Akshata Murthy: ಬಂಗಲೆ ಹೊರಗೆ ಕಾದಿದ್ದ ಪತ್ರಕರ್ತರಿಗೆ ಚಹಾ ನೀಡಿದ ಅಕ್ಷತಾ ಮೂರ್ತಿ; ಮತ್ತೆ ಟೀಕೆಗೀಡಾದ ರಿಷಿ ಸುನಕ್

ಬಿಲಿಯನೇರ್ ಇನ್ಫೋಸಿಸ್ ಸಹಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಹಾಗೂ ರಿಷಿ ಸುನಕ್ ಅವರ ಪತ್ನಿಯಾಗಿರುವ ಅಕ್ಷತಾ ಮೂರ್ತಿ ಟ್ರೇಯಲ್ಲಿ ಚಹಾ ಮತ್ತು ಬಿಸ್ಕತ್ತುಗಳನ್ನು ತಂದು ಮನೆ ಹೊರಗೆ ಕಾದಿದದ್ ಪತ್ರಕರ್ತರಿಗೆ ನೀಡಿದ್ದಾರೆ.

Akshata Murthy: ಬಂಗಲೆ ಹೊರಗೆ ಕಾದಿದ್ದ ಪತ್ರಕರ್ತರಿಗೆ ಚಹಾ ನೀಡಿದ ಅಕ್ಷತಾ ಮೂರ್ತಿ; ಮತ್ತೆ ಟೀಕೆಗೀಡಾದ ರಿಷಿ ಸುನಕ್
ಪತ್ರಕರ್ತರಿಗೆ ಚಹಾ ನೀಡಿದ ಅಕ್ಷತಾ ಮೂರ್ತಿImage Credit source: Money Control
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 09, 2022 | 10:20 AM

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ನೂತನ ಪ್ರಧಾನಿ ಹುದ್ದೆಯನ್ನು ಯಾರು ಏರಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ. ನೂತನ ಪ್ರಧಾನಿಗಳ ರೇಸ್​ನಲ್ಲಿ ಇನ್ಫೋಸಿಸ್​ ಸಹಸ್ಥಾಪಕ ನಾರಾಯಣಮೂರ್ತಿ (Narayana Murthy) ಅವರ ಅಳಿಯ ರಿಷಿ ಸುನಕ್ (Rishi Sunak) ಹೆಸರು ಕೂಡ ಇದೆ. ಬ್ರಿಟನ್​ನಲ್ಲಿ ಚಾನ್ಸಲರ್ ಹುದ್ದೆಗೆ ರಾಜೀನಾಮೆ ನೀಡಿರುವ ರಿಷಿ ಸುನಕ್ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇದೀಗ ಇಂಗ್ಲೆಂಡ್​​ ಸರ್ಕಾರದಲ್ಲಿ ಬಿಕ್ಕಟ್ಟು ಎದುರಾಗಿದೆ.

ಐಟಿವಿ ನ್ಯೂಸ್ ಪ್ರಕಾರ, ರಿಷಿ ಸುನಕ್ ಮಂಗಳವಾರ ಬ್ರಿಟನ್‌ನ ಚಾನ್ಸೆಲರ್‌ನ ಅಧಿಕೃತ ನಿವಾಸವಾದ ಸಂಖ್ಯೆ 11 ಡೌನಿಂಗ್ ಸ್ಟ್ರೀಟ್‌ನಿಂದ ಹೊರಟಾಗಿನಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಲಂಡನ್‌ನಲ್ಲಿರುವ ಅವರ ಮನೆಯ ಹೊರಗೆ ಕಾಯುತ್ತಿದ್ದ ಪತ್ರಕರ್ತರಿಗೆ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಚಹಾ ನೀಡುವ ಮೂಲಕ ಗಮನಸೆಳೆದಿದ್ದಾರೆ.

ಇದನ್ನೂ ಓದಿ
Image
ಬ್ರಿಟನ್‌ ಪ್ರಧಾನಿ ಚುನಾವಣೆ: ಅಭ್ಯರ್ಥಿಯಾಗಿ ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್‌ ಕಣಕ್ಕೆ
Image
ಬ್ರಿಟನ್ನಿನ ಪ್ರಸಕ್ತ ರಾಜಕೀಯ ವಿಪ್ಲವದ ಹರಿಕಾರ ರಿಷಿ ಸುನಾಕ್ ಆ ದೇಶದ ಮುಂದಿನ ಪ್ರಧಾನ ಮಂತ್ರಿಯೇ?
Image
ಸರಣಿ ರಾಜೀನಾಮೆಗಳಿಂದ ಕಂಗೆಟ್ಟ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ರಾಜೀನಾಮೆ ಸಲ್ಲಿಸುವ ಸಾಧ್ಯತೆ!
Image
Akshata Murthy: ಭಾರತ ಸೇರಿದಂತೆ ಜಾಗತಿಕ ಮೂಲದ ಆದಾಯಕ್ಕೆ ಬ್ರಿಟಿಷ್ ತೆರಿಗೆ ಪಾವತಿ; ಅಕ್ಷತಾ ಮೂರ್ತಿ ನಿರ್ಧಾರ

ಸಂಸತ್​ಗೆ ರಾಜೀನಾಮೆ ನೀಡಿದ ನಂತರ ಕೆನ್ಸಿಂಗ್ಟನ್‌ನಲ್ಲಿರುವ ರಿಷಿ ಸುನಕ್ ಅವರ ಐಷಾರಾಮಿ ಅಪಾರ್ಟ್‌ಮೆಂಟ್‌ನ ಹೊರಗೆ ಹಲವಾರು ಪತ್ರಕರ್ತರು ಮತ್ತು ಛಾಯಾಗ್ರಾಹಕರು ಜಮಾಯಿಸಿದ್ದರು. ಬಿಲಿಯನೇರ್ ಇನ್ಫೋಸಿಸ್ ಸಹಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಹಾಗೂ ರಿಷಿ ಸುನಕ್ ಅವರ ಪತ್ನಿಯಾಗಿರುವ ಅಕ್ಷತಾ ಮೂರ್ತಿ ಟ್ರೇಯಲ್ಲಿ ಚಹಾ ಮತ್ತು ಬಿಸ್ಕತ್ತುಗಳನ್ನು ತಂದು ಪತ್ರಕರ್ತರಿಗೆ ನೀಡಿದ್ದಾರೆ.

ಇದನ್ನೂ ಓದಿ: ಬ್ರಿಟನ್‌ ಪ್ರಧಾನಿ ಚುನಾವಣೆ: ಅಭ್ಯರ್ಥಿಯಾಗಿ ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್‌ ಕಣಕ್ಕೆ

ITV ನ್ಯೂಸ್ ಟ್ವಿಟ್ಟರ್‌ನಲ್ಲಿ ಇದರ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ಅಕ್ಷತಾ ಮೂರ್ತಿ ಟೀ ಮತ್ತು ಬಿಸ್ಕತ್​​ನ ಟ್ರೇಯನ್ನು ಮೇಜಿನ ಮೇಲೆ ಇರಿಸಿ ಮನೆಯೊಳಗೆ ಹೋಗಿದ್ದಾರೆ. ಅಕ್ಷತಾ ಮೂರ್ತಿ ಎಮ್ಮಾ ಲೇಸಿ ಮಗ್‌ಗಳಲ್ಲಿ ಚಹಾವನ್ನು ನೀಡಿದ್ದಾರೆ. ಅದರ ಬೆಲೆ 38 ಪೌಂಡ್‌ (ಸುಮಾರು 3,600 ರೂ.) ಆಗಿದೆ. ಇಂಗ್ಲೆಂಡ್​ ಜೀವನ ವೆಚ್ಚದ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಈ ಸಮಯದಲ್ಲಿ ಇಷ್ಟು ದುಬಾರಿ ವೆಚ್ಚದ ಕಪ್​ಗಳನ್ನು ಖರೀದಿಸಿ, ಚಹಾ ನೀಡಿರುವುದು ಕೂಡ ಇದೀಗ ಚರ್ಚೆಯ ವಿಷಯವಾಗಿದೆ.

ಆ ಮಗ್‌ನ ಬೆಲೆಯಿಂದ ಒಂದು ಕುಟುಂಬ 2 ದಿನಗಳವರೆಗೆ ಜೀವನ ನಡೆಸಬಹುದು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ರಷ್ಯಾದಲ್ಲಿ ಇನ್ಫೋಸಿಸ್ ಕಾರ್ಯನಿರ್ವಹಣೆ; ನಾರಾಯಣ ಮೂರ್ತಿ ಅಳಿಯ, ಬ್ರಿಟನ್​ ಹಣಕಾಸು ಸಚಿವ ರಿಷಿ ಸುನಕ್​ಗೆ ಕಠಿಣ ಪ್ರಶ್ನೆ

ಇನ್ನು ಕೆಲವರು ಇದೊಂದು ಫೋಟೋಶಾಪ್ ಮಾಡಲಾದ ಫೋಟೋ ಎಂದು ಟೀಕಿಸಿದ್ದಾರೆ. ಅಷ್ಟು ಪತ್ರಕರ್ತರು ಹೊರಗೆ ಕಾಯುತ್ತಿರುವಾಗ ಒಂದೇ ಕಪ್ ಚಹಾ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ? ಇದು ಫೋಟೋಶಾಪ್ ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ.

ರಿಷಿ ಸುನಕ್ ಅವರು ಜೀವನ ವೆಚ್ಚದ ಬಿಕ್ಕಟ್ಟಿನ ಮಧ್ಯದಲ್ಲಿ ಬ್ರಿಟನ್ನರಿಗೆ ತೆರಿಗೆಗಳನ್ನು ಹೆಚ್ಚಿಸಿದ್ದಕ್ಕಾಗಿ ಜನರ ಆಕ್ರೋಶ ಎದುರಿಸಿದ್ದರು.

Published On - 10:12 am, Sat, 9 July 22

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ