Parakram Diwas 2022: ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ, ಪರಾಕ್ರಮ ದಿವಸ್; ಪ್ರಧಾನಿ ಮೋದಿ, ರಾಷ್ಟ್ರಪತಿಯಿಂದ ಗೌರವ ಸಲ್ಲಿಕೆ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1897ರ ಜನವರಿ 23ರಂದು ಒಡಿಶಾದ ಕಟಕ್ನಲ್ಲಿ ಜನಿಸಿದರು. ಇವರ ತಂದೆ ಹೆಸರು ಜಾನಕಿನಾಥ್ ಬೋಸ್ ಮತ್ತು ತಾಯಿಯ ಹೆಸರು ಪ್ರಭಾವತಿ ಬೋಸ್. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾಮಿ ವಿವೇಕಾನಂದರು ತಮ್ಮ ಅಧ್ಯಾತ್ಮ ಗುರುವೆಂದು ಭಾವಿಸಿದ್ದರು.
ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವ. ಈ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಹಲವು ಗಣ್ಯರು ಅವರನ್ನು ಸ್ಮರಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ರ ಜಯಂತಿಯಂದು ನಾನು ಅವರ ಪಾದಗಳಿಗೆ ತಲೆಬಾಗುತ್ತೇನೆ. ನೇತಾಜಿಯವರು ಈ ದೇಶಕ್ಕೆ ನೀಡಿದ ಸ್ಮರಣೀಯ ಕೊಡುಗೆಗಳ ಬಗ್ಗೆ ಪ್ರತಿ ಭಾರತೀಯನೂ ಹೆಮ್ಮೆ ಪಡಬೇಕು ಎಂದು ಹೇಳಿದ್ದಾರೆ.
सभी देशवासियों को पराक्रम दिवस की ढेरों शुभकामनाएं।
नेताजी सुभाष चंद्र बोस की 125वीं जयंती पर उन्हें मेरी आदरपूर्ण श्रद्धांजलि।
I bow to Netaji Subhas Chandra Bose on his Jayanti. Every Indian is proud of his monumental contribution to our nation. pic.twitter.com/Ska0u301Nv
— Narendra Modi (@narendramodi) January 23, 2022
ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದಂದು ಇಡೀ ದೇಶ ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದೆ. ಭಾರತ ಸ್ವಾತಂತ್ರ್ಯ ಪಡೆಯಲು ಅವರು ತೆಗೆದುಕೊಂಡ ದಿಟ್ಟತನದ ನಿರ್ಧಾರಗಳು, ಆಜಾದ್ ಹಿಂದ್ಗಾಗಿ ಅವರಿಟ್ಟ ದೃಢಹೆಜ್ಜೆಗಳು, ಅವರನ್ನಿಂದು ರಾಷ್ಟ್ರದ ಐಕಾನ್ ಆಗಿ ರೂಪಿಸಿದೆ. ನೇತಾಜಿ ಅವರ ತ್ಯಾಗ ಮತ್ತು ಆದರ್ಶಗಳು ಪ್ರತಿ ಭಾರತೀಯನಿಗೂ ಸ್ಫೂರ್ತಿಯಾಗಿವೆ ಎಂದು ಹೇಳಿದ್ದಾರೆ.
India gratefully pays homage to Netaji Subhas Chandra Bose on his 125th birth anniversary. The daring steps that he took to fulfil his fierce commitment to the idea of a free India — Azad Hind — make him a national icon. His ideals and sacrifice will forever inspire every Indian.
— President of India (@rashtrapatibhvn) January 23, 2022
ಹಾಗೇ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದಂದು ನಾನು ಅವರಿಗೆ ತಲೆಬಾಗುತ್ತೇನೆ. ತಮ್ಮ ಅಸಾಧಾರಣ ದೇಶಪ್ರೇಮ, ಅದಮ್ಯ ಧೈರ್ಯ ಮತ್ತು ಅದ್ಭುತ ಮಾತುಗಳಿಂದ ಯುವಕರನ್ನು ಸಂಘಟಿಸಿ, ಪರಕೀಯರ ಆಳ್ವಿಕೆಯ ಬುನಾದಿಯನ್ನೇ ಅಲ್ಲಾಡಿಸಿದವರು. ಮಾತೃಭೂಮಿಗಾಗಿ ಅವರು ಮಾಡಿದ ಹೋರಾಟ ಯಾವಾಗಲೂ ದೇಶಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ, ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ದೇಶಾದ್ಯಂತ ಪರಾಕ್ರಮ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿಯವರ ಕೊಡುಗೆಗಳು ಸದಾ ಸ್ಮರಣೀಯ ಎಂದಿದ್ದಾರೆ.
ರಾಷ್ಟ್ರೀಯ ರಜಾ ದಿನವೆಂದು ಘೋಷಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಸುಭಾಷ್ ಚಂದ್ರ ಬೋಸ್ರ ಸ್ಮರಣೆ ಮಾಡಿದ್ದಾರೆ. ಹಾಗೇ, ನೇತಾಜಿ ಸುಭಾಷ್ ಚಂದ್ರ ಬೋಸ್ರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನ (National Holiday) ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
We again appeal to the Central Government that Netaji’s birthday be declared a National Holiday to allow the entire Nation to pay homage to the National Leader and celebrate #DeshNayakDibas in most befitting manner.(7/7)
— Mamata Banerjee (@MamataOfficial) January 23, 2022
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1897ರ ಜನವರಿ 23ರಂದು ಒಡಿಶಾದ ಕಟಕ್ನಲ್ಲಿ ಜನಿಸಿದರು. ಇವರ ತಂದೆ ಹೆಸರು ಜಾನಕಿನಾಥ್ ಬೋಸ್ ಮತ್ತು ತಾಯಿಯ ಹೆಸರು ಪ್ರಭಾವತಿ ಬೋಸ್. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾಮಿ ವಿವೇಕಾನಂದರು ತಮ್ಮ ಅಧ್ಯಾತ್ಮ ಗುರುವೆಂದು ಭಾವಿಸಿದ್ದರು. ಪ್ರಬುದ್ಧ ರಾಜಕಾರಣಿಯಾಗಿದ್ದ ಅವರು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬ್ರಿಟಿಷರಿಗೆ ತಿರುಗೇಟು ಕೊಡಲು ಆಜಾದ್ ಹಿಂದ್ ಫೌಜ್ ಎಂಬ ಮಿಲಿಟರಿ ರೆಜಿಮೆಂಟ್ ರಚಿಸಿದ್ದರು. ರಾಣಿ ಝಾನ್ಸಿ ಹೆಸರಿನಲ್ಲಿ ಮಹಿಳಾ ರೆಜಿಮೆಂಟ್ ಕೂಡ ರೂಪಿಸಿದ್ದರು. ತಮ್ಮ ವಿಭಿನ್ನ ಮಾದರಿಯ ಸ್ವಾತಂತ್ರ್ಯ ಹೋರಾಟದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಲಕ್ಷಾಂತರ ಯುವಕರಿಗೆ ಮಾದರಿಯಾಗಿದ್ದಾರೆ. ಅವರ ಜನ್ಮದಿನವನ್ನು 2021ರಿಂದ ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತಿದೆ.
ಇದನ್ನೂ ಓದಿ: Republic Day 2022: ಇಂದು ಪ್ರಧಾನಿ ಮೋದಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ರ ಹೊಲೋಗ್ರಾಮ್ ಪ್ರತಿಮೆ ಅನಾವರಣ