ಇಂದಿನಿಂದ 2 ದಿನಗಳ ಕಾಲ ಭಾರತ-ಜಪಾನ್ 14ನೇ ವಾರ್ಷಿಕ ಶೃಂಗಸಭೆ; ಜಪಾನ್ ಪ್ರಧಾನಿಯಿಂದ 5 ಟ್ರಿಲಿಯನ್ ಯೆನ್​​ ಹೂಡಿಕೆ ನಿರೀಕ್ಷೆ

2020 ರಲ್ಲಿ ಎರಡೂ ದೇಶಗಳು ರಕ್ಷಣಾ ಪಡೆಗಳ ನಡುವೆ ಆಹಾರ, ಇಂಧನ ಮತ್ತು ಸರಬರಾಜುಗಳ ಪರಸ್ಪರ ವಿನಿಮಯವನ್ನು ಅನುಮತಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಈ ಭೇಟಿಯಲ್ಲಿ ಜಪಾನ್ ಮತ್ತು ಭಾರತವು ನಿಕಟ ದ್ವಿಪಕ್ಷೀಯ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುವ ನಿರೀಕ್ಷೆಯಿದೆ.

ಇಂದಿನಿಂದ 2 ದಿನಗಳ ಕಾಲ ಭಾರತ-ಜಪಾನ್ 14ನೇ ವಾರ್ಷಿಕ ಶೃಂಗಸಭೆ; ಜಪಾನ್ ಪ್ರಧಾನಿಯಿಂದ 5 ಟ್ರಿಲಿಯನ್ ಯೆನ್​​ ಹೂಡಿಕೆ ನಿರೀಕ್ಷೆ
ಫುಮಿಯೊ ಕಿಶಿದಾ - ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 19, 2022 | 2:54 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆಹ್ವಾನದ ಮೇರೆಗೆ ಜಪಾನ್ ಪ್ರಧಾನ ಮಂತ್ರಿ  ಫುಮಿಯೊ ಕಿಶಿದಾ (Fumio Kishida) ಅವರು 14ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಂದಿನಿಂದ (ಶನಿವಾರ) 2 ದಿನಗಳ ಅಧಿಕೃತ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಉಭಯ ನಾಯಕರು ನಡೆಸುತ್ತಿರುವ ಭಾರತದಲ್ಲಿನ ಚೊಚ್ಚಲ ಶೃಂಗಸಭೆ ಇದಾಗಿದೆ. ಈ ಮೊದಲಿನ ಭಾರತ-ಜಪಾನ್ ವಾರ್ಷಿಕ ಶೃಂಗಸಭೆ 2018 ಅಕ್ಟೋಬರ್ ನಲ್ಲಿ ಟೋಕಿಯೊದಲ್ಲಿ ಜರುಗಿತ್ತು. ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಐದು ವರ್ಷಗಳ ಅವಧಿಯಲ್ಲಿ ಭಾರತಕ್ಕೆ $42 ಬಿಲಿಯನ್ (5 ಟ್ರಿಲಿಯನ್ ಯೆನ್) ಹೂಡಿಕೆಯನ್ನು ನೀಡಲಿದ್ದಾರೆ ಎಂದು ಜಪಾನಿನ ಪತ್ರಿಕೆ ನಿಕ್ಕಿ ಏಷ್ಯಾ ವರದಿ ಮಾಡಿದೆ.  ಕೊನೆಯದಾಗಿ ಭಾರತ-ಜಪಾನ್ ಶೃಂಗಸಭೆ 2018 ರಲ್ಲಿ ಟೋಕಿಯೊದಲ್ಲಿ ನಡೆಯಿತು. ಆಗಿನ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಭಾರತಕ್ಕೆ ಮತ್ತು ಮೋದಿಯವರ ತವರು ರಾಜ್ಯವಾದ ಗುಜರಾತ್‌ಗೆ ಒಂದು ವರ್ಷದ ಮೊದಲು ಭೇಟಿ ನೀಡಿದ್ದರು. ಅಬೆ 2014 ರಲ್ಲಿ ಐದು ವರ್ಷಗಳಲ್ಲಿ 3.5 ಟ್ರಿಲಿಯನ್ ಯೆನ್ ಹೂಡಿಕೆಯನ್ನು ಘೋಷಿಸಿದರು. ಜಪಾನ್ ತನ್ನ ಬುಲೆಟ್ ಟ್ರೈನ್ ತಂತ್ರಜ್ಞಾನದ ಮೂಲಕ ಭಾರತದ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೈಸ್ಪೀಡ್ ರೈಲ್ವೇಗೆ ಬೆಂಬಲ ನೀಡುತ್ತಿದೆ.

2020 ರಲ್ಲಿ ಎರಡೂ ದೇಶಗಳು ರಕ್ಷಣಾ ಪಡೆಗಳ ನಡುವೆ ಆಹಾರ, ಇಂಧನ ಮತ್ತು ಸರಬರಾಜುಗಳ ಪರಸ್ಪರ ವಿನಿಮಯವನ್ನು ಅನುಮತಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಈ ಭೇಟಿಯಲ್ಲಿ ಜಪಾನ್ ಮತ್ತು ಭಾರತವು ನಿಕಟ ದ್ವಿಪಕ್ಷೀಯ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುವ ನಿರೀಕ್ಷೆಯಿದೆ. ಅದರ ಭಾಗವಾಗಿ ಮುಂಬೈ-ಅಹಮದಾಬಾದ್ ಕಾರಿಡಾರ್‌ನ ಆಚೆಗೆ ಭಾರತದಲ್ಲಿ ಬುಲೆಟ್ ರೈಲು ಯೋಜನೆಯನ್ನು ವಿಸ್ತರಿಸಲು ಆರ್ಥಿಕ ಸಹಕಾರ ಟಿಪ್ಪಣಿಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಉಭಯ ನಾಯಕರು ಚೀನಾ ಮತ್ತು ಇಂಡೋ-ಪೆಸಿಫಿಕ್ ಬಗ್ಗೆಯೂ ಚರ್ಚಿಸಲಿದ್ದಾರೆ. ಭಾರತ ಮತ್ತು ಜಪಾನ್ ಕ್ವಾಡ್‌ನ ಭಾಗವಾಗಿದೆ, ಇದು ಯುಎಸ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿರುವ ಭದ್ರತಾ ಚೌಕಟ್ಟಾಗಿದೆ. “ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ನಡೆಸುತ್ತಿರುವ ಈ ಹೊತ್ತಲ್ಲಿ ನಾನು ಅಂತರರಾಷ್ಟ್ರೀಯ ಏಕತೆಯ ಮಹತ್ವವನ್ನು ಒತ್ತಿಹೇಳಲು ಬಯಸುತ್ತೇನೆ ಎಂದು ಭೇಟಿಯ ಮೊದಲು ಕಿಶಿದಾ ಹೇಳಿದರು.

ಫೆಬ್ರವರಿ 24 ರಂದು ಉಕ್ರೇನ್ ಮೇಲೆ  ರಷ್ಯಾ  ಆಕ್ರಮಣ ಪ್ರಾರಂಭವಾದಾಗಿನಿಂದ ಜಪಾನ್ ಡಜನ್ಗಟ್ಟಲೆ ರಷ್ಯಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಇದು ಉಕ್ರೇನಿಯನ್ ನಿರಾಶ್ರಿತರನ್ನು ಸಹ ಸ್ವೀಕರಿಸುತ್ತಿದೆ.

ಇದನ್ನೂ ಓದಿ:ಹಣದುಬ್ಬರ ಎಲ್ಲಾ ಭಾರತೀಯರ ಮೇಲೆ ಹೇರಿದ ತೆರಿಗೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ