ತ್ರಿಶೂಲ ಹಿಡಿದು ರಸ್ತೆಗಿಳಿದಿಲ್ಲವೆಂದರೆ ಮುಂದಿನ 5-7 ವರ್ಷಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗುತ್ತೆ: ಬಿಜೆಪಿ ಮುಖಂಡ
ಚುನಾವಣೆ (Election) ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರ ಹೇಳಿಕೆಗಳು ಹೆಚ್ಚಾಗತೊಡಗುತ್ತದೆ. ಕೆಲವೊಮ್ಮೆ ನಾಯಕರು ತಮ್ಮ ಮಿತಿಯನ್ನು ದಾಟಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.
ಚುನಾವಣೆ (Election) ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರ ಹೇಳಿಕೆಗಳು ಹೆಚ್ಚಾಗತೊಡಗುತ್ತದೆ. ಕೆಲವೊಮ್ಮೆ ನಾಯಕರು ತಮ್ಮ ಮಿತಿಯನ್ನು ದಾಟಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ನಾವು ತ್ರಿಶೂಲ ಹಿಡಿದು ರಸ್ತೆಗಿಳಿಯದಿದ್ದರೆ ಮುಂದಿನ 5-7 ವರ್ಷಗಳಲ್ಲಿ ಭಾರತವು ಮುಸ್ಲಿಂ ರಾಷ್ಟ್ರವಾಗಲಿದೆ ಎಂದು ಬಿಜೆಪಿ ಮುಖಂಡ ಜೈ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯುನೈಟೆಡ್ ಹಿಂದೂ ಫ್ರಂಟ್ ದೆಹಲಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಹಲವು ಮುಖಂಡರು ಭಾಗವಹಿಸಿದ್ದರು. ಮುಸ್ಲಿಂ ರಾಷ್ಟ್ರದ ಹೊರತಾಗಿ ಜೈ ಭಗವಾನ್ ಗೋಯಲ್ ಮುಸ್ಲಿಮರ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ. ಎಲ್ಲ ಮುಸ್ಲಿಮರು ಒಂದೇ ಎಂಬ ಕಾರಣಕ್ಕೆ ಯಾವುದೇ ಮುಸಲ್ಮಾನರೂ ಪಿಎಫ್‌ಐ ಅನ್ನು ವಿರೋಧಿಸಿಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ದೆಹಲಿ ಬಿಜೆಪಿ ಖಜಾಂಚಿ ರಾಮ್ ಅವತಾರ್ ಗುಪ್ತಾ ಮತ್ತು ಕೇಂದ್ರದ ಮಾಜಿ ಸಚಿವ ಸತ್ಯನಾರಾಯಣ್ ಜಟಿಯಾ ಕೂಡ ಭಾಗಿಯಾಗಿದ್ದರು.
ಮತ್ತಷ್ಟು ಓದಿ: ಶಿವಮೊಗ್ಗ ವಿಮಾನ ನಿಲ್ದಾಣದ ಕಮಲ ಚಿಹ್ನೆ ಮುಚ್ಚುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ
ಮುಸಲ್ಮಾನರ ಆರ್ಥಿಕ ಬಹಿಷ್ಕಾರಕ್ಕೂ ಕರೆ ನೀಡಿದರು ಮತ್ತು ಹಿಂದೂ ರಾಷ್ಟ್ರಕ್ಕಾಗಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಕೇಳಿಕೊಂಡರು. ಇತ್ತೀಚೆಗೆ, ಧರಮ್ ಸಂಸದ್ ದ್ವೇಷ ಭಾಷಣ ಪ್ರಕರಣದಲ್ಲಿ ಅಸಭ್ಯ ಭಾಷೆ ಬಳಸಿದ ಪ್ರಕರಣದಲ್ಲಿ ಎಫ್‌ಐಆರ್ ಮತ್ತು ಚಾರ್ಜ್‌ಶೀಟ್ ದಾಖಲಿಸಲು ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ