ಅದೇ ಕಾಂಟ್ರಾಕ್ಟರ್…! ಅಂದು ಒಂದು ಸೇತುವೆ ಮಳೆಗೆ ಬಲಿ, ಇಂದು ಮತ್ತೊಂದು ಸೇತುವೆ ಗಾಳಿಗೆ ಬಲಿ

Telangana bridge collapse: ಕಳೆದ ಐದಾರು ವರ್ಷದಿಂದ ಕಾಮಗಾರಿ ನಿಂತುಹೋಗಿದ್ದ ನಿರ್ಮಾಣ ಹಂತದ ಸೇತುವೆಯೊಂದು ಪ್ರಬಲ ಗಾಳಿಗೆ ಪತನಗೊಂಡ ಘಟನೆ ತೆಲಂಗಾಣದ ಪೆದ್ದಪ್ಪಲ್ಲಿ ಜಿಲ್ಲೆಯಲ್ಲಿ ಏಪ್ರಿಲ್ 22, ಸೋಮವಾರ ರಾತ್ರಿ ಸಂಭವಿಸಿದೆ. 2016ರಲ್ಲಿ ಈ 1 ಕಿಮೀ ಉದ್ದದ ಸೇತುವೆ ನಿರ್ಮಾಣಕ್ಕೆ ಚಾಲನೆ ಕೊಡಲಾಗಿತ್ತು. ಎರಡು ವರ್ಷದಲ್ಲಿ ಕಾರಣಾಂತರದಿಂದ ಗುತ್ತಿಗೆದಾರ ಕೆಲಸ ನಿಲ್ಲಿಸಿದ್ದ. ಇದೇ ಗುತ್ತಿಗೆದಾರ ನಿರ್ಮಿಸಿದ್ದ ಮತ್ತೊಂದು ಸೇತುವೆ 2021ರಲ್ಲಿ ಮಹಾಮಳೆಗೆ ಕೊಚ್ಚಿಹೋಗಿತ್ತು.

ಅದೇ ಕಾಂಟ್ರಾಕ್ಟರ್...! ಅಂದು ಒಂದು ಸೇತುವೆ ಮಳೆಗೆ ಬಲಿ, ಇಂದು ಮತ್ತೊಂದು ಸೇತುವೆ ಗಾಳಿಗೆ ಬಲಿ
ಸೇತುವೆ ಕುಸಿತ

Updated on: Apr 23, 2024 | 7:11 PM

ಹೈದರಾಬಾದ್, ಏಪ್ರಿಲ್ 23: ತೆಲಂಗಾಣದ ಪೆದ್ದಪ್ಪಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು (under construction bridge) ಗಾಳಿಗೆ ಕುಸಿದ ಘಟನೆ ಬೆಳಕಿಗೆ ಬಂದಿದೆ. ಸೇತುವೆ ಎರಡು ಪಿಲ್ಲರ್ ನಡುವೆ ಇದ್ದ ಐದು ಕಾಂಕ್ರೀಟ್ ಸ್ಲ್ಯಾಬ್​ಗಳ ಪೈಕಿ ಎರಡು ಸ್ಲ್ಯಾಬ್​​ಗಳು (concrete girders) ಕುಸಿದಿವೆ. ಸೋಮವಾರ ರಾತ್ರಿ 9:45ಕ್ಕೆ ಈ ಘಟನೆ ಸಂಭವಿಸಿದೆ. ಬಲವಾಗಿ ಗಾಳಿ ಬೀಸಿದ ಪರಿಣಾಮ ನಿರ್ಮಾಣ ಹಂತದ ಈ ಸೇತುವೆ ಭಾಗಶಃ ಕುಸಿದಿರುವುದು ಗೊತ್ತಾಗಿದೆ. ಇನ್ನುಳಿದ ಭಾಗವೂ ಕೂಡ ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸ್ವಲ್ಪದರಲ್ಲೇ ಉಳಿದ 65 ಜನರ ಪ್ರಾಣ…

ಈ ಸೇತುವೆ ಕುಸಿಯುವ ಒಂದು ನಿಮಿಷ ಮುಂಚೆಯಷ್ಟೇ ಬಸ್ಸೊಂದು ಕೆಳಗೆ ಹಾದು ಹೋಗಿತ್ತು. ಮದುವೆ ಕಾರ್ಯಕ್ರಮದ ಈ ಬಸ್ಸಿನಲ್ಲಿ 65 ಜನರು ಪ್ರಯಾಣಿಸುತ್ತಿದ್ದರು. ಅದೃಷ್ಟಕ್ಕೆ ಈ ಬಸ್ ಸಾಗಿ ಹೋದ ಬಳಿಕ ಸೇತುವೆ ಕುಸಿದಿದೆ.

ಇದನ್ನೂ ಓದಿ: OYO ರೂಮ್ ಮುಚ್ಚಿಸಿದ್ದೀರಾ, ಈಗ ನಮಗೆ ನೀವೇ ರೂಮ್​​​ ನೀಡಿ ಶಾಸಕರ ಮುಂದೆ ಬೇಡಿಕೆಯಿಟ್ಟ ಲವರ್ಸ್​​

ಎಂಟು ವರ್ಷದ ಹಿಂದೆ 2016ರಲ್ಲಿ ಒಂದು ಕಿಮೀ ಉದ್ದದ ಈ ಸೇತುವೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. 49 ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಯೋಜನೆ ಇದು. ಭೂಪಾಲಪಲ್ಲಿಯ ಗರಮಿಲ್ಲಪಲ್ಲು ಮತ್ತು ಪೆದ್ದಪಲ್ಲಿಯ ಓದೇದೇಡು ಸ್ಥಳವನ್ನು ಈ ಸೇತುವೆ ಸಂಪರ್ಕಿಸುತ್ತದೆ.

ಒಂದು ವರ್ಷದ ಹಿಂದೆಯೇ ಇದರ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಯೋಜನೆಯ ಗುತ್ತಿಗೆದಾರ ಒಂದೆರಡು ವರ್ಷದಲ್ಲೇ ಕೆಲಸ ನಿಲ್ಲಿಸಿದ್ದ ಎನ್ನಲಾಗಿದೆ. ಸ್ಥಳೀಯರ ಪ್ರಕಾರ ಅಧಿಕಾರಿಗಳು ಕಮಿಷನ್​ಗಾಗಿ ಈತನ ಮೇಲೆ ಒತ್ತಾಯ ಹೇರಿದ್ದರು. ಮಾಡಿದ ಕಾಮಗಾರಿಗೆ ಸರ್ಕಾರದಿಂದಲೂ ಈತನಿಗೆ ಹಣ ಬಂದಿರಲಿಲ್ಲ. ಹೀಗಾಗಿ, ಈ ಕಾಂಟ್ರಾಕ್ಟರ್ ಕಾಮಗಾರಿಯನ್ನು ನಿಲ್ಲಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಬಸ್​ನಲ್ಲಿ ಕರ್ಚೀಫ್​ ಹಾಕಿ ಸೀಟು ಹಿಡಿದಂತಲ್ಲ ರಾಜಕಾರಣ: ಸ್ಮೃತಿ ಇರಾನಿ

ಕುತೂಹಲ ಎಂದರೆ ಇದೇ ಗುತ್ತಿಗೆದಾರ ವೇಮುಲವಾಡದಲ್ಲಿ ಕಟ್ಟಿದ ಸೇತುವೆಯೊಂದು 2021ರಲ್ಲಿ ಭಾರೀ ಮಳೆಯಲ್ಲಿ ಕುಸಿದುಹೋಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ