AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಕಾರ್ಮಿಕ ವರ್ಗದ ಸ್ನೇಹಿತರಿಲ್ಲ’ ಎಂದು ರಿಷಿ ಸುನಕ್ ಹೇಳಿರುವ ಹಳೇ ವಿಡಿಯೊ ವೈರಲ್

ನನಗೆ ಶ್ರೀಮಂತರಾದ ಸ್ನೇಹಿತರಿದ್ದಾರೆ, ನನಗೆ ಮೇಲ್ವರ್ಗದ ಸ್ನೇಹಿತರಿದ್ದಾರೆ.ಆದರೆ ಕಾರ್ಮಿಕ ವರ್ಗದ ಸ್ನೇಹಿತರಿಲ್ಲ ಎಂದು ರಿಷಿ ಸುನಕ್ ಹೇಳಿದ್ದಾರೆ

'ನನಗೆ ಕಾರ್ಮಿಕ ವರ್ಗದ ಸ್ನೇಹಿತರಿಲ್ಲ' ಎಂದು ರಿಷಿ ಸುನಕ್ ಹೇಳಿರುವ ಹಳೇ ವಿಡಿಯೊ ವೈರಲ್
ರಿಷಿ ಸುನಕ್
TV9 Web
| Edited By: |

Updated on: Jul 10, 2022 | 8:10 PM

Share

21 ವರ್ಷದ ರಿಷಿ ಸುನಕ್ ತನಗೆ ಕಾರ್ಮಿಕ ವರ್ಗದ ಸ್ನೇಹಿತರಿಲ್ಲ ಎಂದು ಹೇಳುವ ಹಳೇ ವೀಡಿಯೊ ಮತ್ತೆ ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಯುಕೆಯ ಪ್ರಧಾನಿ (UK prime minister)ಹುದ್ದೆ ರೇಸ್​​ನಲ್ಲಿ ರಿಷಿ ಸುನಕ್ (Rishi Sunak) ಮುಂಚೂಣಿಯಲ್ಲಿರುವುದರಿಂದ ಈ ವಿಡಿಯೊಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. “ನನಗೆ ಶ್ರೀಮಂತರಾದ ಸ್ನೇಹಿತರಿದ್ದಾರೆ, ನನಗೆ ಮೇಲ್ವರ್ಗದ ಸ್ನೇಹಿತರಿದ್ದಾರೆ.ಆದರೆ ಕಾರ್ಮಿಕ ವರ್ಗದ ಸ್ನೇಹಿತರಿಲ್ಲ ಎಂದು ರಿಷಿ ಸುನಕ್ ಹೇಳಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರವಾದ ‘Middle Classes- Their Rise & Sprawl ನಲ್ಲಿ ರಿಷಿ ಸುನಕ್ ಹೇಳುತ್ತಿರುವ ವಿಡಿಯೊ ತುಣುಕು ಇದಾಗಿದೆ. ನಾನು ಮಿಕ್ಸ್ ಅಂಡ್ ಮ್ಯಾಚ್ ಮಾಡುತ್ತೇನೆ. ನಂತರ ನಾನು ನಗರದೊಳಗಿನ ರಾಜ್ಯದ ಶಾಲೆಯ ಮಕ್ಕಳನ್ನು ನೋಡಲು ಹೋಗುತ್ತೇನೆ. ಆಕ್ಸ್‌ಫರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತು ನನ್ನಂತಹ ಜನರ ಬಗ್ಗೆ ಅವರಲ್ಲಿ ಮಾತನಾಡಲು ಹೇಳುತ್ತೇನೆ. ಮಾತಿನ ಕೊನೆಯಲ್ಲಿ  ಅವರಲ್ಲಿ, ನಾನು ವಿಂಚೆಸ್ಟರ್‌ನಲ್ಲಿದ್ದೇನೆ ಮತ್ತು ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು ಈಟನ್​​ನವರು ಅಥವಾ  ಅಂಥದ್ದೇನಾದರೂ ಹೇಳಿ ಅವರನ್ನು ಬೆಚ್ಚಿ ಬೀಳಿಸುತ್ತೇನೆ. ನಂತರ ಓಹ್, ಓಕೆ ಅಂತಿರುತ್ತಾರೆ ಎಂದು ರಿಷಿ ಸುನಕ್ ಸಾಕ್ಷ್ಯಚಿತ್ರದಲ್ಲಿ ಹೇಳುವುದು ವಿಡಿಯೊದಲ್ಲಿದೆ.

“ಈ ಸ್ಥಳಗಳಲ್ಲಿರಲು ನಾನು ತುಂಬಾ ಅದೃಷ್ಟವಂತ, ಅದು ನನ್ನನ್ನು ಸಮಾಜದಲ್ಲಿನ ಗಣ್ಯ ವ್ಯಕ್ತಿಗಳನ್ನಾಗಿಸುತ್ತದೆ. ನಾನು ಯಾವಾಗಲೂ ವೃತ್ತಿಪರ ಮಧ್ಯಮ ವರ್ಗ ಎಂದು ನನ್ನನ್ನು ಪರಿಗಣಿಸುತ್ತೇನೆ, ಏಷ್ಯನ್ ಆಗಿರುವುದು ಒಂದು ವಿಶಿಷ್ಟ ಲಕ್ಷಣ ಎಂದು ನಾನು ಭಾವಿಸುವುದಿಲ್ಲ” ಎಂದು ವಿಂಚೆಸ್ಟರ್ ಕಾಲೇಜು ಮತ್ತು ನಂತರ ಆಕ್ಸ್‌ಫರ್ಡ್‌ನಲ್ಲಿ ಕಲಿಯಲು ಅವಕಾಶ ಸಿಕ್ಕಿರುವ ಬಗ್ಗೆ ರಿಷಿ ಹೇಳಿದ್ದಾರೆ.

ಇದನ್ನೂ ಓದಿ
Image
Akshata Murthy: ಬಂಗಲೆ ಹೊರಗೆ ಕಾದಿದ್ದ ಪತ್ರಕರ್ತರಿಗೆ ಚಹಾ ನೀಡಿದ ಅಕ್ಷತಾ ಮೂರ್ತಿ; ಮತ್ತೆ ಟೀಕೆಗೀಡಾದ ರಿಷಿ ಸುನಕ್
Image
ಬ್ರಿಟನ್‌ ಪ್ರಧಾನಿ ಚುನಾವಣೆ: ಅಭ್ಯರ್ಥಿಯಾಗಿ ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್‌ ಕಣಕ್ಕೆ
Image
ಬ್ರಿಟನ್ನಿನ ಪ್ರಸಕ್ತ ರಾಜಕೀಯ ವಿಪ್ಲವದ ಹರಿಕಾರ ರಿಷಿ ಸುನಾಕ್ ಆ ದೇಶದ ಮುಂದಿನ ಪ್ರಧಾನ ಮಂತ್ರಿಯೇ?

ಜುಲೈ 8 ರಂದು ಮಾಜಿ ಚಾನ್ಸೆಲರ್ ರಿಷಿ ಸುನಕ್ ಅವರು ಹೊಸ ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಲು ತಮ್ಮ ಪ್ರಚಾರವನ್ನು ಪ್ರಾರಂಭಿಸಿದರು. ಪ್ರಸ್ತುತ ಯುಕೆ ಚಾನ್ಸೆಲರ್ ಆಗಿರುವ ಇರಾಕ್ ಮೂಲದ ನಧಿಮ್ ಜಹಾವಿ ಮತ್ತು ಸಾರಿಗೆ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್ ಕೂಡ ತಮ್ಮ ಉಮೇದುವಾರಿಕೆಯನ್ನು ಶನಿವಾರ ಘೋಷಿಸಿದ್ದಾರೆ. ಮಾಜಿ ಆರೋಗ್ಯ ಸಚಿವ ಸಾಜಿದ್ ಜಾವಿದ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಕೂಡ ಕಣದಲ್ಲಿದ್ದಾರೆ.

ಈ ವಿಡಿಯೊ ತುಣುಕನ್ನು ಕ್ಯಾಥರಿನ್ ಫ್ರಾಂಕ್ಲಿನ್  ಎಂಬವರು ಪೋಸ್ಟ್ ಮಾಡಿದ್ದು ತಾನು ಮಾರ್ಚ್‌ನಲ್ಲಿ ಸ್ಥಳೀಯ ಬಿಬಿಸಿ ಪಾಲಿಟಿಕ್ಸ್ ಶೋನಲ್ಲಿ ವಿಡಿಯೊವನ್ನು ನೋಡಿದ್ದೆ ಎಂದು ವೇಲ್ಸ್‌ಆನ್‌ಲೈನ್‌ಗೆ ತಿಳಿಸಿದ್ದಾರೆ. ನಾನು ನಂತರ ರಿಷಿ ಸುನಕ್ ಅವರ ಪ್ರಚಾರದ ವಿಡಿಯೊವನ್ನು ನೋಡಿದೆ. ಅದರಲ್ಲಿ ಅವರ ಮಾತು 2001 ರಲ್ಲಿ ಆ ವಿಡಿಯೊದಲ್ಲಿ ಹೇಳಿದ್ದಕ್ಕೆ ವಿರುದ್ಧವಾಗಿ ತೋರುತ್ತಿದೆ. ಹಾಗಾಗಿ ನಾನು ವಿಡಿಯೊವನ್ನು ಮತ್ತೆ ಪೋಸ್ಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆದಾಗ್ಯೂ ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವಳಲ್ಲ ಎಂದು ಕ್ಯಾಥರಿನ್ ಹೇಳಿದ್ದಾರೆ.

ಬೋರಿಸ್ ಜಾನ್ಸನ್ ಕೂಡಾ ಕಾರ್ಮಿಕ ವರ್ಗದ ಸ್ನೇಹಿತರಲ್ಲ ಎಂದು ಕೆಲವು ನೆಟ್ಟಿಗರು ಈ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ.

ರಿಷಿ ಅವರ ಪ್ರಚಾರದ ವಿಡಿಯೊದಲ್ಲಿ ಅವರು ತಮ್ಮ ಭಾರತೀಯ ಮೂಲದ ಬಗ್ಗೆ ಮತ್ತು ಉತ್ತಮ ಜೀವನಕ್ಕಾಗಿ ಅವರ ಹಿರಿಯರು ಯುಕೆಗೆ ಹೇಗೆ ತೆರಳಿದರು ಎಂಬುದರ ಕುರಿತು ಮಾತನಾಡಿದ್ದಾರೆ “ನನ್ನ ಕುಟುಂಬ ಅವರಿಗೆ ಕನಸು ಎಂದು ಅನಿಸುತ್ತಿದ್ದ ಅವಕಾಶಗಳನ್ನು ನನಗೆ ನೀಡಿತು. ಅದು ಬ್ರಿಟನ್, ನಮ್ಮ ದೇಶ, ಅವರಿಗೆ ಮತ್ತು ಅವರಂತಹ ಲಕ್ಷಾಂತರ ಜನರಿಗೆ ಉತ್ತಮ ಭವಿಷ್ಯದ ಅವಕಾಶವನ್ನು ನೀಡಿತು ಎಂದಿದ್ದಾರೆ.

42 ವರ್ಷದ ರಿಷಿ ಸುನಕ್ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ. ರಿಷಿ ಅವರ ರಾಜಕೀಯ ವೃತ್ತಿಜೀವನವು 2015 ರಲ್ಲಿ ಪ್ರಾರಂಭವಾಯಿತು. ಇದಕ್ಕಿಂತ ಮೊದಲು ಅವರು ಹೆಜ್ ಫಂಡ್ ಮ್ಯಾನೇಜರ್ ಆಗಿದ್ದರು ಮತ್ತು ಗೋಲ್ಡ್ಮನ್ ಸ್ಯಾಚ್ಸ್ನಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿ ಕೆಲಸ ಮಾಡಿದ್ದರು. ರಿಷಿ 2009 ರಲ್ಲಿ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರನ್ನು ವಿವಾಹವಾದರು.

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ