National Education Plan: ಕೇಂದ್ರ ಶಿಕ್ಷಣ ಸಚಿವರಿಂದ SARTHAQಗೆ ಚಾಲನೆ

ಕೇಂದ್ರ ಶಿಕ್ಷಣ ಸಚಿವ ರಮೇಶ್ ಕುಮಾರ್ ಪೋಖ್ರಿಯಾಲ್ ಅವರು Students and Teachers Holistic Advancement through Quality Education -SARTHAQಗೆ ಚಾಲನೆ ನೀಡಿದ್ದಾರೆ. ಏನಿದು ಕಾರ್ಯಕ್ರಮ ಎಂಬ ಮಾಹಿತಿ ಈ ಲೇಖನದಲ್ಲಿದೆ.

National Education Plan: ಕೇಂದ್ರ ಶಿಕ್ಷಣ ಸಚಿವರಿಂದ  SARTHAQಗೆ ಚಾಲನೆ
ರಮೇಶ್ ಪೋಖ್ರಿಯಾಲ್ (ಸಂಗ್ರಹ ಚಿತ್ರ)
Follow us
Srinivas Mata
|

Updated on: Apr 10, 2021 | 7:58 PM

ಕೇಂದ್ರ ಶಿಕ್ಷಣ ಸಚಿವ ರಮೇಶ್ ಕುಮಾರ್ ಪೋಖ್ರಿಯಾಲ್ ನಿಶಾಂಕ್ ಅವರು ಸ್ಟೂಡೆಂಟ್ಸ್ ಅಂಡ್ ಟೀಚರ್ಸ್ ಹೋಲಿಸ್ಟಿಕ್ ಅಡ್ವಾನ್ಸ್​ಮೆಂಟ್ ಥ್ರೂ ಕ್ವಾಲಿಟಿ ಎಜುಕೇಷನ್ (Students and Teachers Holistic Advancement through Quality Education -SARTHAQ) ಯೋಜನೆಯನ್ನು ಪರಿಚಯಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಅಡಿಯಲ್ಲಿ ಶಾಲಾ ಶಿಕ್ಷಣಕ್ಕಾಗಿ ಇದನ್ನು ತಂದಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಇದರ ಜತೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸುರಕ್ಷಿತ, ಸುಭದ್ರ, ಒಳಗೊಳ್ಳುವ ಮತ್ತು ಸಮಗ್ರ ಕಲಿಕೆ ವಾತಾವರಣವನ್ನು ಸೃಷ್ಟಿಸಿಕೊಡುವ ಗುರಿ ಕೂಡ ಇದೆ.

ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಪೋಖ್ರಿಯಾಲ್ ಬರೆದಿರುವಂತೆ, SARTHAQ ಕಾರ್ಯಕ್ರಮದ ಮುಖ್ಯ ಉದ್ದೇಶ ಏನೆಂದರೆ, ಗುರಿಗಳು, ಫಲಿತಾಂಶ ಮತ್ತು ಸಮಯಾವಧಿಯನ್ನು ಸ್ಪಷ್ಟಪಡಿಸುವುದು. ಇದರ ಜತೆಗೆ ಆಯಾ ಜವಾಬ್ದಾರಿಯುತ ಸಂಸ್ಥೆಗಳೊಂದಿಗೆ 297 ಕಾರ್ಯಗಳನ್ನು, ಸಮಯಾವಧಿ ಮತ್ತು 304 ಫಲಿತಾಂಶವನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರತಿ ಶಿಫಾರಸು ಜೋಡಣೆ ಮಾಡಲಿದೆ.

ಕೇಂದ್ರ ಸಚಿವರು ಮತ್ತೊಂದು ಟ್ವೀಟ್ ಮಾಡಿದ್ದು, ಈಗಾಗಲೇ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದು ಸೂಚನಾತ್ಮಕವಾಗಿ ಇರಲಿದೆ. ಇದು ಆಯಾ ಕಾಲಕ್ಕೆ ಅಭಿಪ್ರಾಯಗಳ ಅನುಸಾರವಾಗಿ ಬದಲಾವಣೆ ಆಗುತ್ತಿರುತ್ತದೆ ಎಂದಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಈ ಕೆಳಗಿನ ಗುರಿಗಳನ್ನು ಪೂರೈಸಲು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ: – ಶಾಲಾ ಶಿಕ್ಷಣಕ್ಕಾಗಿ ಹೊಸ ರಾಷ್ಟ್ರೀಯ ಮತ್ತು ರಾಜ್ಯ ಪಠ್ಯಕ್ರಮದ ಚೌಕಟ್ಟು ರೂಪಿಸುತ್ತದೆ. ಬಾಲ್ಯದ ಕಾಳಜಿ ಮತ್ತು ಶಿಕ್ಷಣ ಸೇರಿದಂತೆ ಪಠ್ಯಕ್ರಮ ಸುಧಾರಣೆಗಳಿಗೆ ಇದು ದಾರಿ ಮಾಡಿಕೊಡುತ್ತದೆ. – ಎಲ್ಲ ಹಂತದಲ್ಲೂ ಮಕ್ಕಳ ನೋಂದಣಿ ಪ್ರಮಾಣ ಜಾಸ್ತಿ ಆಗುವ ಕಡೆಗೆ ಮತ್ತು ಶಾಲೆ ಬಿಡುವ ಮತ್ತು ಆಚೆ ಉಳಿಯುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವ ಕಡೆಗೂ ಈ ಕಾರ್ಯಕ್ರಮ ಗಮನ ನೀಡುತ್ತದೆ – ಈ ಮೂಲಕ ECCE ಗುಣಮಟ್ಟದ ಅರ್ಹತೆಗೆ ಮತ್ತು ಸರ್ವಮಾನ್ಯ ಮೂಲ ಸಾಕ್ಷರತೆ ಮತ್ತು ಸಂಖ್ಯಾದೃಷ್ಟಿಯಿಂದ ಗ್ರೇಡ್ 3ಕ್ಕೆ ಏರಿಸುವ ಗುರಿ ಇದೆ. – ವೃತ್ತಿಪರ ಶಿಕ್ಷಣ, ಕ್ರೀಡೆ, ಕಲೆ, ಭಾರತದ ಬಗ್ಗೆ ಜ್ಞಾನ, 21ನೇ ಶತಮಾನದ ಕೌಶಲ, ನಾಗರಿಕತೆ ಮೌಕ್ಯಗಳು, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಂಥದ್ದನ್ನು ಜಾರಿಗೊಳಿಸುತ್ತದೆ. – ಪ್ರಾಯೋಗಿಕ ಶಿಕ್ಷಣದ ಮೇಲೆ ಗಮನ ಹರಿಸುತ್ತದೆ. – ಶಿಕ್ಷಕರ ಶಿಕ್ಷಣ ಕಾರ್ಯಕ್ರಮ ಗುಣಮಟ್ಟದ ವೃದ್ಧಿ ಕೂಡ ಮಾಡುತ್ತದೆ.

ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ವಾಸ್ತವ ಹಾಗೂ ಭವಿಷ್ಯದ ವೈವಿಧ್ಯಮಯ ಸವಾಲುಗಳನ್ನು ಮುಟ್ಟುವ ಉದ್ದೇಶವನ್ನು SARTHAQ ಹೊಂದಿದೆ. 21ನೇ ಶತಮಾನದ ಕೌಶಲಗಳ ಜತೆಗೆ ಭಾರತದ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯವನ್ನು ತಿಳಿಸುವ ಗುರಿ ಇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೀಗಿರುತ್ತದೆ

(Union Education Minister Ramesh Kumar Pokhriyal Launches Students and Teachers Holistic Advancement through Quality Education SARTHAQ Programme. Here are the details.)

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ