ಬಾಲಸೋರ್: ಕೇಂದ್ರ ಲೋಕಸೇವಾ ಆಯೋಗದ (UPSC) ಮೂಲಕ ನೇಮಕಗೊಂಡಿರುವ ಹಲವು ಅಧಿಕಾರಿಗಳನ್ನು ದರೋಡೆಕೋರರು ಎಂದು ಕೇಂದ್ರ ಸಚಿವ ಬಿಶ್ವೇಶ್ವರ್ ತುಡು (Bisheshwar Tudu) ಹೇಳಿರುವ ಹೇಳಿಕೆ ಇದೀಗ ವಿವಾದವನ್ನು ಸೃಷ್ಟಿಸಿದೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೋಳಿ ಕಳ್ಳನಿಗೆ ಶಿಕ್ಷೆಯಾಗಬಹುದಾದರೂ, ಖನಿಜ ಮಾಫಿಯಾ ನಡೆಸುವ ಅಧಿಕಾರಿಯನ್ನು ಮುಟ್ಟಲು ಸಾಧ್ಯವಿಲ್ಲ, ಏಕೆಂದರೆ ಈ ವ್ಯವಸ್ಥೆ ಅವರನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಿದರು. ಬಾಲಸೋರ್ ಜಿಲ್ಲೆಯ ಬಲಿಪಾಲ್‌ನಲ್ಲಿರುವ ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಬುಡಕಟ್ಟು ವ್ಯವಹಾರಗಳು ಮತ್ತು ಜಲಶಕ್ತಿ ರಾಜ್ಯ ಸಚಿವರು ಬಿಶ್ವೇಶ್ವರ್ ತುಡು ಯುಪಿಎಸ್‌ಸಿ ಅಧಿಕಾರಿಗಳು ಕೂಡ ಭೂ ಮಾಫಿಯಾದತಂಹ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಅವರು ಕೂಡ ದರೋಡೆಕೋರರು ಎಂದು ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ಪತ್ತೆಯಾಗಿದೆ, ವೀಡಿಯೊ ಕ್ಲಿಪ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಪಿಟಿಐ ವರದಿ ಮಾಡಿದೆ. ಯುಪಿಎಸ್‌ಸಿ ಮೂಲಕ ನೇಮಕಗೊಂಡ ಅಧಿಕಾರಿಗಳು ಅತ್ಯಂತ ಜ್ಞಾನವುಳ್ಳ ವ್ಯಕ್ತಿಗಳು ಮತ್ತು ಯಾವಾಗಲೂ ಉನ್ನತ ಹುದ್ದೆಗಳಲ್ಲಿರುತ್ತಾರೆ ಎಂಬ ಕಲ್ಪನೆ ನನಗಿತ್ತು. ಆದರೆ ಈ ಯುಪಿಎಸ್‌ಸಿ ಅರ್ಹತೆ ಪಡೆದವರಲ್ಲಿ ಹೆಚ್ಚಿನವರು ಡಕಾಯಿತರು ಎಂದು ನಾನು ಭಾವಿಸುತ್ತೇನೆ. ಆದರೆ ಎಲ್ಲ ಅಧಿಕಾರಿಗಳು ಡಕಾಯಿತರು ಎಂದು ನಾನು ಹೇಳುವುದಿಲ್ಲ. ಆದರೆ ಅವರಲ್ಲಿ ಕೇಲವರು ಕಳ್ಳರು ಇದ್ದರೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ;ಕಾಶ್ಮೀರ ಬಗ್ಗೆ ಹೇಳಿಕೆ ವಿವಾದದ ಬೆನ್ನಲ್ಲೇ ದೆಹಲಿಗೆ ಬಂದಿಳಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ
UPSC ದೇಶದ ಪ್ರಧಾನ ಕೇಂದ್ರ ನೇಮಕಾತಿ ಆಯೋಗವಾಗಿದೆ, ಇದು ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉನ್ನತ ಸರ್ಕಾರಿ ಅಧಿಕಾರಿಗಳನ್ನು ನೇಮಿಸುತ್ತದೆ. ನಾನು ಒಡಿಶಾ ಸಂಸದ, ದೆಹಲಿರುವ ನನ್ನ ಮನೆಯ ಹಿಂದೆ ಯುಪಿಎಸ್‌ಸಿ ಕಚೇರಿ ಇದೆ, ಈ ಬಗ್ಗೆ ನನಗೆ ತುಂಬಾ ಗೌರವ ಇತ್ತು, ಆದರೆ ಇದೀಗ ಬದಲಾಗಿದೆ ಎಂದು ಹೇಳಿದರು.
ಇಂತಹ ವಿದ್ಯಾವಂತರು ಇದ್ದರೆ ನಮ್ಮ ಸಮಾಜ ಏಕೆ ಭ್ರಷ್ಟಾಚಾರ ಮತ್ತು ಅನ್ಯಾಯದಲ್ಲಿ ಮುಳುಗಿದೆ? ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕತೆಯ ಕೊರತೆ. ನಮ್ಮಲ್ಲಿ ಆಧ್ಯಾತ್ಮಿಕ ಶಿಕ್ಷಣ ಮತ್ತು ಆಲೋಚನೆಗಳ ಕೊರತೆ. 2021ರಲ್ಲಿ ಮಯೂರ್‌ಭಂಜ್‌ನ ತಮ್ಮ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ ಸಚಿವರು.
Published On - 10:46 am, Mon, 10 April 23