ಇಸ್ರೇಲ್​ ಸೈನ್ಯಕ್ಕೆ ಸೇರ್ಪಡೆಯಾದ ಗುಜರಾತ್​​ ಸೋದರಿಯರು; ಸಾಧನೆಗೆ ಮೆಚ್ಚುಗೆಯ ಮಹಾಪೂರ

| Updated By: Lakshmi Hegde

Updated on: Jun 02, 2021 | 9:56 AM

ನಿಶಾ ಇಸ್ರೇಲ್​ ಸೈನ್ಯದ ಸಂವಹನ ಮತ್ತು ಸೈಬರ್​ ಭದ್ರತಾ ಇಲಾಖೆಯ ಮುಂಚೂಣಿ ಘಟಕವೊಂದರ ಮುಖ್ಯಸ್ಥೆಯಾಗಿದ್ದಾರೆ. ರಿಯಾ ಇತ್ತೀಚೆಗಷ್ಟೇ ತಮ್ಮ 12ನೇ ತರಗತಿ ಮುಗಿಸಿ ಸೈನ್ಯ ಸೇರಿಸಿದ್ದಾರೆ.

ಇಸ್ರೇಲ್​ ಸೈನ್ಯಕ್ಕೆ ಸೇರ್ಪಡೆಯಾದ ಗುಜರಾತ್​​ ಸೋದರಿಯರು; ಸಾಧನೆಗೆ ಮೆಚ್ಚುಗೆಯ ಮಹಾಪೂರ
ಗುಜರಾತ್​​ನ ಸೋದರಿಯರು
Follow us on

ಗುಜರಾತ್​​ನ ಸಹೋದರಿಯರಿಬ್ಬರು ಇಸ್ರೇಲ್​ ಸೈನ್ಯವನ್ನು ಸೇರ್ಪಡೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇವರಿಬ್ಬರಲ್ಲಿ ಒಬ್ಬರು ಇಸ್ರೇಲ್​ ಸೇನೆಯ ನಿರ್ವಹಣಾ ವಿಭಾಗದ ಮುಖ್ಯಸ್ಥಳಾಗಿದ್ದರೆ ಮತ್ತೊಬ್ಬರು ಕಮಾಂಡೋ ಆಗಿ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ತರಬೇತಿ ಮುಗಿಯುತ್ತಿದ್ದಂತೆ ಇಸ್ರೇಲ್​ ಸೇನೆಯಲ್ಲಿ ಶಾಶ್ವತ ಕಮಾಂಡೋ ಆಗಿ ನೇಮಕಗೊಳ್ಳಲಿದ್ದಾರೆ. ಸಹೋದರಿಯರು ಗುಜರಾತ್​ನ ಜುನಾಗಡ್​ ಜಿಲ್ಲೆಯವರಾಗಿದ್ದು, ಇವರ ಸಾಧನೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.

ಗುಜರಾತ್​ನ ಕೋಠಿ ಗ್ರಾಮದ ಜೀವಾಬಾಯ್​ ಜೀವಭಾಯ್ ಮುನಿಯಾಸಿಯಾ ಎಂಬುವರು ಹಲವು ವರ್ಷಗಳ ಹಿಂದೆ ತನ್ನ ಸಹೋದರನೊಂದಿಗೆ ಇಸ್ರೇಲ್​ನ ತೆಲ್​ ಅವಿವ್​ಗೆ ಹೋಗಿ ನೆಲೆಸಿದ್ದರು. ಮುನಾಸಿಯಾ ಅವರ ಸೋದರರು ಇಸ್ರೇಲ್​​ನಲ್ಲಿ ಕಿರಾಣಿ ಉದ್ಯಮ ಮಾಡುತ್ತಿದ್ದಾರೆ. ಇದೇ ಕುಟುಂಬದ ಸಹೋದರಿಯರಾದ ನಿಶಾ ಮತ್ತು ರಿಯಾ ಇಬ್ಬರೂ ಇಸ್ರೇಲ್​ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರಲ್ಲಿ ನಿಶಾ ಇಸ್ರೇಲ್​ ಸೈನ್ಯದ ಸಂವಹನ ಮತ್ತು ಸೈಬರ್​ ಭದ್ರತಾ ಇಲಾಖೆಯ ಮುಂಚೂಣಿ ಘಟಕವೊಂದರ ಮುಖ್ಯಸ್ಥೆಯಾಗಿದ್ದಾರೆ. ರಿಯಾ ಇತ್ತೀಚೆಗಷ್ಟೇ ತಮ್ಮ 12ನೇ ತರಗತಿ ಮುಗಿಸಿ ಸೈನ್ಯ ಸೇರಿಸಿದ್ದಾರೆ. ಇವರು ಸದ್ಯ ಕಮಾಂಡೋ ತರಬೇತಿ ಹಂತದಲ್ಲಿದ್ದಾರೆ.

ಇದನ್ನೂ ಓದಿ: ಮೈಸೂರು; ಒಂದು ತಿಂಗಳಲ್ಲಿ ಕೊರೊನಾಗೆ 320 ಸಾವು, ಪೋಷಕರನ್ನು ಕಳೆದುಕೊಂಡು ತಬ್ಬಲಿಯಾದ ಮಕ್ಕಳು

Published On - 9:55 am, Wed, 2 June 21