ನವದೆಹಲಿ: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪ್ರಮುಖ ಮೈಕ್ರೊಬ್ಲಾಗಿಂಗ್ ಪ್ಲಾಟ್ಫಾರ್ಮ್ ಎನಿಸಿಕೊಂಡಿರುವ ಟ್ವಿಟ್ಟರ್ ಸಂಸ್ಥೆಗೆ ಭಾರತ ಸರ್ಕಾರವು ಕೊವಿಡ್ ಪಿಡುಗಿನ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಟೂಲ್ಕಿಟ್ ಒಂದನ್ನು ಸೃಷ್ಟಿಸಿ ಅದನ್ನು ದುರ್ಬಲಗೊಳಿಸಲು, ಹಳಿ ತಪ್ಪಿಸಲು ಮತ್ತು ಅಪಖ್ಯಾತಿಗೊಳಿಸಲು ಕೆಲ ರಾಜಕೀಯ ನಾಯಕರು ಕುಯಕ್ತಿಯ ಮಿಡಿಯಾ ಟ್ಯಾಗ್ ಬಳಸಿ ಮಾಡುತ್ತಿರುವ ಪ್ರಯತ್ನಗಳ ಕುರಿತು ಕಠಿಣ ಪದಗಳ ಒಂದು ಸೂಚನೆಯನ್ನು ಕಳಿಸಿದೆ.
ಸದರಿ ವಿಷಯದ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ಅಧಿಕಾರಿಯೊಬ್ಬರು, ಈಗಾಗಲೇ ಈ ಬಗ್ಗೆ ಸಂಬಂಧಪಟ್ಟ ಪಾರ್ಟಿಯಿಂದ ಸ್ಥಳೀಯ ಕಾನೂನು ಎಜೆನ್ಸಿಯೊಂದಿಗೆ ದೂರನ್ನು ದಾಖಲಿಸಲಾಗಿದ್ದು ಟೂಲ್ಕಿಟ್ನ ಸತ್ಯಾಸತ್ಯತೆ ಬಗ್ಗೆ ತನಿಖೆ ಜಾರಿಯಲ್ಲಿದೆ ಎಮದು ಸಚಿವಾಲಯ ತಿಳಿಸಿದೆ ಎಂದು ಹೇಳಿದರು.
‘ಕುಯುಕ್ತಿಯ ಮಿಡಿಯಾ ಟ್ಯಾಗ್ ಬಳಸುವ ಟ್ವಿಟ್ಟರ್ ಸಂಸ್ಥೆಯ ನಿರ್ಧಾರ ಒಂದು ತೀರ್ಪಿನಂತಿದ್ದು, ಪೂರ್ವಾಗ್ರಹ ಪೀಡಿತವಾಗಿದೆ, ಸ್ಥಳೀಯ ಕಾನೂನು ಏಜೆನ್ಸಿಯು ತನೀಖೆಯುನ್ನು ಕೈಗೆತ್ತಿಕೊಳ್ಳುತ್ತಿದೆ ಮತ್ತು ಅದರ ಸತ್ಯಾಸತ್ಯತೆಯನ್ನು ಪತ್ತೆ ಮಾಡಲಿದೆ. ಈ ವಿಷಯದಲ್ಲಿ ಟ್ವಿಟ್ಟರ್ ಏಕಪಕ್ಷೀಯವಾಗಿ ನಿರ್ಣಯಕ್ಕೆ ಬಂದು ವಿವೇಚನೆಯಿಲ್ಲದೆ ‘ಮ್ಯಾನಿಪುಲೇಟೆಡ್ ಮಿಡಿಯಾ’ ಎಂದು ಟ್ಯಾಗ್ ಮಾಡಿದೆ, ಟ್ವಿಟ್ಟರ್ನ ಈ ಟ್ಯಾಗಿಂಗ್, ಪೂರ್ವಾಗ್ರಹ ಪೀಡಿತವಾಗಿದೆ ಮತ್ತು ಸ್ಥಳೀಯ ಕಾನೂನು ಏಜೆನ್ಸಿ ನಡೆಸುತ್ತಿರುವ ತನಿಖೆಗೆ ಬಣ್ಣ ಬಳಿಯುವ ಪ್ರಯತ್ನವಾಗಿದೆ,’ ಅಂತ ಸಚಿವಾಲಯ ನೋಟೀಸ್ನಲ್ಲಿ ಹೇಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಅವರು ಮೇ 18ರಂದು ಮಾಡಿದ ಪೋಸ್ಟ್ಗೆ ‘ಮ್ಯಾನಿಪುಲೇಟೆಡ್ ಮೀಡಿಯಾ’ ಎಂದು ಟ್ವಿಟ್ಟರ್ ಟ್ಯಾಗ್ ಮಾಡಿದ ಕೆಲವೇ ಗಂಟೆಗಳ ನಂತರ ಸರ್ಕಾರದಿಂದ ನಿರ್ದೇಶನ ಹೊರಬಿದ್ದಿದೆ. ತಮ್ಮ ಟ್ವೀಟ್ನಲ್ಲಿ ಪಾತ್ರಾ ಅವರು ಕಾಂಗ್ರೆಸ್ ಪಕ್ಷವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿಗೆ ಮಸಿ ಬಳಿಯುವಂಥ ಒಂದು ಪತ್ರವನ್ನು ಸರ್ಕ್ಯುಲೇಟ್ ಮಾಡುತ್ತಿದೆ ಎಂದು ಅರೋಪಿಸಿದ್ದರು. ಈ ಟೂಲ್ಕಿಟ್ ಕೋವಿಡ್ ವಿರುದ್ಧ ಭಾರತ ಸರ್ಕಾರ ನಡೆಸುತ್ತಿರುವ ಮತ್ತು ಅದನ್ನು ನಿರ್ವಹಿಸುತ್ತಿರುವ ರೀತಿ, ಕೇಂದ್ರೀಯ ವಿಸ್ತಾ ಯೋಜನೆಗಳ ಬಗ್ಗೆ ನೆಗೆಟಿವ್ ಅಭಿಪ್ರಾಯ ಹುಟ್ಟಿಸಲು ಹರಿಬಿಡಲಾಗಿದೆ ಎಂದು ಪಾತ್ರ ಆರೋಪಿಸಿದ್ದರು.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾಗಿರುವ ಸ್ಮೃತಿ ಇರಾನಿ, ರವಿಶಂಕರ ಪ್ರಸಾದ್, ಹರ್ದೀಪ್ ಪುರಿ, ಅನುರಾಗ್ ಠಾಕೂರ್ ಮತ್ತು ಪಿಯುಷ್ ಗೋಯೆಲ್ ಪಾತ್ರಾ ಅವರ ಟ್ವೀಟನ್ನು ಪುಷ್ಠೀಕರಿಸಿದ್ದರು.
ಇದಕ್ಕೆ ಉತ್ತರವಾಗಿ ಕಾಂಗ್ರೆಸ್, ಕೊವಿಡ್-19 ಮೇಲಿನ ಡಾಕ್ಯುಮೆಂಟನ್ನು ಸಲ್ಲದ ರೀತಿಯಲ್ಲಿ ಅರ್ಥೈಸಿ ವಿರೋಧ ಪಕ್ಷದ ಹೆಸರಿಗೆ ಕಳಂಕ ತರುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದೆ. ಪ್ಲಾಟ್ಫಾರ್ಮ್ ಅನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಪಾತ್ರಾ ಮತ್ತು ಬಿಜೆಪಿ ನಾಯಕರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಅದು ಟ್ವಿಟ್ಟರ್ಗೆ ಪತ್ರ ಬರೆದಿದೆ.
‘ಟ್ವಿಟ್ಟರ್ನ ಏಕಪಕ್ಷೀಯ ಕ್ರಮವು ನ್ಯಾಯಸಮ್ಮತವಾದ ತನಿಖಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವದರಿಂದ ಅದು ಅನಿಚಿತವೆನಿಸುತ್ತದೆ, ಅಸಲಿಗೆ ಅದರ ಅಗತ್ಯವೇ ಇಲ್ಲ,’ ಎಂದು ಸಚಿವಾಲಯದ ನೋಟಿಸ್ನಲ್ಲಿ ಹೇಳಲಾಗಿದೆ. ಟ್ವಿಟ್ಟರ್ನ ಕ್ರಮವು ಅದರ ವಿಶ್ವಾಸಾರ್ಹತೆಗೆ ಧಕ್ಕೆ ತಂದೊಡ್ಡಲಿದೆ ಎಂದು ಸಹ ಸಚಿವಾಲಯ ಹೇಳಿದೆ.
ಟ್ವಿಟ್ಟರ್ ಪ್ಲಾಟ್ಫಾರ್ಮ್ ಮೂಲಕ ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಿರುವವರಿಗೆ ಈ ಕ್ರಮದಿಂದ ಅದರ ವಿಶ್ವಾಸಾರ್ಹತೆ ಮತ್ತು ತಟಸ್ಥ ವೇದಿಕೆ ಎನ್ನುವುದರ ಬಗ್ಗೆ ಸಂಶಯ ಹುಟ್ಟಿಕೊಳ್ಳುತ್ತದೆ. ಜನಗಳ ನಡುವೆ ‘ಮಧ್ಯಸ್ಥಿಕೆ’ ನಿಭಾಯಿಸುವ ಅದರ ಪ್ರತಿಷ್ಠೆಯ ಮೇಲೂ ಪ್ರಶ್ನೆಯೇಳುತ್ತದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ನ್ಯಾಯಯುತ ಮತ್ತು ಸಮಾನತೆ ದೃಷ್ಟಿಯಿಂದ ಪೂರ್ವಾಗ್ರಹಪೀಡಿತ ಟ್ಯಾಗನ್ನು ತೆಗೆದು ಹಾಕುವಂತೆ ಸಚಿವಾಲಯವು ಟ್ವಿಟ್ಟರ್ಗೆ ಸೂಚಿಸಿದೆ.
ಪಾತ್ರಾ ಅವರ ಮೇ 18 ರ ಟ್ವೀಟ್ ಹೀಗಿತ್ತು: ‘ಪಿಡುಗಿನ ಈ ಸಂದರ್ಭದಲ್ಲಿ ತೊಂದರೆಯಲ್ಲಿರುವವರಿಗೆ ನೆರವು ಒದಗಿಸುವ #CongressToolKit ಅನ್ನು ನೋಡಿ ಸ್ನೇಹಿತರೇ. ಇದು ತನ್ನೊಂದಿಗೆ ಸ್ನೇಹದಿಂದಿರುವ ಪತ್ರಕರ್ತರು ಮತ್ತು ಪ್ರಭಾವಿಗಳ ನೆರವಿನಿಂದ ಒಂದು ಪಿಅರ್ ಚಟುವಟಿಕೆಯಂತೆ ಕಾಣುತ್ತದೆಯೇ ಹೊರತು ಆತ್ಮಪ್ರೇರೇಪಣೆಯಿಂದ ಮಾಡಿರುವ ಪ್ರಯತ್ನವೆನಿಸುವುದಿಲ್ಲ. ಕಾಂಗ್ರೆಸ್ ಅಜೆಂಡಾವನ್ನು ನೀವೊಮ್ಮೆ ಓದಿ: #CongressToolKitExposed’.f
Friends look at the #CongressToolKit in extending help to the needy during the Pandemic!
More of a PR exercise with the help of “Friendly Journalists” & “Influencers” than a soulful endeavour.
Read for yourselves the agenda of the Congress:#CongressToolKitExposed pic.twitter.com/3b7c2GN0re— Sambit Patra (@sambitswaraj) May 18, 2021
ಇದನ್ನೂ ಓದಿ: Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?
Published On - 12:39 am, Sat, 22 May 21