ಗೋಧಿ ಸೇರಿದಂತೆ ಆರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Oct 18, 2022 | 2:12 PM

ಪ್ರತಿ ಕ್ವಿಂಟಾಲ್‌ಗೆ 500 ರೂ.ಗೆ ಬೇಳೆ (ಮಸೂರ್) ಗೆ ಎಂಎಸ್‌ಪಿಯಲ್ಲಿ ಸಂಪೂರ್ಣ ಗರಿಷ್ಠ ಹೆಚ್ಚಳವನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಗೋಧಿ ಸೇರಿದಂತೆ ಆರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ
ಅನುರಾಗ್ ಠಾಕೂರ್
Follow us on

2023-24 ರ ಮಾರ್ಕೆಟಿಂಗ್ ಋತುವಿಗಾಗಿ ಎಲ್ಲಾ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಕೇಂದ್ರ ಸಂಪುಟ ಅನುಮೋದಿಸಿದೆ. ಪ್ರತಿ ಕ್ವಿಂಟಾಲ್‌ಗೆ 500 ರೂ.ಗೆ ಬೇಳೆ (ಮಸೂರ್) ಗೆ ಎಂಎಸ್‌ಪಿಯಲ್ಲಿ ಸಂಪೂರ್ಣ ಗರಿಷ್ಠ ಹೆಚ್ಚಳವನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಬೇಳೆ (ಮಸೂರ್)ಗೆ ಎಂಎಸ್‌ಪಿ ಕ್ವಿಂಟಲ್‌ಗೆ ಗರಿಷ್ಠ 500 ರೂ. ರೇಪ್ಸೀಡ್ (ಸಾಸಿವೆ ಜಾತಿಗೆ ಸೇರಿದ ಕಾಳು) ಮತ್ತು ಸಾಸಿವೆಯನ್ನು 400 ರೂ.ಗಳಷ್ಟು ಹೆಚ್ಚಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆ  ಎಂದರೆ  ಸರ್ಕಾರವು ರೈತರಿಂದ ಧಾನ್ಯವನ್ನು ಖರೀದಿಸುವ ದರವಾಗಿದೆ. ಪ್ರಸ್ತುತ, ಸರ್ಕಾರವು ಖಾರಿಫ್ ಮತ್ತು ರಾಬಿ ಋತುಗಳಲ್ಲಿ ಬೆಳೆಯುವ 23 ಬೆಳೆಗಳಿಗೆ ಕನಿಷ್ಠ  ಬೆಂಬಲ ಬೆಲೆ ಗಳನ್ನು ನಿಗದಿಪಡಿಸುತ್ತದೆ

ಖಾರಿಫ್ (ಬೇಸಿಗೆ) ಬೆಳೆಗಳ ಕೊಯ್ಲು ಮಾಡಿದ ತಕ್ಷಣ ರಾಬಿ (ಚಳಿಗಾಲ) ಬೆಳೆಗಳ ಬಿತ್ತನೆ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದೆ. ಪ್ರಮುಖ ರಾಬಿ ಬೆಳೆಗಳೆಂದರೆ ಗೋಧಿ ಮತ್ತು ಸಾಸಿವೆ. ಅಧಿಕೃತ ಪ್ರಕಟಣೆ ಪ್ರಕಾರ, 2022-23 ಬೆಳೆ ವರ್ಷ (ಜುಲೈ-ಜೂನ್) ಮತ್ತು 2023-24 ಮಾರುಕಟ್ಟೆ ಋತುವಿಗಾಗಿ ಆರು ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವನ್ನು CCEA ಅನುಮೋದಿಸಿದೆ. 2021-22ರ ಬೆಳೆ ವರ್ಷದಲ್ಲಿ ಕ್ವಿಂಟಲ್‌ಗೆ 2,015 ರೂ.ಗಳಿಂದ ಈ ಬೆಳೆ ವರ್ಷಕ್ಕೆ ಗೋಧಿ ಎಂಎಸ್‌ಪಿಯನ್ನು 110 ರೂ.ನಿಂದ 2,125 ರೂ.ಗೆ ಹೆಚ್ಚಿಸಲಾಗಿದೆ. ಗೋಧಿ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಲ್‌ಗೆ 1,065 ರೂ ಎಂದು ಅಂದಾಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಂತರ  ಕೇಂದ್ರದ ನಿರ್ಧಾರಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅನುರಾಗ್ ಠಾಕೂರ್, ಗೋಧಿಯ ಎಂಎಸ್‌ಪಿಯನ್ನು ₹110, ಬಾರ್ಲಿ ₹100, ಬೇಳೆ ₹105, ಬೇಳೆ ಅಥವಾ ಮಸೂರ್ ₹500, ರೇಪ್‌ಸೀಡ್ ಮತ್ತು ಸಾಸಿವೆ ₹400 ಮತ್ತು ಸೂರ್ಯಕಾಂತಿ ಬೀಜ ₹209 ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

Published On - 1:17 pm, Tue, 18 October 22