ಶೋಪಿಯಾನ್​ನಲ್ಲಿ ಎನ್​ಕೌಂಟರ್​​; ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಭದ್ರತಾ ಪಡೆ

| Updated By: Lakshmi Hegde

Updated on: Jan 23, 2022 | 9:38 AM

ಇನ್ನೊಂದೆಡೆ ಅವಂತಿಪೋರಾ ಪೊಲೀಸ್​ ಮತ್ತು ಸಿಆರ್​ಪಿಎಫ್​ ಸಿಬ್ಬಂದಿ ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಉಗ್ರನೊಬ್ಬನನ್ನು ಬಂಧಿಸಿದ್ದಾರೆ. ಈತ ಜೈಷ್​ ಇ ಮೊಹಮ್ಮದ್​ ಉಗ್ರ ಸಂಘಟನೆಗೆ ಸೇರಿದವನು.

ಶೋಪಿಯಾನ್​ನಲ್ಲಿ ಎನ್​ಕೌಂಟರ್​​; ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಭದ್ರತಾ ಪಡೆ
ಸಾಂಕೇತಿಕ ಚಿತ್ರ
Follow us on

ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ದಾಳಿಗೆ ಇಬ್ಬರು ಉಗ್ರರು ಸತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.  ಶೋಪಿಯಾನ್​​ದ ಕಿಲ್ಬಾಲ್​ ಎಂಬ ಹಳ್ಳಿಯಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿತ್ತು. ಉಗ್ರರು ಅಡಗಿದ್ದಾರೆ ಎಂದು ಅನುಮಾನ ಬಂದ ಜಾಗದಲ್ಲೆಲ್ಲ ಹುಡುಕಲಾಗಿತ್ತು.  ಆದರೆ ನಾವು ಹುಡುಕಾಟ ನಡೆಸುತ್ತಿದ್ದಾಗ, ಅಡಗಿದ್ದ ಭಯೋತ್ಪಾದಕರು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು. ಹೀಗಾಗಿ ತಿರುಗಿ ನಾವೂ ಫೈರಿಂಗ್​ ಮಾಡಿದೆವು ಎಂದು ತಿಳಿಸಿದ್ದಾರೆ. 

ಮೃತ ಭಯೋತ್ಪಾದಕರನ್ನು ಸಮೀರ್​ ಅಹ್ಮದ್ ಶಾ ಮತ್ತು ರಯೀಸ್​ ಅಹ್ಮದ್​ ಮಿರ್​ ಎಂದು ಗುರುತಿಸಲಾಗಿದೆ. ಸಮೀರ್​ ಅಹ್ಮದ್​ ಶೋಪಿಯಾನ್​ದವನಾಗಿದ್ದು, ರಯೀಸ್​ ಪುಲ್ವಾಮಾದವನಾಗಿದ್ದಾನೆ. ಇವರಿಬ್ಬರೂ ಲಷ್ಕರ್ ಇ ತೈಬಾ ಮತ್ತು ದಿ ರೆಸಿಸ್ಟನ್ಸ್​ ಫ್ರಂಟ್​  ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ ಅವಂತಿಪೋರಾ ಪೊಲೀಸ್​ ಮತ್ತು ಸಿಆರ್​ಪಿಎಫ್​ ಸಿಬ್ಬಂದಿ ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಉಗ್ರನೊಬ್ಬನನ್ನು ಬಂಧಿಸಿದ್ದಾರೆ. ಈತ ಜೈಷ್​ ಇ ಮೊಹಮ್ಮದ್​ ಉಗ್ರ ಸಂಘಟನೆಗೆ ಸೇರಿದವನು ಎನ್ನಲಾಗಿದೆ. ಈತನ ಹೆಸರು ಉಮರ್​ ಫಾರೂಕ್​ ಭಟ್​ ಎಂದು ಹೇಳಲಾಗಿದ್ದು, ಆವಂತಿಪೋರಾ ನಿವಾಸಿಯೇ ಆಗಿದ್ದಾನೆ.

ಇದನ್ನೂ ಓದಿ: ನೈಟ್ ಕರ್ಫ್ಯೂ ಸಯಮ ಬದಲಾವಣೆಗೆ ಸಿಎಂ ಬೊಮ್ಮಾಯಿಗೆ ಮನವಿ; ಶೀಘ್ರದಲ್ಲೇ 50:50 ನಿಮಯ ರದ್ದು ಸಾಧ್ಯತೆ