ನೀವು ಭಾವನಾತ್ಮಕವಾಗಿ ಸದೃಢರಾಗಿದ್ದೀರಿ ಎಂದು ತೋರಿಸುತ್ತೆ ಈ 5 ಚಿಹ್ನೆಗಳು, ಇದುವೇ ಸಂತೋಷದ ಮಂತ್ರ
ನೀವು ಭಾವನಾತ್ಮಕವಾಗಿ ಸದೃಢರಾಗಿದ್ದರೆ ಮಾತ್ರ ಯಾವುದೇ ಕಷ್ಟದ ಸಂದರ್ಭವನ್ನಾದರೂ ಸುಲಭವಾಗಿ ಎದುರಿಸಲು ಸಾಧ್ಯ. ಬಹಳಷ್ಟು ಬಾರಿ ನಾವು ಕೆಲವು ಸಮಸ್ಯೆಗಳಿಂದ ಅಸಮಾಧಾನಗೊಳ್ಳುತ್ತಲೇ ಇರುತ್ತೇವೆ, ಅವುಗಳನ್ನು ಪರಿಹರಿಸಿದಾಗ ನಾವು ಒತ್ತಡ ಮುಕ್ತರಾಗುತ್ತೇವೆ
ನೀವು ಭಾವನಾತ್ಮಕವಾಗಿ ಸದೃಢರಾಗಿದ್ದರೆ ಮಾತ್ರ ಯಾವುದೇ ಕಷ್ಟದ ಸಂದರ್ಭವನ್ನಾದರೂ ಸುಲಭವಾಗಿ ಎದುರಿಸಲು ಸಾಧ್ಯ. ಬಹಳಷ್ಟು ಬಾರಿ ನಾವು ಕೆಲವು ಸಮಸ್ಯೆಗಳಿಂದ ಅಸಮಾಧಾನಗೊಳ್ಳುತ್ತಲೇ ಇರುತ್ತೇವೆ, ಅವುಗಳನ್ನು ಪರಿಹರಿಸಿದಾಗ ನಾವು ಒತ್ತಡ ಮುಕ್ತರಾಗುತ್ತೇವೆ. ಇದು ನಮಗೆ ಮಾತ್ರವಲ್ಲ ನಮ್ಮ ಸುತ್ತಮುತ್ತಲು ಇರುವವರಿಗೂ ನೋವುಂಟು ಮಾಡುತ್ತದೆ. ಕೆಲವು ಕಾರಣಗಳಿಂದಾಗಿ ನಮ್ಮ ನಕಾರಾತ್ಮಕ ಭಾವನೆಗಳು ಮತ್ತು ನಕಾರಾತ್ಮಕ ನೆನಪುಗಳಿಂದ ಹಿಂದೆ ಸರಿಯಲು ನಮಗೆ ಸಾಧ್ಯವಾಗುತ್ತಿಲ್ಲ.
ಭಾವನಾತ್ಮಕವಾಗಿ ಸದೃಢರಾಗಿರುವುದು ಏಕೆ ಮುಖ್ಯ? ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು, ನಕಾರಾತ್ಮಕ ಭಾವನೆಗಳನ್ನು ತೊಡೆದುಹಾಕಬೇಕು ಎಂದು ಮನಶ್ಶಾಸ್ತ್ರಜ್ಞ ಸಾನಿಯಾ ಬೇಡಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ನೀವು ಭಾವನಾತ್ಮಕವಾಗಿ ದೃಢವಾಗಿದ್ದಾಗ ಮಾತ್ರ ನೀವು ದೈನಂದಿನ ಕಾರ್ಯಗಳನ್ನು ಚೆನ್ನಾಗಿ ನಿಭಾಯಿಸಬಹುದು. ನಿಮ್ಮ ವ್ಯಕ್ತಿತ್ವ ವಿಕಸನಗೊಳ್ಳುವುದು.
ನೀವು ಭಾವನಾತ್ಮಕವಾಗಿ ಬಲಿಷ್ಠರಾಗಿರುವ 5 ಚಿಹ್ನೆಗಳು ಇಲ್ಲಿವೆ ನಿಮ್ಮ ಭಾವನೆಗಳನ್ನು ಗುರುತಿಸುವುದು ನಾವು ಕೆಲವು ಕೆಟ್ಟ ಘಟನೆಗಳ ಬಗ್ಗೆ ಯೋಚನೆ ಮಾಡುತ್ತಾ ಕಳೆದು ಹೋದಾಗ, ನಮ್ಮ ಭಾವನೆಗಳನ್ನು ಗುರುತಿಸುವುದನ್ನು ಮರೆಯುತ್ತೇವೆ. ನಾವು ಕತ್ತಲನ್ನು ಮಾತ್ರ ನೋಡುತ್ತೇವೆ. ಮತ್ತೊಂದೆಡೆ, ನೀವು ನಕಾರಾತ್ಮಕ ಭಾವನೆಗಳನ್ನು ಜಯಿಸಿದಾಗ, ಸರಿ ಮತ್ತು ತಪ್ಪುಗಳನ್ನು ಗುರುತಿಸಲು ನೀವು ಕಲಿಯುತ್ತೀರಿ.
ಭಾವನೆಯಿಂದ ಓಡಿಹೋಗಬೇಡಿ ನಾವು ಯಾರಿಂದಾದಲೂ ನೋವು ಅನುಭವಿಸಿದರೆ ಅವರ ಮುಂದೆ ಹೋಗಲು ನಾಚಿಕೆ ಪಡುತ್ತೇವೆ, ನೋವು ಕೊಟ್ಟವರಿಗೇ ಏನೂ ಅನ್ನಿಸುತ್ತಿಲ್ಲ ಎಂದಾದರೆ ನೀವ್ಯಾಕೆ ಬೇಸರ ಮಾಡಿಕೊಳ್ಳಬೇಕು. ಅವರ ಮುಂದೆ ಹೋಗಿ ತಲೆ ಎತ್ತಿ ನಿಲ್ಲಿ. ನೀವು ಭಾವನಾತ್ಮಕವಾಗಿ ಬಲಶಾಲಿಯಾಗಿರುವಾಗ, ನಿಮ್ಮನ್ನು ನೋಯಿಸುವ ವ್ಯಕ್ತಿಯೊಂದಿಗೆ ಮಾತನಾಡಲು ನೀವು ಹಿಂಜರಿಯುವುದಿಲ್ಲ.
ಕೆಲವು ಮಾದರಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಗುರುತಿಸುವುದು ಭಾವನಾತ್ಮಕವಾಗಿ ಬಲವಾಗಿರಲು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಲಿಯುವುದು ಅತ್ಯಗತ್ಯ. ಇದು ಒಂದು ನಿರ್ದಿಷ್ಟ ಮಾದರಿಯನ್ನು ರಚಿಸುತ್ತದೆ. ವೃತ್ತಿಪರ ಜಗತ್ತಿನಲ್ಲಿ ಯಶಸ್ಸನ್ನು ಸಾಧಿಸುವುದು ಮುಖ್ಯವಾಗಿದೆ. ಇದರ ನಂತರ ನಾವು ಯಾವುದರ ಬಗ್ಗೆಯೂ ದುಃಖಿಸುವುದನ್ನು ನಿಲ್ಲಿಸುತ್ತೇವೆ.
ನಿಮ್ಮನ್ನು ನೀವು ನಂಬಿ ನಾವು ಭಾವನಾತ್ಮಕವಾಗಿ ದುರ್ಬಲರಾದಾಗ, ನಾವು ಮಾಡುವ ಮೊದಲ ಕೆಲಸವೆಂದರೆ ನಮ್ಮನ್ನು ನಂಬುವುದನ್ನು ನಿಲ್ಲಿಸುವುದು. ನಾವು ಮಾಡುವುದೆಲ್ಲವೂ ತಪ್ಪಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಗಡುವಿನೊಳಗೆ ಯಾವುದೇ ಕೆಲಸ ಪೂರ್ಣಗೊಳ್ಳುವುದಿಲ್ಲ. ನೀವು ನಿಮ್ಮನ್ನು ನಂಬಲು ಪ್ರಾರಂಭಿಸಿದರೆ, ಹಾಳಾದ ಕೆಲಸಗಳು ಸಹ ಮತ್ತೆ ಸರಿಯಾಗುತ್ತದೆ. ಕಳೆದುಹೋದ ವಿಶ್ವಾಸವು ಮರಳುವುದು.
ಮಾನಸಿಕ ಆರೋಗ್ಯ ನಿಮ್ಮ ಮನಸ್ಸು ಒತ್ತಡ ಹಾಗೂ ಖಿನ್ನತೆಯಿಂದ ಸುತ್ತುವರೆದಂತೆ ನಿಮಗೆ ಭಾಸವಾಗಬಹುದು. ನೀವೇ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಲು ಪ್ರಾರಂಭಿಸಿದ್ದೀರಿ ಎಂದಾದರೆ ನೀವು ಭಾವನಾತ್ಮಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಬಲಶಾಲಿಯಾಗಿದ್ದೀರಿ ಎಂದರ್ಥ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ