Viral Video: ಹಲ್ಲಿನ ಮೂಲಕ ಒಟ್ಟಿಗೆ ಐದು ಕಾರುಗಳನ್ನು ಎಳೆದು ವಿಶ್ವ ದಾಖಲೆ ಬರೆದ ಟ್ರಾಯ್ ಕಾನ್ಲೆ ಮ್ಯಾಗ್ನುಸನ್, ವೈರಲ್ ವಿಡಿಯೋ ಇಲ್ಲಿದೆ

ಆಸ್ಟ್ರೇಲಿಯಾದ ಬ್ಯಾಂಕ್‌ಸ್ಟೌನ್‌ನಲ್ಲಿರುವ ವ್ಯಕ್ತಿಯೊಬ್ಬರು ಐದು ಕಾರುಗಳನ್ನು ಹಗ್ಗಕಟ್ಟಿ ತಮ್ಮ ಹಲ್ಲುಗಳಿಂದ ಎಳೆದು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕಾರುಗಳನ್ನು ಎಳೆಯುವ ವಿಡಿಯೋ ಇಲ್ಲಿದೆ ನೋಡಿ.

Viral Video: ಹಲ್ಲಿನ ಮೂಲಕ ಒಟ್ಟಿಗೆ ಐದು ಕಾರುಗಳನ್ನು ಎಳೆದು ವಿಶ್ವ ದಾಖಲೆ ಬರೆದ ಟ್ರಾಯ್ ಕಾನ್ಲೆ ಮ್ಯಾಗ್ನುಸನ್, ವೈರಲ್ ವಿಡಿಯೋ ಇಲ್ಲಿದೆ
ವಿಶ್ವ ದಾಖಲೆ ಬರೆದ ಟ್ರಾಯ್ ಕಾನ್ಲೆ-ಮ್ಯಾಗ್ನಸ್ಸನ್
Follow us
TV9 Web
| Updated By: Rakesh Nayak Manchi

Updated on:Jul 08, 2022 | 2:37 PM

ಆಸ್ಟ್ರೇಲಿಯಾದ ಬ್ಯಾಂಕ್‌ಸ್ಟೌನ್‌ನಲ್ಲಿರುವ ವ್ಯಕ್ತಿಯೊಬ್ಬರು ಐದು ಕಾರುಗಳನ್ನು ಹಗ್ಗಕಟ್ಟಿ ತಮ್ಮ ಹಲ್ಲುಗಳಿಂದ ಎಳೆದು ಬಳಸಿ ಗಿನ್ನೆಸ್ ವಿಶ್ವ ದಾಖಲೆ (Guinness World Record) ನಿರ್ಮಿಸಿದ್ದಾರೆ. ಟ್ರಾಯ್ ಕಾನ್ಲೆ ಮ್ಯಾಗ್ನುಸನ್ ಅವರು ನವೆಂಬರ್ 17, 2021 ರಂದು ಐದು SUVಗಳನ್ನು ಕೇವಲ ಹಲ್ಲುಗಳ ಸಹಾಯದಿಂದ ಎಳೆಯುವ ಮೂಲಕ ಈ ಸಾಧನೆಯನ್ನು ಪ್ರದರ್ಶಿಸಿದರು. ಅವರು ವಿಶ್ವದಾಖಲೆ ಮಾಡಲು ಪ್ರಯತ್ನಿಸುತ್ತಿರುವ ಹಳೆಯ ವೀಡಿಯೊವನ್ನು ಗಿನ್ನೆಸ್ ವಿಶ್ವ ದಾಖಲೆಗಳು ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಹಂಚಿಕೊಳ್ಳಲಾಗಿದೆ. “ಟ್ರಾಯ್ ಕಾನ್ಲಿ ಮ್ಯಾಗ್ನುಸನ್ ಕೇವಲ ಹಲ್ಲಿನ ಸಹಾಯದಿಂದ 5 ಕಾರುಗಳನ್ನು ಎಳೆದಿದ್ದಾರೆ” ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ.

ಇದನ್ನೂ ಓದಿ: Viral Video: ಹಲವು ಅಡಿಗಳಷ್ಟು ಎತ್ತರದಲ್ಲಿ ಕ್ರೇನ್​ನಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿ, ಮುಂದೇನಾಯ್ತು ಎಂದು ಈ ವಿಡಿಯೋ ನೋಡಿ

ವೈರಲ್ ವಿಡಿಯೋ(Viral Video)ದಲ್ಲಿ ನಾವು ಐದು ಎಸ್​ಯುವಿ ಕಾರುಗಳನ್ನು ಪರಸ್ಪರ ಹಗ್ಗಗಳಿಂದ ಕಟ್ಟಿರುವುದನ್ನು ನೋಡಬಹುದು ಮತ್ತು ಮುಂಭಾಗದಲ್ಲಿರುವ ಕಾರಿಗೆ ಕಟ್ಟಿದ ಹಗ್ಗವನ್ನು ಟ್ರಾಯ್ ಅವರು ತನ್ನ ಹಲ್ಲುಗಳಲ್ಲಿ ಹಿಡಿದಿದಿದ್ದಾರೆ. ನಂತರ ಅವರು ನಿಧಾನವಾಗಿ ಹಿಂದಕ್ಕೆ ಹೆಜ್ಜೆಗಳನ್ನು ಹಾಕುತ್ತಾ ಕಾರುಗಳನ್ನು ಎಳೆದಿದ್ದಾರೆ.

2021ರ ನವೆಂಬರ್​ನಲ್ಲಿ ಗಿನ್ನೆಸ್ ವಿಶ್ವ ದಾಖಲೆ ದಿನವನ್ನು ಆಚರಿಸಲು ಟ್ರಾಯ್ ರೆಕಾರ್ಡ್ ಮಾಡಲು ಪ್ರಯತ್ನಿಸಿದರು. ಅವರು ಕೇವಲ ಹಲ್ಲಿನ ಸಹಾಯದಿಂದ 100 ಅಡಿಗಳವರೆಗೆ ವಾಹನಗಳನ್ನು ತಳ್ಳುವುದು ಸೇರಿದಂತೆ ಹಲವಾರು ಸಾಹಸಗಳನ್ನು ಮಾಡಿ ವಿವಿಧ ಪ್ರಶಸ್ತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಹಲವಾರು ಸ್ಥಳೀಯ ದತ್ತಿಗಳಿಗೆ ಹಣವನ್ನು ಸಂಗ್ರಹಿಸಲು ತಮ್ಮ ದಾಖಲೆಯ ಪ್ರಯತ್ನಗಳನ್ನು ಬಳಸುತ್ತಾರೆ. ಆ ಮೂಲಕ ಅವರು ಸಾಮಾಜಿಕ ಸಹಾಯಕರಾಗಿಯೂ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: Viral Video: ನೀರು ತುಂಬಿದ ರಸ್ತೆಯಲ್ಲಿ ಹಾಯಾಗಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್

ಒಂದು ದಿನದ ಹಿಂದೆ ಗಿನ್ನೆಸ್ ದಾಖಲೆ ಖಾತೆಯ ಮೂಲಕ ಪೋಸ್ಟ್ ಮಾಡಲಾದ ಈ ವಿಡಿಯೋಗೆ ಸುಮಾರು 9,000ಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದು, ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕೇವಲ ಹಲ್ಲುಗಳಿಂದ ಐದು ವಾಹನಗಳನ್ನು ಎಳೆಯಬಲ್ಲ ವ್ಯಕ್ತಿಯ ಶಕ್ತಿಯನ್ನು ಶ್ಲಾಘಿಸಿ ಹಲವರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಒಬ್ಬರು “ಸ್ಟ್ರಾಂಗ್ ವರ್ಕ್” ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು “ಇದು ಪರಿಣಾಮಕಾರಿ” ಎಂದು ಕಾಮೆಂಟ್ ಮಾಡಿದ್ದಾರೆ.

ಕೆಲವರು ಅವರನ್ನು ಅಪಹಾಸ್ಯ ಕೂಡ ಮಾಡಿದ್ದಾರೆ. ಓರ್ವ ಇನ್ಸ್ಟಾಗ್ರಾಮ್ ಬಳಕೆದಾರ, “ಈ ಮನುಷ್ಯನು ಪ್ರತಿದಿನ ಕಲ್ಲುಗಳನ್ನು ತಿನ್ನುತ್ತಾನೆ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದರೆ, ಇನ್ನೊಬ್ಬರು “ಇದು ಅವನ ಕುತ್ತಿಗೆ, ಭುಜಗಳು ಮತ್ತು ಬೆನ್ನು ನೋಯಿಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಮದುವೆ ಮನೆಯಲ್ಲಿ ಮೋಜು ಮಸ್ತಿ ವೇಳೆ ಕೈಯಲ್ಲಿ ಪಟಾಕಿ ಹಿಡಿದುಕೊಂಡು ಅವಾಂತರ ಸೃಷ್ಟಿಸಿದ ಕುಡುಕ

Published On - 2:11 pm, Fri, 8 July 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ