ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ, ಅಸ್ಪತ್ರೆಗೆ ದಾಖಲು
ಹ್ಯಾಂಡ್ ಗನ್ನೊಂದರ ಮೂಲಕ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಪಾನ್ ಸಂಸತ್ತಿನ ಮೇಲ್ಮನೆಗೆ ರವಿವಾರದಂದು ನಡೆಯಲಿರುವ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಶಿಂಜೊ ಮೇಲೆ ಗುಂಡು ಹಾರಿಸಲಾಗಿದೆ.
ಜಪಾನಿನ ಮಜಿ ಪ್ರಧಾನ ಮಂತ್ರಿ ಶಿಂಜೊ ಅಬೆ (Shinzo Abe) ಮೇಲೆ ಗುಂಡಿನ ದಾಳಿ ನಡೆದಿದೆ. ಜಪಾನಿನ ಪೂರ್ವ ಭಾಗಕ್ಕಿರುವ ನಾರಾ (Nara City) ಹೆಸರಿನ ಪಟ್ಟಣದಲ್ಲಿ ಶಿಂಜೊ ಹತ್ಯೆ ನಡೆಸುವ ಉದ್ದೇಶದಿಂದ ಬಂದ ವ್ಯಕ್ತಿಯೊಬ್ಬ ಅವರ ಎದೆಗೆ ಗುಂಡು ಹಾರಿಸಿದ್ದಾನೆ. ರಾಯಿಟರ್ಸ್ ಮಾಡಿರುವ ವರದಿಯ ಪ್ರಕಾರ ಗುಂಡಿನ ಶಬ್ದ ಕೇಳಿದ ನಂತರ ಶಿಂಜೊ ಅವರು ನೆಲಕ್ಕೆ ಕುಸಿದಿದ್ದು ಜನರಿಗೆ ಕಾಣಿಸಿದೆ. ಅವರು ನೆಲಕ್ಕುರುಳಿದ ಜಾಗವೆಲ್ಲ ರಕ್ತಸಿಕ್ತವಾಗಿತ್ತು. ಅವರನ್ನು ಕೂಡಲೇ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ. ಹ್ಯಾಂಡ್ ಗನ್ನೊಂದರ (handgun) ಮೂಲಕ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಪಾನ್ ಸಂಸತ್ತಿನ ಮೇಲ್ಮನೆಗೆ ರವಿವಾರದಂದು ನಡೆಯಲಿರುವ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಶಿಂಜೊ ಮೇಲೆ ಗುಂಡು ಹಾರಿಸಲಾಗಿದೆ.
ಹತ್ಯೆಗೆ ಯತ್ನಿಸಿದವನನ್ನು ಬಂಧಿಸಲಾಗಿದೆಯಾದರೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕೆಲವು ಅನಧಿಕೃತ ಮೂಲಗಳು ಶಿಂಜೊ ಹೃದಯಾಘಾತಕ್ಕೊಳಗಾಗಿ ನೆಲಕ್ಕೆ ಕುಸಿದರು ಎಂದು ಹೇಳುತ್ತಿವೆ.
ಇದನ್ನೂ ಓದಿ: Viral Video: ‘ಥಟ್ ಥಟ್’ ಎಂಬ ಹೊಸ ಹಾಡಿನೊಂದಿಗೆ ಬಂದ ಗಂಗ್ನಮ್ ಸ್ಟೈಲ್ ಖ್ಯಾತಿಯ Psy, ವೈರಲ್ ವಿಡಿಯೋ ಇಲ್ಲಿದೆ