ಕೇಜ್ರಿವಾಲ್​​ಗೆ ಭರವಸೆ; ನಾವೆಲ್ಲರೂ ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಒಟ್ಟಾಗಿ ಬಂದಿದ್ದೇವೆ ಎಂದ ಉದ್ಧವ್ ಠಾಕ್ರೆ

|

Updated on: May 24, 2023 | 4:17 PM

ನಾವೆಲ್ಲರೂ ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಒಟ್ಟಾಗಿ ಬಂದಿದ್ದೇವೆ. ನಮ್ಮನ್ನು 'ವಿರೋಧ' ಪಕ್ಷಗಳು ಎಂದು ಕರೆಯಬಾರದು ಎಂದು ನಾನು ಭಾವಿಸುತ್ತೇನೆ, ವಾಸ್ತವವಾಗಿ, ಅವರು (ಕೇಂದ್ರವನ್ನು) 'ವಿರೋಧ' ಎಂದು ಕರೆಯಬೇಕು ಏಕೆಂದರೆ ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎಂದ ಠಾಕ್ರೆ

ಕೇಜ್ರಿವಾಲ್​​ಗೆ ಭರವಸೆ; ನಾವೆಲ್ಲರೂ ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಒಟ್ಟಾಗಿ ಬಂದಿದ್ದೇವೆ ಎಂದ ಉದ್ಧವ್ ಠಾಕ್ರೆ
ಕೇಜ್ರಿವಾಲ್ ಜತೆ ಉದ್ಧವ್ ಠಾಕ್ರೆ
Follow us on

ಮುಂಬೈ: ದೆಹಲಿಯ ಅಧಿಕಾರಿಗಳನ್ನು ನಿಯಂತ್ರಿಸುವ ಸರ್ಕಾರದ ವಿಶೇಷ ಆದೇಶವನ್ನು ತಡೆಯಲು ಆಮ್ ಆದ್ಮಿ ಪಕ್ಷಕ್ಕೆ (AAP) ಸಹಾಯ ಮಾಡುವುದಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಭರವಸೆ ನೀಡಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಬುಧವಾರ ಹೇಳಿದ್ದಾರೆ. ಉಭಯ ನಾಯಕರು ಮುಂಬೈನಲ್ಲಿ ಠಾಕ್ರೆ ನಿವಾಸ ಮಾತೋಶ್ರೀಯಲ್ಲಿ ಭೇಟಿಯಾದರು. ಅಲ್ಲಿ ಕೇಜ್ರಿವಾಲ್ ಜತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಎಎಪಿ ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಮತ್ತು ದೆಹಲಿ ಸಚಿವೆ ಅತಿಶಿ ಕೂಡಾ ಇದ್ದರು.

ಸಂಸತ್ತಿನಲ್ಲಿ ನಮ್ಮನ್ನು ಬೆಂಬಲಿಸುವುದಾಗಿ ಉದ್ಧವ್ ಠಾಕ್ರೆ ಭರವಸೆ ನೀಡಿದ್ದಾರೆ. ಈ ಮಸೂದೆ (ಸುಗ್ರೀವಾಜ್ಞೆ) ಸಂಸತ್ತಿನಲ್ಲಿ ಅಂಗೀಕಾರವಾಗದಿದ್ದರೆ 2024 ರಲ್ಲಿ ಮೋದಿ ಸರ್ಕಾರವು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

ನಾವೆಲ್ಲರೂ ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಒಟ್ಟಾಗಿ ಬಂದಿದ್ದೇವೆ. ನಮ್ಮನ್ನು ‘ವಿರೋಧ’ ಪಕ್ಷಗಳು ಎಂದು ಕರೆಯಬಾರದು ಎಂದು ನಾನು ಭಾವಿಸುತ್ತೇನೆ, ವಾಸ್ತವವಾಗಿ, ಅವರು (ಕೇಂದ್ರವನ್ನು) ‘ವಿರೋಧ’ ಎಂದು ಕರೆಯಬೇಕು ಏಕೆಂದರೆ ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎಂದು ಹೇಳಿದ್ದಾರೆ.


ಮಂಗಳವಾರ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಎಎಪಿಯ ಹೋರಾಟಕ್ಕೆ ಬೆಂಬಲವನ್ನು ಸಂಗ್ರಹಿಸಲು ತಮ್ಮ ರಾಷ್ಟ್ರವ್ಯಾಪಿ ಪ್ರವಾಸದ ಭಾಗವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾದಲ್ಲಿ ಭೇಟಿಯಾದರು. ಕೇಜ್ರಿವಾಲ್‌ಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಬ್ಯಾನರ್ಜಿ, 2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯನ್ನು ಸೋಲಿಸಲು ನಮಗೆ ಅವಕಾಶ ನೀಡುವುದಾಗಿ ಹೇಳಿದರು. “ಕೇಂದ್ರ ಸುಗ್ರೀವಾಜ್ಞೆಯ ವಿರುದ್ಧದ ಹೋರಾಟದಲ್ಲಿ ನಾವು ಆಮ್ ಆದ್ಮಿ ಪಕ್ಷವನ್ನು (ಎಎಪಿ) ಬೆಂಬಲಿಸುತ್ತೇವೆ.ಬಿಜೆಪಿಯ ಕಾನೂನಿಗೆ ಮತ ಹಾಕದಂತೆ ಎಲ್ಲಾ ಪಕ್ಷಗಳಿಗೆ ವಿನಂತಿಸುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿದ ಅರವಿಂದ ಕೇಜ್ರಿವಾಲ್; ಕೇಂದ್ರ ಸುಗ್ರೀವಾಜ್ಞೆ ವಿರುದ್ಧದ ಹೋರಾಟದಲ್ಲಿ ಎಎಪಿಗೆ ಟಿಎಂಸಿ ಬೆಂಬಲ

ದೆಹಲಿಯಲ್ಲಿ ಗ್ರೂಪ್-ಎ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗೆ ಅಧಿಕಾರವನ್ನು ರಚಿಸಲು ಕೇಂದ್ರವು ಶುಕ್ರವಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಸೇವೆಗಳ ನಿಯಂತ್ರಣದ ಕುರಿತು ಅದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಎಂದು ಎಎಪಿ ಹೇಳಿದೆ.

ಅಧಿಕಾರಿಗಳ  ಮೇಲೆ ನಗರ-ರಾಜ್ಯದ ಚುನಾಯಿತ ಸರ್ಕಾರದ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ತೀರ್ಪಿನ ಕೆಲವೇ ದಿನಗಳ ನಂತರ ಕೇಂದ್ರವು ಮೇ 19 ರಂದು ಹೊರಡಿಸಿದ ಸುಗ್ರೀವಾಜ್ಞೆ  ಲೆಫ್ಟಿನೆಂಟ್ ಗವರ್ನರ್ ಸ್ಥಾನವನ್ನು ಬಲಪಡಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ