ಇಸ್ರೇಲ್ ಸೈನ್ಯಕ್ಕೆ ಸೇರ್ಪಡೆಯಾದ ಗುಜರಾತ್ ಸೋದರಿಯರು; ಸಾಧನೆಗೆ ಮೆಚ್ಚುಗೆಯ ಮಹಾಪೂರ
ನಿಶಾ ಇಸ್ರೇಲ್ ಸೈನ್ಯದ ಸಂವಹನ ಮತ್ತು ಸೈಬರ್ ಭದ್ರತಾ ಇಲಾಖೆಯ ಮುಂಚೂಣಿ ಘಟಕವೊಂದರ ಮುಖ್ಯಸ್ಥೆಯಾಗಿದ್ದಾರೆ. ರಿಯಾ ಇತ್ತೀಚೆಗಷ್ಟೇ ತಮ್ಮ 12ನೇ ತರಗತಿ ಮುಗಿಸಿ ಸೈನ್ಯ ಸೇರಿಸಿದ್ದಾರೆ.
ಗುಜರಾತ್ನ ಸಹೋದರಿಯರಿಬ್ಬರು ಇಸ್ರೇಲ್ ಸೈನ್ಯವನ್ನು ಸೇರ್ಪಡೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇವರಿಬ್ಬರಲ್ಲಿ ಒಬ್ಬರು ಇಸ್ರೇಲ್ ಸೇನೆಯ ನಿರ್ವಹಣಾ ವಿಭಾಗದ ಮುಖ್ಯಸ್ಥಳಾಗಿದ್ದರೆ ಮತ್ತೊಬ್ಬರು ಕಮಾಂಡೋ ಆಗಿ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ತರಬೇತಿ ಮುಗಿಯುತ್ತಿದ್ದಂತೆ ಇಸ್ರೇಲ್ ಸೇನೆಯಲ್ಲಿ ಶಾಶ್ವತ ಕಮಾಂಡೋ ಆಗಿ ನೇಮಕಗೊಳ್ಳಲಿದ್ದಾರೆ. ಸಹೋದರಿಯರು ಗುಜರಾತ್ನ ಜುನಾಗಡ್ ಜಿಲ್ಲೆಯವರಾಗಿದ್ದು, ಇವರ ಸಾಧನೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.
ಗುಜರಾತ್ನ ಕೋಠಿ ಗ್ರಾಮದ ಜೀವಾಬಾಯ್ ಜೀವಭಾಯ್ ಮುನಿಯಾಸಿಯಾ ಎಂಬುವರು ಹಲವು ವರ್ಷಗಳ ಹಿಂದೆ ತನ್ನ ಸಹೋದರನೊಂದಿಗೆ ಇಸ್ರೇಲ್ನ ತೆಲ್ ಅವಿವ್ಗೆ ಹೋಗಿ ನೆಲೆಸಿದ್ದರು. ಮುನಾಸಿಯಾ ಅವರ ಸೋದರರು ಇಸ್ರೇಲ್ನಲ್ಲಿ ಕಿರಾಣಿ ಉದ್ಯಮ ಮಾಡುತ್ತಿದ್ದಾರೆ. ಇದೇ ಕುಟುಂಬದ ಸಹೋದರಿಯರಾದ ನಿಶಾ ಮತ್ತು ರಿಯಾ ಇಬ್ಬರೂ ಇಸ್ರೇಲ್ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರಲ್ಲಿ ನಿಶಾ ಇಸ್ರೇಲ್ ಸೈನ್ಯದ ಸಂವಹನ ಮತ್ತು ಸೈಬರ್ ಭದ್ರತಾ ಇಲಾಖೆಯ ಮುಂಚೂಣಿ ಘಟಕವೊಂದರ ಮುಖ್ಯಸ್ಥೆಯಾಗಿದ್ದಾರೆ. ರಿಯಾ ಇತ್ತೀಚೆಗಷ್ಟೇ ತಮ್ಮ 12ನೇ ತರಗತಿ ಮುಗಿಸಿ ಸೈನ್ಯ ಸೇರಿಸಿದ್ದಾರೆ. ಇವರು ಸದ್ಯ ಕಮಾಂಡೋ ತರಬೇತಿ ಹಂತದಲ್ಲಿದ್ದಾರೆ.
ಇದನ್ನೂ ಓದಿ: ಮೈಸೂರು; ಒಂದು ತಿಂಗಳಲ್ಲಿ ಕೊರೊನಾಗೆ 320 ಸಾವು, ಪೋಷಕರನ್ನು ಕಳೆದುಕೊಂಡು ತಬ್ಬಲಿಯಾದ ಮಕ್ಕಳು
Published On - 9:55 am, Wed, 2 June 21