ಮೂಲ ವೇತನ, ಕಾರ್ಮಿಕ ಸಂಹಿತೆಗಳ ಬದಲಾವಣೆ ಬಗ್ಗೆ ಸದ್ಯದಲ್ಲೇ ಹೊಸ ನಿಯಮ ಜಾರಿ; ಕೇಂದ್ರ ಸಚಿವ ಮಾಹಿತಿ

| Updated By: ಸುಷ್ಮಾ ಚಕ್ರೆ

Updated on: Jul 16, 2022 | 10:38 AM

ಬಹುತೇಕ ಎಲ್ಲಾ ರಾಜ್ಯಗಳು ನಾಲ್ಕು ಲೇಬರ್ ಕೋಡ್‌ಗಳ ಕರಡು ನಿಯಮಗಳನ್ನು ಅಂತಿಮಗೊಳಿಸಿವೆ. ನಾವು ಸೂಕ್ತ ಸಮಯದಲ್ಲಿ ಎಲ್ಲ ರಾಜ್ಯಗಳಲ್ಲೂ ಒಂದೇ ಬಾರಿಗೆ ಈ ಸಂಹಿತೆಗಳನ್ನು ಜಾರಿಗೊಳಿಸುತ್ತೇವೆ ಎಂದು ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ

ಮೂಲ ವೇತನ, ಕಾರ್ಮಿಕ ಸಂಹಿತೆಗಳ ಬದಲಾವಣೆ ಬಗ್ಗೆ ಸದ್ಯದಲ್ಲೇ ಹೊಸ ನಿಯಮ ಜಾರಿ; ಕೇಂದ್ರ ಸಚಿವ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಭಾರತದ ಬಹುತೇಕ ಎಲ್ಲಾ ರಾಜ್ಯಗಳು ನಾಲ್ಕು ಕಾರ್ಮಿಕ ಸಂಹಿತೆಗಳ ( labour codes) ಕರಡು ನಿಯಮಗಳನ್ನು ಸಿದ್ಧಪಡಿಸಿದ್ದು, ಸೂಕ್ತ ಸಮಯದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ (Minister Bhupender Yadav) ಶುಕ್ರವಾರ ಹೇಳಿದ್ದಾರೆ. ಬಹುತೇಕ ರಾಜ್ಯಗಳು ಕರಡು ನಿಯಮಗಳನ್ನು ದೃಢಪಡಿಸಿರುವುದರಿಂದ ಕಾರ್ಮಿಕ ಸಂಹಿತೆಗಳು ಯಾವಾಗ ಬೇಕಾದರೂ ಜಾರಿಗೆ ಬರಬಹುದು ಎಂಬ ಊಹಾಪೋಹಗಳು ದಟ್ಟವಾಗಿರುವ ಬೆನ್ನಲ್ಲೇ ಕೇಂದ್ರ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಭೂಪೇಂದರ್ ಯಾದವ್, ಬಹುತೇಕ ಎಲ್ಲಾ ರಾಜ್ಯಗಳು ನಾಲ್ಕು ಲೇಬರ್ ಕೋಡ್‌ಗಳ ಕರಡು ನಿಯಮಗಳನ್ನು ಅಂತಿಮಗೊಳಿಸಿವೆ. ನಾವು ಸೂಕ್ತ ಸಮಯದಲ್ಲಿ ಹಾಗೂ ಎಲ್ಲ ರಾಜ್ಯಗಳಲ್ಲೂ ಒಂದೇ ಬಾರಿಗೆ ಈ ಸಂಹಿತೆಗಳನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ. ಕೆಲವು ರಾಜ್ಯಗಳು ಇನ್ನೂ ಕರಡು ನಿಯಮಗಳನ್ನು ದೃಢೀಕರಿಸುವ ಪ್ರಕ್ರಿಯೆಯಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‘ನನಗೆ ಕಾರ್ಮಿಕ ವರ್ಗದ ಸ್ನೇಹಿತರಿಲ್ಲ’ ಎಂದು ರಿಷಿ ಸುನಕ್ ಹೇಳಿರುವ ಹಳೇ ವಿಡಿಯೊ ವೈರಲ್

ರಾಜಸ್ಥಾನವು ಎರಡು ಕೋಡ್‌ಗಳ ಕರಡು ನಿಯಮಗಳನ್ನು ದೃಢಪಡಿಸಿದೆ, ಇನ್ನೆರಡು ಬಾಕಿ ಉಳಿದಿದೆ. ಆದರೆ, ಪಶ್ಚಿಮ ಬಂಗಾಳವು ಈ ಕರಡು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ಸಚಿವರು ಹೇಳಿದ್ದಾರೆ. ಮೇಘಾಲಯ ಸೇರಿದಂತೆ ಕೆಲವು ಈಶಾನ್ಯ ರಾಜ್ಯಗಳು ನಾಲ್ಕು ಕೋಡ್‌ಗಳ ಕರಡು ನಿಯಮಗಳನ್ನು ರಚಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ.

ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ನಾಲ್ಕು ಕೋಡ್‌ಗಳ ಕರಡು ನಿಯಮಗಳನ್ನು ಮೊದಲೇ ಪ್ರಕಟಿಸಿದೆ. ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುವ ಅಗತ್ಯವಿದೆ. ಕೇಂದ್ರ ಮತ್ತು ರಾಜ್ಯಗಳು ಒಂದೇ ಬಾರಿಗೆ ಎಲ್ಲಾ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಸಚಿವಾಲಯ ಉದ್ದೇಶಿಸಿದೆ.

ಇದನ್ನೂ ಓದಿ: ಕರ್ನಾಟಕದ ವಿವಿಧೆಡೆ ಪೌರಕಾರ್ಮಿಕರ ಪ್ರತಿಭಟನೆ: ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ

ಕೇಂದ್ರ ಮತ್ತು ರಾಜ್ಯಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಈ ಕಾನೂನುಗಳನ್ನು ಜಾರಿಗೊಳಿಸಲು ನಾಲ್ಕು ಕೋಡ್‌ಗಳ ಅಡಿಯಲ್ಲಿ ನಿಯಮಗಳನ್ನು ತಿಳಿಸುವ ಅಗತ್ಯವಿದೆ. ಈ ಕೋಡ್‌ಗಳ ಅಡಿಯಲ್ಲಿ ನಿಯಮಗಳನ್ನು ರಚಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ವಹಿಸಲಾಗಿದೆ. ಸಾರ್ವಜನಿಕ ಸಮಾಲೋಚನೆಗಾಗಿ 30 ಅಥವಾ 45 ದಿನಗಳ ಅವಧಿಗೆ ಅವರ ಅಧಿಕೃತ ಗೆಜೆಟ್‌ನಲ್ಲಿ ನಿಯಮಗಳನ್ನು ಪ್ರಕಟಿಸುವ ಅವಶ್ಯಕತೆಯಿದೆ.