡೆಯುತ್ತಿರುವಾಗ ತನುಶ್ರೀ ಮತ್ತು ಅಭಿನೇತ್ರಿ ಹೊರಗೆ ಹೋಗಿ, ಕಾರಿನ ಬಾಗಿಲು ತೆರೆದು, ವಾಹನದೊಳಗೆ ಯಾರಿಗೂ ತಿಳಿಯದಂತೆ ಕುಳಿತಿದ್ದರು.
ಅವರು ಒಂದು ಗಂಟೆಗೂ ಹೆಚ್ಚು ಕಾಲ ಕಾರಿನಲ್ಲೇ ಇದ್ದರು, ಉಸಿರುಗಟ್ಟುವಿಕೆಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಪೋಷಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು ಎಂದು ವರದಿಯಾಗಿದೆ, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ, ಇದುವರೆಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ.
ಮತ್ತಷ್ಟು ಓದಿ: ಕೌಟುಂಬಿಕ ಕಲಹ: ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಕಳೆದ ವರ್ಷ ನವೆಂಬರ್‌ನಲ್ಲಿ, ಗುಜರಾತ್‌ನ ಅಮ್ರೇಲಿ ಜಿಲ್ಲೆಯ ರಾಂಧಿಯಾ ಗ್ರಾಮದಲ್ಲಿ ಮಧ್ಯಪ್ರದೇಶದ ವಲಸೆ ಕುಟುಂಬದ ನಾಲ್ವರು ಮಕ್ಕಳು ಆಕಸ್ಮಿಕವಾಗಿ ನಿಲ್ಲಿಸಿದ್ದ ಕಾರಿನೊಳಗೆ ಕುಳಿತುಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದರು .
ಎರಡರಿಂದ ಏಳು ವರ್ಷದೊಳಗಿನ ಮಕ್ಕಳು ಹತ್ತಿರದಲ್ಲಿ ಆಟವಾಡುತ್ತಿದ್ದಾಗ ಕಾರಿನ ಕೀಲಿಗಳು ಸಿಕ್ಕಿದ್ದು ಕೂಡಲೇ ಕಾರು ಹತ್ತಿ ಕುಳಿತಿದ್ದರು. ಬಾಗಿಲು ತೆರೆಯಲು ಸಾಧ್ಯವಾಗದೆ, ಅವರ ಪೋಷಕರು ಕೆಲಸದಿಂದ ಹಿಂತಿರುಗಿ ಬರುವಷ್ಟರಲ್ಲಿ ದುರಂತ ಸಾವು ಕಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ