ಬ್ರಿಟನ್ನಿನ ಪ್ರಸಕ್ತ ರಾಜಕೀಯ ವಿಪ್ಲವದ ಹರಿಕಾರ ರಿಷಿ ಸುನಾಕ್ ಆ ದೇಶದ ಮುಂದಿನ ಪ್ರಧಾನ ಮಂತ್ರಿಯೇ?

ಸುನಾಕ್ ಅವರು ಬ್ರಿಟನ್ನಿನ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೂಡಲೇ ಬ್ರಿಟನ್ ಸಂಸತ್ತಿನಲ್ಲಿ ರಾಜೀನಾಮೆಗಳ ಸರಣಿ ಆರಂಭವಾಯಿತು. ಅಲ್ಲಿನ ಬುಕ್ ಮೇಕರ್ ಗಳ ಪ್ರಕಾರ ಬ್ರಿಟನ್ನಿನ ಮುಂದಿನ ಪ್ರಧಾನ ಮಂತ್ರಿ ಸ್ಥಾನಕ್ಕೆ ಸುನಾಕ್ ಮತ್ತು ರಕ್ಷಣಾ ಸಚಿವ ಪೆನ್ನಿ ಮೊರ್ಡಾಂಟ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಬ್ರಿಟನ್ನಿನ ಪ್ರಸಕ್ತ ರಾಜಕೀಯ ವಿಪ್ಲವದ ಹರಿಕಾರ ರಿಷಿ ಸುನಾಕ್ ಆ ದೇಶದ ಮುಂದಿನ ಪ್ರಧಾನ ಮಂತ್ರಿಯೇ?
ಪತ್ನಿ ಅಕ್ಷತಾ ಜೊತೆ ರಿಷಿ ಸುನಾಕ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 08, 2022 | 8:00 AM

ಲಂಡನ್: ಯುನೈಟೆಡ್ ಕಿಂಗ್ಡಮ್ ನಲ್ಲಿ (United Kingdom) ರಾಜಕೀಯ ವಿಪ್ಲವ ಜಾರಿಯಲ್ಲಿರುವುದು ನಮಗೆಲ್ಲ ಗೊತ್ತಿರುವ ಸಂಗತಿಯೇ. ಇದನ್ನು ಶುರುಮಾಡಿದ್ದು ನಮ್ಮ ಇನ್ಫಿ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಾಕ್ (Rishi Sunak) ಅವರಾ? ಅವರಿಂದಾಗೇ ಬೊರಿಸ್ ಜಾನ್ಸನ್ (Boris Johnson) ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರಾ ಎಂಬ ಗುಮಾನಿ ಬಹಳಷ್ಟು ಜನರನ್ನು ಕಾಡುತ್ತಿದೆ, ಅಷ್ಟ್ಯಾಕೆ ಬ್ರಿಟನ್ನಿನ ಮುಂದಿನ ಪ್ರಧಾನ ಮಂತ್ರಿ ಅವರೇ ಆಂತ ಕೂಡ ಹೇಳಲಾಗುತ್ತಿದೆ. ಹಾಗೇನಾದರೂ ಆಗಿದ್ದೇಯಾದಲ್ಲಿ ಅವರು ಭಾರತೀಯ ಮೂಲದ ಮೊಟ್ಟಮೊದಲ ಬ್ರಿಟಿಷ್ ಪ್ರಧಾನಿ ಮಂತ್ರಿ ಎನಿಸಿಕೊಳ್ಳಲಿದ್ದಾರೆ.

ನಿಮಗೆ ಗೊತ್ತಿದೆ, ಸುನಾಕ್ ಅವರು ಬ್ರಿಟನ್ನಿನ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೂಡಲೇ ಬ್ರಿಟನ್ ಸಂಸತ್ತಿನಲ್ಲಿ ರಾಜೀನಾಮೆಗಳ ಸರಣಿ ಆರಂಭವಾಯಿತು. ಅಲ್ಲಿನ ಬುಕ್ ಮೇಕರ್ ಗಳ ಪ್ರಕಾರ ಬ್ರಿಟನ್ನಿನ ಮುಂದಿನ ಪ್ರಧಾನ ಮಂತ್ರಿ ಸ್ಥಾನಕ್ಕೆ ಸುನಾಕ್ ಮತ್ತು ರಕ್ಷಣಾ ಸಚಿವ ಪೆನ್ನಿ ಮೊರ್ಡಾಂಟ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಕೋವಿಡ್ ಪಿಡುಗು ಉತ್ತುಂಗದಲ್ಲಿದ್ದಾಗ ಸುನಾಕ್ ಅವರು ಉದ್ಯಮ ಮತ್ತು ಕಾರ್ಮಿಕರಿಗಾಗಿ ಬಿಲಿಯನ್ ಗಟ್ಟಲೆ ಪೌಂಡ್ ನೆರವಿನ ಪ್ಯಾಕೇಜ್ ಗಳನ್ನು ಘೋಷಿಸಿ ನಂತರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದ ಬಳಿಕ ಬ್ರಿಟನ್ನಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದರು.

‘ಡಿಶಿ’ ಎಂಬ ಉಪನಾಮದಿಂದ ಖ್ಯಾತರಾಗಿರುವ ರಿಷಿ, ಇತ್ತೀಚಿಗೆ ತಮ್ಮ ಹೆಂಡತಿ ಅಕ್ಷತಾ ಮೂರ್ತಿಯವರ ಡೋಮ್-ರಹಿತ ತೆರಿಗೆ ಸ್ಟೇಟಸ್, ತಾನು ಹೊಂದಿರುವ ಯುಎಸ್ ಹಸಿರು ಕಾರ್ಡ್ ಮತ್ತು ಬ್ರಿಟನ್ನಿನ ಜೀವನ ನಿರ್ವಹಣೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಬಹಳ ವಿಳಂಬ ಮಾಡಿದ್ದು-ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ವಿವಾದಕ್ಕೀಡಾಗಿದ್ದರು,

ಯಾವತ್ತೂ ಮದ್ಯವ್ಯಸನಿಯಾಗಿರದ ರಿಷಿ ಲಾಕ್ ಡೌನ್ ಸಮಯದಲ್ಲಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಜಾರಿಯಲ್ಲಿದ್ದ ನಿಯಮಗಳನ್ನು ಉಲ್ಲಂಘಿಸಿ ಡೌನಿಂಗ್ ಸ್ಟ್ರೀಟ್ ನಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿದ್ದಕ್ಕೆ ಜುಲ್ಮಾನೆ ತೆತ್ತಿದ್ದರು.

ರಿಷಿ ಸುನಾಕ್ ಅವರು ಅಜ್ಜಿ-ತಾತಂದಿರು ಪಂಜಾಬ್ ನವರಾಗಿದ್ದಾರೆ. ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿಯವರನ್ನು 2009 ರಲ್ಲಿ ಮದುವೆಯಾದ ರಿಷಿಗೆ ಅಕ್ಷತಾ ಅವರಿಂದ ಎರಡು ಹೆಣ್ಣು ಮಕ್ಕಳಿವೆ.

ಇದನ್ನೂ ಓದಿ:   ಕೋವಿಡ್-19 ತಂದೊಡ್ಡುವ ಅಪಾಯದ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​ಗೆ ಅರಿವಿರಲಿಲ್ಲ: ಆಪ್ತನ ಅರೋಪ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ