ಸೀಟ್​​​ ಬೆಲ್ಟ್​​ ಧರಿಸದೆ ಸಿಕ್ಕಿಬಿದ್ದವ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಬ್​​ವೇ ಟ್ರ್ಯಾಕ್ ಮೇಲಿಂದ ಕಟ್ಟಡದ ಮೇಲೆ ಜಿಗಿದು ಕಾಲು ಮುರಿದುಕೊಂಡ!

ವಿಡಿಯೊ ಆರಂಭಗೊಂಡಾಗ ಫ್ಲಾಯ್ಡ್​​ ಟ್ರ್ಯಾಕ್ ಹೊರಭಾಗದಲ್ಲಿ ನಿಂತಿರುವುದು ಕಾಣುತ್ತದೆ. ಅವನು ಕಟ್ಟಡದ ಮೇಲೆ ಜಿಗಿಯಲು ತನ್ನ ಪಾದಗಳನ್ನು ಅಡ್ಜಸ್ಟ್​​ ಮಾಡುವಾಗ ಕೆಳಗೆ ನಿಂತಿರುವ ಜನ, ‘ಜಿಗಿಯಬೇಡ, ಹಾಗೆ ಮಾಡಿದರೆ ಅಪಾಯ,’ ಎಂದು ಕೂಗುವುದು ಕೇಳಿಸುತ್ತದೆ.

ಸೀಟ್​​​ ಬೆಲ್ಟ್​​ ಧರಿಸದೆ ಸಿಕ್ಕಿಬಿದ್ದವ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಬ್​​ವೇ ಟ್ರ್ಯಾಕ್ ಮೇಲಿಂದ ಕಟ್ಟಡದ ಮೇಲೆ ಜಿಗಿದು ಕಾಲು ಮುರಿದುಕೊಂಡ!
ಜಿಗಿಯುತ್ತಿರುವ ಫ್ಲಾಯ್ಡ್​!​
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2022 | 8:15 AM

ಬ್ರೂಕ್ಲಿನ್:  ಈ ವಿಡಿಯೋ ನೋಡಿ ಮಾರಾಯ್ರೇ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯುಎಸ್​​ ನ ಬ್ರೂಕ್ಲಿನ್ ನಲ್ಲಿ (Brooklyn) ಎಲಿವೇಟೆಡ್​ ಸಬ್​​ ವೇ ಟ್ರ್ಯಾಕ್ (elevated subway track) ಪಕ್ಕದಿಂದ ಕಟ್ಟಡವೊಂದರ ಮೇಲೆ ಜಿಗಿಯುತ್ತಿದ್ದಾನೆ. ಈ ಮಹಾಶಯನ ಹೆಸರು ಕೆಂಡಲ್​ ಫ್ಲಾಯ್ಡ್​​ ಮತ್ತು ಕಾರಲ್ಲಿ ಹೋಗುವಾಗ ಸೀಟ್ ಬೆಲ್ಟ್​ (seat belt) ಧರಿಸದ ಕಾರಣ ​ಪೊಲೀಸರು ಅವನು ಕಾರನ್ನು ತಡೆದು ಜುಲ್ಮಾನೆ ವಿಧಿಸಲಿ ಮುಂದಾದಾಗ ಅವನು ಪೊಲೀಸರನ್ನು ನೂಕಿ, ಕಾರಿನಿಂದ ಇಳಿದು ಸಬ್ ವೇ ಟ್ರ್ಯಾಕ್ ಮೇಲೆ ಓಡಲಾರಂಭಿಸಿದ್ದಾನೆ. ಪೊಲೀಸರು ಅಲ್ಲಿಗೆ ತಲುಪಿ ಟ್ರ್ಯಾಕ್​ ಕೆಳಗೆ ನಿಂತು ‘ಕೆಳಗಿಳಿದು ಬಾ,’ ಎಂದಾಗ ತನ್ನನ್ನು ಅರೆಸ್ಟ್​ ಮಾಡುತ್ತಾರೆಂಬ ಭಯದಿಂದ ಫ್ಲಾಯ್ಡ್​​ ಸಬ್ ವೇ ಟ್ರ್ಯಾಕ್ ನಿಂದ ಪಕ್ಕದ ಕಟ್ಟಡದ ಮೇಲೆ ಜಿಗಿದಿದ್ದಾನೆ.

ವಿಡಿಯೊ ಆರಂಭಗೊಂಡಾಗ ಫ್ಲಾಯ್ಡ್​​ ಟ್ರ್ಯಾಕ್ ಹೊರಭಾಗದಲ್ಲಿ ನಿಂತಿರುವುದು ಕಾಣುತ್ತದೆ. ಅವನು ಕಟ್ಟಡದ ಮೇಲೆ ಜಿಗಿಯಲು ತನ್ನ ಪಾದಗಳನ್ನು ಅಡ್ಜಸ್ಟ್​​ ಮಾಡುವಾಗ ಕೆಳಗೆ ನಿಂತಿರುವ ಜನ, ‘ಜಿಗಿಯಬೇಡ, ಹಾಗೆ ಮಾಡಿದರೆ ಅಪಾಯ,’ ಎಂದು ಕೂಗುವುದು ಕೇಳಿಸುತ್ತದೆ.

ಅದರೆ 25-ವರ್ಷ ವಯಸ್ಸಿನ ಯುವಕ ಅವರ ಸಲಹೆಯನ್ನು ನಿರ್ಲಕ್ಷಿಸುತ್ತಾನೆ. ಟ್ರ್ಯಾಕ್​​​ನಿಂದ ಸಾಕಷ್ಟು ಅಂತರದಲ್ಲಿರುವ ಒಂದು ವಾಣಿಜ್ಯ ಮಳಿಗೆ ಮೇಲೆ ಜಿಗಿದೇ ಬಿಡುತ್ತಾನೆ. ಅದಾದ ಮೇಲೆ ಹಲವಾರು ಪೊಲೀಸರು ಅವನು ಜಿಗಿದ ಕಟ್ಟಡದ ಹಿಂಭಾಗಕ್ಕೆ ಓಡುತ್ತಾರೆ.

ಈ ವಿಡಿಯೋ ಟ್ವಿಟ್ಟರ್​​ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ ಬುಧವಾರ ಮಧ್ಯಾಹ್ನ ಫ್ಲಾಯ್ಡ್​​ ವಿಲಿಯಮ್ಸ್​​​​ ಬರ್ಗ್​​​ನಲ್ಲಿ ಕಾರು ಓಡಿಸುತ್ತಿದ್ದ, ಆದರೆ ಸೀಟ್ ಬೆಲ್ಟ್​​ ಧರಿಸಿರಲಿಲ್ಲ.

ಆದರೆ, ಟ್ರಾಫಿಕ್ ಪೊಲೀಸರು ಅವನನ್ನು ತಡೆದು ಪ್ರಶ್ನಿಸಿದಾಗ, ಫ್ಲಾಯ್ಡ್​ ಕಾರಿನ ಡೋರ್​​ ಧಡಾರನೆ ಓಪನ್ ಒಬ್ಬ ಪೊಲೀಸ್ ಅಧಿಕಾರಿಯೊಬ್ಬನ​ ಭುಜದ ಮೇಲೆ ಜೋರಾಗಿ ಗುದ್ದಿ ಅಲ್ಲಿಂದ ಪರಾರಿಯಾಗಿದ್ದಾನೆ.

ಫ್ಲಾಯ್ಡ್​ ನನ್ನು ಬೆನ್ನಟ್ಟಿದ ಪೊಲೀಸರು ಮೂರು ಬೀದಿಗಳನ್ನು ದಾಟಿದ ನಂತರ ಹಿಡಿದರಾದರೂ ಅವನು ಶರಣಾಗಲು ತಯಾರಿರಲಿಲ್ಲ. ನಂತರ ಅವನು ಫ್ಲಶಿಂಗ್ ಅವೆನ್ಯೂ ಸ್ಟೇಷನ್ ಕಡೆ ಓಡಿ ಟ್ರ್ಯಾಕ್​ಗಳ ಮೇಲೆ ಬಂದು ವಿಡಿಯೋನಲ್ಲಿ ಕಾಣುವ ಹಾಗೆ ಜಂಪ್ ಮಾಡುತ್ತಾನೆ.

ಆದರೆ ಹಾಗೆ ಜಂಪ್ ಮಾಡಿದವನು ಕಾಲಿನ ಮೂಳೆ ಮುರಿದಿಕೊಂಡಿದ್ದಾನೆ. ಎದ್ದು ಓಡಲು ಸಾಧ್ಯವಾಗದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸ ಆಧಿಕಾರಿಯ ಮೇಲೆ ಹಲ್ಲೆ, ಅಪಾಯಕಾರಿ ನಡವಳಿಕೆ, ದುರ್ವತನೆ, ನಿಯಮ ಉಲ್ಲಂಘನೆ, ಸೀಟ್​​ ಬೆಲ್ಟ್​ ಧರಿಸದೆ ನಿಯಮ ಉಲ್ಲಂಘನೆ ಮೊದಲಾದ ಚಾರ್ಜ್​​​ಗಳನ್ನು ಅವನ ವಿರುದ್ಧ ವಿಧಿಸಲಾಗಿದೆ.

ಇದನ್ನೂ ಓದಿ:  Viral Video: ಹಲ್ಲಿನ ಮೂಲಕ ಒಟ್ಟಿಗೆ ಐದು ಕಾರುಗಳನ್ನು ಎಳೆದು ವಿಶ್ವ ದಾಖಲೆ ಬರೆದ ಟ್ರಾಯ್ ಕಾನ್ಲೆ ಮ್ಯಾಗ್ನುಸನ್, ವೈರಲ್ ವಿಡಿಯೋ ಇಲ್ಲಿದೆ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು