ಅಂಗೋಲಾದ ಮಾಜಿ ಅಧ್ಯಕ್ಷ ಡೋಸ್ ಸಾಂಟೋಸ್ ನಿಧನ

ಆಫ್ರಿಕಾದಲ್ಲಿ ಎರಡನೇ ಅತೀ ದೊಡ್ಡ ತೈಲ ಉತ್ಪಾದಕರಾಗಿರುವ ಅಂಗೋಲಾವನ್ನು ನಾಲ್ಕು ದಶಕಗಳ ಕಾಲ ಆಳಿದ್ದ ಜೋಸ್ ಎಡುವಾರ್ಡೊ ಡೋಸ್ ಸಾಂಟೋಸ್ ಅವರು 79ನೇ ವಯಸ್ಸಲ್ಲಿ ನಿಧನರಾಗಿದ್ದಾರೆ.

ಅಂಗೋಲಾದ ಮಾಜಿ ಅಧ್ಯಕ್ಷ ಡೋಸ್ ಸಾಂಟೋಸ್ ನಿಧನ
ಜೋಸ್ ಎಡುವಾರ್ಡೊ ಡೋಸ್ ಸಾಂಟೋಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 08, 2022 | 6:18 PM

ಬಾರ್ಸಿಲೋನಾ: ಅಂಗೋಲಾದ (Angola) ಮಾಜಿ ಅಧ್ಯಕ್ಷ ಜೋಸ್ ಎಡುವಾರ್ಡೊ ಡೋಸ್ ಸಾಂಟೋಸ್(Jose Eduardo dos Santos) ಶುಕ್ರವಾರ ನಿಧನರಾಗಿದ್ದಾರೆ. ಆಫ್ರಿಕಾದಲ್ಲಿ ಎರಡನೇ ಅತೀ ದೊಡ್ಡ ತೈಲ ಉತ್ಪಾದಕರಾಗಿರುವ ಅಂಗೋಲಾವನ್ನು ನಾಲ್ಕು ದಶಕಗಳ ಕಾಲ ಆಳಿದ್ದ ಸಾಂಟೋಸ್ ಅವರು 79ನೇ ವಯಸ್ಸಲ್ಲಿ ನಿಧನರಾಗಿದ್ದಾರೆ ಎಂದು ಅಂಗೋಲನ್ ಪ್ರೆಸಿಡೆನ್ಸಿ  ಫೇಸ್​​ಬುಕ್​​ನಲ್ಲಿ ಹೇಳಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಅಧ್ಯಕ್ಷರು ಸ್ಪಾನಿಶ್ ಸಮಯ ಬೆಳಗ್ಗೆ 11.10ಕ್ಕೆ ಬಾರ್ಸಿಲೊನಾ ಟೆಕ್ನಾನ್ ಕ್ಲಿನಿಕ್ ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪ್ರೆಸಿಡೆನ್ಸಿ ಹೇಳಿದೆ. ಬಾರ್ಸಿಲೋನಾ ಟೆಕ್ನಾನ್ ಕ್ಲಿನಿಕ್ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. 2019ರಿಂದ ಡೋಸ್ ಸಾಂಟೋಸ್ ಚಿಕಿತ್ಸೆಯಲ್ಲಿದ್ದರು. ಬಾರ್ಸಿಲೋನಾದಲ್ಲಿರುವ ಆಸ್ಪತ್ರೆಯಲ್ಲಿ ಸಾಂಟೋಸ್ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊರ್ಚುಗೀಸ್ ನ್ಯೂಸ್ ಏಜೆನ್ಸಿ ಕಳೆದ ತಿಂಗಳು ವರದಿ ಮಾಡಿತ್ತು. ಅತೀ ಹೆಚ್ಚು ಕಾಲ ಆಫ್ರಿಕಾದಲ್ಲಿ ಅಧಿಕಾರ ಚಲಾಯಿಸಿದ್ದ ಸಾಂಟೋಸ್ 5 ವರ್ಷಗಳ ಹಿಂದೆ ಅಧಿಕಾರದಿಂದ ಕೆಳಗಿಳಿದಿದ್ದರು. ಅವರ ಅಧಿಕಾರವಧಿಯಲ್ಲಿ ಅಮೆರಿಕ ವಿರುದ್ಧ ರಕ್ತಸಿಕ್ತ ಅಂತರ್ಯುದ್ಧ ನಡೆದಿತ್ತು. ಇದರಲ್ಲಿ ಸಾಂಟೋಸ್ ಗೆದ್ದಿದ್ದರು.

2017ರಲ್ಲಿ ಸಾಂಟೋಸ್ ಅವರನ್ನು ಕೆಳಗಿಳಿಸಿ ಜಾವೊ ಲೌರೆಂಕೊ ಅಧ್ಯಕ್ಷ ಸ್ಥಾನಕ್ಕೇರಿದರು. ಡಾಸ್ ಸಾಂಟೋಸ್ ಕಾಲದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಪೀಪಲ್ಸ್ ಮೂವ್ ಮೆಂಟ್ ಫಾರ್ ದಿ ಲಿಬರೇಷನ್ ಆಫ್ ಅಂಗೋಲಾ (ಎಂಪಿಎಲ್ಎ) ನಾಯಕ ಲೌರೆಂಕೊ ತ್ವರಿತ ತನಿಖೆಗೆ ಆದೇಶಿಸಿದ್ದು ಮಾಜಿ ಅಧ್ಯಕ್ಷರ ಮಕ್ಕಳನ್ನು ಗುರಿಯಾಗಿಕೊಂಡಿದ್ದರು.

Published On - 5:54 pm, Fri, 8 July 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ