ಸಿದ್ದರಾಮಯ್ಯನವರ ಮನೆಗೆ ಉಪಹಾರಕ್ಕೆ ಬಂದ ಶಿವಕುಮಾರ ಹಿರಿಯ ನಾಯಕನೊಂದಿಗೆ ಆತ್ಮೀಯವಾಗಿ ಹರಟಿದರು

ಸಿದ್ದರಾಮಯ್ಯನವರ ಮನೆಗೆ ಉಪಹಾರಕ್ಕೆ ಬಂದ ಶಿವಕುಮಾರ ಹಿರಿಯ ನಾಯಕನೊಂದಿಗೆ ಆತ್ಮೀಯವಾಗಿ ಹರಟಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jul 08, 2022 | 2:39 PM

ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹೀಗೆ ಒಬ್ಬರ ಪಕ್ಕ ಮತ್ತೊಬ್ಬರು ಕೂತು ಆತ್ಮೀಯವಾಗಿ ಹರಟಿದ್ದು ಕಾಂಗ್ರೆಸ್ ಶಿಬಿರದಲ್ಲಿ ನಿಸ್ಸಂದೇಹವಾಗಿ ಉಲ್ಲಾಸ ಮೂಡಿಸಿದೆ.

ಬೆಂಗಳೂರು:  ಇಂಥ ದೃಶ್ಯ ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿತ್ತು ಮಾರಾಯ್ರೇ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಹೀಗೆ ಒಬ್ಬರ ಪಕ್ಕ ಮತ್ತೊಬ್ಬರು ಕೂತು ಆತ್ಮೀಯವಾಗಿ ಹರಟಿದ್ದು ಕಾಂಗ್ರೆಸ್ ಶಿಬಿರದಲ್ಲಿ ನಿಸ್ಸಂದೇಹವಾಗಿ ಉಲ್ಲಾಸ ಮೂಡಿಸಿದೆ. ಸಿದ್ದರಾಮಯ್ಯನವರು ಬೆಳಗಿನ ಉಪಹಾರಕ್ಕೆ ಶಿವಕುಮಾರರನ್ನು ಆಹ್ವಾನಿಸಿದ್ದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಶಿವಕುಮಾರ ಅವರಿಗೆ ಜಾಮೂನು, ಮಸಾಲೆ ದೋಸೆ, ಪೂರಿ ಸಾಗು ಮತ್ತು ಇಡ್ಲಿ ವಡೆ ಬಡಿಸಲಾಯಿತು.

ಇದನ್ನೂ ಓದಿ: ಮಳೆ ಆರ್ಭಟ: ಶುಕ್ರವಾರ ಡಿಸಿಗಳೊಂದಿಗೆ ಸಿಎಂ ಬೊಮ್ಮಾಯಿ ತುರ್ತು ವಿಡಿಯೋ ಸಂವಾದ

Published on: Jul 08, 2022 02:00 PM