ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾನುವಾರ ಭೋಪಾಲ್‌ನಲ್ಲಿ (Bhopal) ಎಂಬಿಬಿಎಸ್ (MBBS) ಕೋರ್ಸ್ ಪುಸ್ತಕಗಳ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಉಪಸ್ಥಿತರಿದ್ದರು. ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದರೂ ಇಂಗ್ಲಿಷ್‌ನ ಜಾಲಕ್ಕೆ ಸಿಲುಕಿ ಹಲವು ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ವಿದ್ಯಾಭ್ಯಾಸವನ್ನೇ ತೊರೆದ ಬಡವರ ಮಕ್ಕಳ ಬದುಕಿನಲ್ಲಿ ಇಂದು ಅಮಿತ್ ಶಾ ಹೊಸ ಬೆಳಕು ತಂದಿದ್ದಾರೆ ಎಂದು ಸಿಎಂ ಚೌಹಾಣ್ ಹೇಳಿದರು. ದೇಶದಲ್ಲಿ ಹಿಂದಿ ಭಾಷೆಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಿದ ಮೊದಲ ರಾಜ್ಯ ಮಧ್ಯಪ್ರದೇಶ. ಆರಂಭದಲ್ಲಿ, ಅನಾಟಮಿ, ಫಿಸಿಯಾಲಜಿ ಮತ್ತು ಬಯೋಕೆಮಿಸ್ಟ್ರಿ ಒಳಗೊಂಡಂತೆ ಹಿಂದಿಯಲ್ಲಿ ಅಧ್ಯಯನ ಮಾಡಲು ಮೂರು ವಿಷಯಗಳನ್ನು ಆಯ್ಕೆ ಮಾಡಲಾಗಿದೆ.
97 ತಜ್ಞರ ತಂಡವು ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ 232 ದಿನಗಳಿಂದ ಪುಸ್ತಕಗಳ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು ಪುಸ್ತಕವನ್ನು ಇಂಗ್ಲಿಷ್‌ನಿಂದ ಹಿಂದಿಗೆ ಅನುವಾದ ಮಾಡಲಾಗುತ್ತಿದೆ.
ಈ ಕ್ರಮವು ಹಿಂದಿ ಮಾಧ್ಯಮದಲ್ಲಿ ಶಿಕ್ಷಣದ ಪ್ರಗತಿಯಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ ಎಂದು ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಭಾನುವಾರ ಹೇಳಿದ್ದಾರೆ.
MP | Today is a very important day for the education sector of India. Whenever history will be written in the coming days, this day will be written in golden letters: Union Home Minister Amit Shah at the launch of Hindi MBBS course books in Bhopal pic.twitter.com/n4LVkfvn9W
— ANI (@ANI) October 16, 2022
ಎಎನ್‌ಐ ಜೊತೆ ಮಾತನಾಡಿದ ಸಾರಂಗ್, “ಇದೊಂದು ದೊಡ್ಡ ದಿನ. ದೇಶದಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಪ್ರಾರಂಭವಾಗಲಿದೆ. ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪಠ್ಯಪುಸ್ತಕಗಳ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ. ಮೊದಲ ವರ್ಷದ ಅನಾಟಮಿ, ಫಿಸಿಯಾಲಜಿ ಮತ್ತು ಬಯೋಕೆಮಿಸ್ಟ್ರಿ ಪುಸ್ತಕಗಳನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
“ಇದು ನನಗೆ ಸಂತೋಷದ ವಿಷಯವಾಗಿದೆ. ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಸಾಧ್ಯವಾದರೆ, ಯಾವುದೇ ಕೋರ್ಸ್ ಹಿಂದಿಯಲ್ಲಿ ಸಾಧ್ಯ ಎಂಬುದು ಈಗ ಸ್ಪಷ್ಟವಾಗಿದೆ. ಇದು ಯುವಜನರ ಜೀವನದಲ್ಲಿ, ವಿಶೇಷವಾಗಿ ಹಿಂದಿ ಹಿನ್ನೆಲೆಯಿಂದ ಬಂದವರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ” ಎಂದು ಅವರು ಹೇಳಿದರು.
ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಿರುವುದು ಭಾವನಾತ್ಮಕ ಕ್ಷಣವಾಗಿದೆ ಎಂದು ಸಚಿವರು ಹೇಳಿದರು. “ನನ್ನ ತಂದೆ ಕೂಡ ಹಿಂದಿ ಸಾಹಿತ್ಯಾಸಕ್ತರಾಗಿದ್ದರು, ಅವರಿಗೂ ಅದರ ಕನಸಿತ್ತು, ಇಂದು ಅವರ ಆಶೀರ್ವಾದದಿಂದ ನಾನು ಅದನ್ನು ಪ್ರಾರಂಭಿಸುತ್ತಿದ್ದೇನೆ, ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡ ನಂತರ, ಇದಕ್ಕಿಂತ ದೊಡ್ಡ ಕೆಲಸ ಮಾಡಲಾಗಲಿಲ್ಲ, ಇಂಗ್ಲಿಷ್ ಭಾಷೆ ಗುಲಾಮಗಿರಿಯ ಸಂಕೇತ. ಹಿಂದಿ ಎಲ್ಲೋ ಹಿಂದುಳಿದಿತ್ತು” ಎಂದು ಸಾರಂಗ್ ಹೇಳಿದ್ದಾರೆ.
ಇದು ಸುಲಭದ ಕೆಲಸವಾಗಿರಲಿಲ್ಲ. ಆದರೆ ನಾವು ಅದನ್ನು ಅತ್ಯಂತ ಸುಲಭವಾದ ಭಾಷೆಯಲ್ಲಿ ತಯಾರಿಸಿದ್ದೇವೆ. ನಾವು ಇದನ್ನು ಸಿದ್ಧಪಡಿಸಿದ್ದೇವೆ ಆದ್ದರಿಂದ ಇದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ” ಎಂದು ಭಾಷಾಂತರದಲ್ಲಿ ತೊಡಗಿರುವ ತಜ್ಞರು ಎಎನ್ಐಗೆ ತಿಳಿಸಿದ್ದಾರೆ. ಮೆಡಿಕಲ್ ಬಯೋಕೆಮಿಸ್ಟ್ರಿಯ ಹೊಸ ಆವೃತ್ತಿಯು ಸೋಡಿಯಂ, ಪೊಟಾಸಿಯಂ, ವಾಟರ್ ಹೋಮಿಯೋಸ್ಟಾಸಿಸ್, ಬಯೋಕೆಮಿಸ್ಟ್ರಿ ಟೆಕ್ನಿಕ್ಸ್, ವಿಕಿರಣ, ರೇಡಿಯೋಐಸೋಟೋಪ್‌ಗಳು ಮತ್ತು ಪರಿಸರ ಮಾಲಿನ್ಯಕಾರಕಗಳು ಮತ್ತು ಟಾಕ್ಸಿನ್‌ಗಳನ್ನು ಒಳಗೊಂಡಿರುವ ಕೆಲವು ಹೊಸ ಅಧ್ಯಾಯಗಳ ತರ್ಜುಮೆಯನ್ನು ಒಳಗೊಂಡಿದೆ ಎಂದು ತಜ್ಞರು ಹೇಳಿದರು. ಇದಲ್ಲದೆ, ಮಾಹಿತಿ ಹೆಚ್ಚು ನೆನಪಿಡುವಂತಾಗಲು ಹಲವಾರು ಹೊಸ ಲೈನ್ ಡಯಾಗ್ರಂ, ಟೇಬಲ್ ಮತ್ತು ಟೆಕ್ಸ್ಟ್ ಬಾಕ್ಸ್ ಸೇರಿಸಲಾಗಿದೆ.