ಸಿಲಿಂಡರ್ ಸ್ಫೋಟದಿಂದ ಕುಸಿದುಬಿದ್ದ ಕಟ್ಟಡ; 7 ಮಂದಿ ಸಾವು, 14 ಜನರಿಗೆ ಗಾಯ

ಸಿಲಿಂಡರ್ ಸ್ಫೋಟದಿಂದ ಕುಸಿದುಬಿದ್ದ ಕಟ್ಟಡ; 7 ಮಂದಿ ಸಾವು, 14 ಜನರಿಗೆ ಗಾಯ
ಸಿಲಿಂಡರ್​ ಬ್ಲಾಸ್​ ಆಗಿ ಕಟ್ಟಡ ಕುಸಿತ

ಘಟನೆ ನಡೆಯುತ್ತಿದ್ದಂತೆ ಹಳ್ಳಿಗರೇ ಮುಂದಾಗಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದ್ದಾರೆ. ಗಾಯಗೊಂಡ 14 ಜನರನ್ನು ನವಾಬ್​​ಗಂಜ್​​​ನಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ.

TV9kannada Web Team

| Edited By: Lakshmi Hegde

Jun 02, 2021 | 8:51 AM

ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಎರಡಂತಸ್ತಿನ ಕಟ್ಟಡವೊಂದು ಸಂಪೂರ್ಣ ಕುಸಿದು ಬಿದ್ದು 7 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ಮೂವರು ಮಕ್ಕಳು. ಇನ್ನೂ 14 ಜನರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ವಾಜಿರ್​ಗಂಜ್​ ಏರಿಯಾದಲ್ಲಿರುವ ಟಿಕ್ರಿ ಹಳ್ಳಿಯಲ್ಲಿ ಮಂಗಳವಾರ ಮಧ್ಯರಾತ್ರಿ ಈ ದುರ್ಘಟನೆ ನಡೆದಿದೆ.

ಘಟನೆ ನಡೆಯುತ್ತಿದ್ದಂತೆ ಹಳ್ಳಿಗರೇ ಮುಂದಾಗಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದ್ದಾರೆ. ಗಾಯಗೊಂಡ 14 ಜನರನ್ನು ನವಾಬ್​​ಗಂಜ್​​​ನಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೊಂಡಾ ಎಸ್​ಪಿ ಸೇರಿ ಹಲವು ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 7 ಮಂದಿ ಮೃತಪಟ್ಟಿದ್ದಾರೆ. ಸುಮಾರು 14 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು. ಈಗ ಅವರನ್ನೆಲ್ಲ ರಕ್ಷಣೆ ಮಾಡಲಾಗಿದೆ ಎಂದು ಎಸ್​​ಪಿ ಸಂತೋಷ್​ ಕುಮಾರ್​ ಮಿಶ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಮಹಿಳೆಯರಿಗಾಗಿ ಸಿದ್ಧವಾಯ್ತು ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್

Follow us on

Related Stories

Most Read Stories

Click on your DTH Provider to Add TV9 Kannada