Shinzo Abe: ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ
Shinzo Abe Passes Away: ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಶಿಂಜೋ ಅಬೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಿಂಜೋ ಅಬೆ ಮೃತಪಟ್ಟಿದ್ದಾರೆ.
ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ (Shinzo Abe) ಅವರ ಮೇಲೆ ಇಂದು ಬೆಳಗ್ಗೆ ಗುಂಡಿನ ದಾಳಿಯಾಗಿತ್ತು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಿಂಜೋ ಅಬೆ ಮೃತಪಟ್ಟಿದ್ದಾರೆ. ಜಪಾನ್ನ (Japan) ನಾರಾ ಸಿಟಿಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ (ಜಪಾನ್ ಕಾಲಮಾನ) ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಶಿಂಜೋ ಅಬೆ ಅವರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದ. ತಕ್ಷಣ ಕುಸಿದು ಬಿದ್ದ ಅಬೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ 67 ವರ್ಷವಾಗಿತ್ತು. ಚುನಾವಣಾ ಪ್ರಚಾರದ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದ ಶಿಂಜೋ ಅಬೆ ನಿಧನರಾಗಿದ್ದಾರೆ. ಜಪಾನ್ನ ಪಶ್ಚಿಮ ಪ್ರಾಂತ್ಯದ ನಾರಾ ನಗರದಲ್ಲಿ ಅವರನ್ನು ಶೂಟ್ ಮಾಡಲಾಗಿತ್ತು. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಮಾಜಿ ಪ್ರಧಾನಿ ಶಿಂಜೋ ಅಬೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮುಂದಿನ ಭಾನುವಾರ (ಜುಲೈ 10) ಜಪಾನ್ ಸಂಸತ್ನ ಮೇಲ್ಮನೆಗೆ ಚುನಾವಣೆ ನಡೆಯಲಿದ್ದು, ಶಿಂಜೋ ಅಬೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಶಿಂಜೋ ಅಬೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಿಂಜೊ ಅಬೆ ನಿಧನದ ಬಗ್ಗೆ ಮಾಹಿತಿ ನೀಡಿದ ಜಪಾನ್ ವೈದ್ಯರು, ‘ಗುಂಡು ಹೃದಯವನ್ನು ಹೊಕ್ಕಿತ್ತು. ಹೀಗಾಗಿ ಹೃದಯ ಸ್ತಂಭನವಾಯಿತು. ತೀರಾ ಹತ್ತಿರದಿಂದ ಗುಂಡು ಹಾರಿಸಲಾಗಿದೆ. ಆಸ್ಪತ್ರೆಗೆ ಅವರನ್ನು ಕರೆತರುವ ಹೊತ್ತಿಗೆ ನಾಡಿಬಡಿತ ಕ್ಷೀಣಿಸಿತ್ತು. ಹೃದಯದಿಂದ ಗುಂಡು ಹೊರತೆಗೆಯಲು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.
Officials say former Japanese Prime Minister #ShinzoAbe has been confirmed dead. He was reportedly shot during a speech on Friday in the city of Nara, near Kyoto: Japan’s NHK WORLD News pic.twitter.com/7ayJpNCw17
— ANI (@ANI) July 8, 2022
ಇದನ್ನೂ ಓದಿ: Shinzo Abe: ಮಾಜಿ ಪ್ರಧಾನಿ ಶಿಂಜೋ ಅಬೆ ಸ್ಥಿತಿ ಚಿಂತಾಜನಕ, ಜೀವ ಉಳಿಸಲು ವೈದ್ಯರ ಶತಪ್ರಯತ್ನ; ಜಪಾನ್ ಪಿಎಂ ಮಾಹಿತಿ
ಶಿಂಜೋ ಅಬೆ ಜಪಾನ್ನಲ್ಲಿ ಅತಿ ಹೆಚ್ಚು ಆಡಳಿತ ನಡೆಸಿರುವ ಪ್ರಧಾನಿ ಎಂಬ ಹೆಗ್ಗೆಳಿಕೆಗೆ ಪಾತ್ರರಾಗಿದ್ದರು. 2006-2007, 2012-2020ರವರೆಗೂ ಅವರು ಪ್ರಧಾನಿ ಆಗಿದ್ದರು. ಮಾಜಿ ಪ್ರಧಾನಿ ಅಬೆ ಅವರ ಮೇಲೆ ನಾರಾದಲ್ಲಿ ಇಂದು ಬೆಳಿಗ್ಗೆ ಗುಂಡು ಹಾರಿಸಲಾಗಿದೆ. ಶೂಟರ್ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆತನ ಶಿಂಜೋ ಅಬೆ ಅವರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ. ಅದೇ ಕಾರಣಕ್ಕೆ ಅವರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದ ಎಂದು ಹೇಳಲಾಗಿದೆ.
I am shocked and saddened beyond words at the tragic demise of one of my dearest friends, Shinzo Abe. He was a towering global statesman, an outstanding leader, and a remarkable administrator. He dedicated his life to make Japan and the world a better place.
— Narendra Modi (@narendramodi) July 8, 2022
ಇದನ್ನೂ ಓದಿ: ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ, ಅಸ್ಪತ್ರೆಗೆ ದಾಖಲು
ನಾರಾ ಸಿಟಿಯ ನಿವಾಸಿ ಎನ್ನಲಾದ 41 ವರ್ಷದ ಟೆಟ್ಸುಯಾ ಯಮಗಾಮಿ ಎಂಬಾತನನ್ನು ಶಿಂಜೋ ಅಬೆ ಮೇಲೆ ಗುಂಡಿಕ್ಕಿ ಕೊಲೆ ಯತ್ನದ ಶಂಕೆಯ ಮೇಲೆ ಬಂಧಿಸಲಾಗಿದೆ. ಟಿವಿಯಲ್ಲಿ ಪ್ರಸಾರವಾದ ದೃಶ್ಯಗಳಲ್ಲಿ, ಶಿಂಜೋ ಅಬೆ ಗುಂಡೇಟಿನಿಂದ ಕುಸಿದು ಬೀಳುತ್ತಿರುವುದನ್ನು ಕಾಣಬಹುದು. ತಕ್ಷಣ ಹಲವಾರು ಭದ್ರತಾ ಸಿಬ್ಬಂದಿ ಅವರ ಕಡೆಗೆ ಓಡಿದ್ದಾರೆ. ಅಬೆ ಕುಸಿದು ಬಿದ್ದಾಗ ಅವರು ತಮ್ಮ ಎದೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದಿರುವುದನ್ನು ನೋಡಬಹುದು. ಅವರ ಶರ್ಟ್ ಪೂರ್ತಿ ರಕ್ತದಿಂದ ತೊಯ್ದುಹೋಗಿತ್ತು.
Published On - 2:40 pm, Fri, 8 July 22