World Homeopathy Day 2023: ಭಾರತವು ಜಗತ್ತಿನ ಅತಿದೊಡ್ಡ ಹೋಮಿಯೋಪತಿ ಔಷಧ ತಯಾರಿಕಾ ಕೇಂದ್ರ

ಹೋಮಿಯೋಪತಿಯು 18ನೇ ಶತಮಾನದಲ್ಲಿ ಜರ್ಮನ್ ವೈದ್ಯ ಸ್ಯಾಮ್ಯುಯೆಲ್ ಹ್ಯಾನೆಮನ್ ಅವರು ಅಭಿವೃದ್ಧಿಪಡಿಸಿದ ಔಷಧ ವ್ಯವಸ್ಥೆಯಾಗಿದ್ದು, ಇದು ಅತ್ಯಂತ ಪರಿಣಾಮಕಾರಿ ವೈದ್ಯಕೀಯ ಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ.

World Homeopathy Day 2023: ಭಾರತವು ಜಗತ್ತಿನ ಅತಿದೊಡ್ಡ ಹೋಮಿಯೋಪತಿ ಔಷಧ ತಯಾರಿಕಾ ಕೇಂದ್ರ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 10, 2023 | 12:16 PM

ಹೋಮಿಯೋಪತಿಯು (Homeopathy) 200 ವರ್ಷಗಳಷ್ಟು ಹಳೆಯದಾದ ನೈಸರ್ಗಿಕ ಔಷಧವಾಗಿದೆ. ಹೋಮಿಯೋಪತಿ ಚಿಕಿತ್ಸಾ ಪರಿಹಾರಗಳು ಪರ್ಯಾಯ ವೈದ್ಯಕೀಯ ವ್ಯವಸ್ಥೆಯ ಭಾಗವಾಗಿದ್ದು, ಅದು ಸಂಪೂರ್ಣವಾಗಿ ನೈಸರ್ಗಿಕ ಚಿಕಿತ್ಸಾ ವಿಧಾನವಾಗಿದೆ. ಮತ್ತು ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಇದು ದೇಹದ ರಕ್ಷಣಾತ್ಮಕ ವ್ಯವಸ್ಥೆಯನ್ನು ಉತ್ತೇಜಿಸುವ ಕಡೆ ಕೆಲಸ ಮಾಡುತ್ತದೆ. ಇದು ಸುದೀರ್ಘವಾದ ಚಿಕಿತ್ಸೆಯಾಗಿದೆ. ಹೋಮಿಯೋಪತಿ ಚಿಕಿತ್ಸೆ ನಿಧಾನ ಪ್ರಕ್ರಿಯೆಯಾಗಿದ್ದು, ಇದು ರೋಗದ ಮೂಲವನ್ನು ಗುಣಪಡಿಸುವ ಗುರಿಯನ್ನು ಹೊಂದಿದೆ. ಹೋಮಿಯೋಪತಿಯ ಸಂಸ್ಥಾಪಕ ಡಾ. ಸ್ಯಾಮ್ಯುಯೆಲ್ ಹ್ಯಾನೆಮನ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಡಾ. ಸ್ಯಾಮ್ಯುಯೆಲ್ ಹ್ಯಾನೆಮನ್ ಅವರ 268ನೇ ಜನ್ಮದಿನವಾಗಿದೆ.

ವಿಶ್ವ ಹೋಮಿಯೋಪತಿ ದಿನದ ಇತಿಹಾಸ:

ಹೋಮಿಯೋಪತಿಯ ಸಂಸ್ಥಾಪಕ ಡಾ. ಸ್ಯಾಮ್ಯುಯೆಲ್ ಹ್ಯಾನೆಮನ್ ಅವರು ರೋಗಿಯ ಕಾಯಿಲೆಗೆ ಚಿಕಿತ್ಸೆ ನೀಡಲು, ರೋಗದ ಗುಣಲಕ್ಷಣಗಳನ್ನು ಉಂಟು ಮಾಡುವ ಪದಾರ್ಥಗಳನ್ನು ನಿರ್ವಹಿಸಬೇಕು ಎನ್ನುವ ಉದ್ದೇಶದಿಂದ ಹೋಮಿಯೋಪತಿ ಚಿಕಿತ್ಸಾ ವಿಧಾನವನ್ನು ಅವರು ಮೊದಲು ಕಂಡುಕೊಂಡರು. 18ನೇ ಶತಮಾನದ ಉತ್ತರಾರ್ಧದಲ್ಲಿ ‘ಸಿಮಿಲಿಯಾ ಸಿಮಿಲಿಬಸ್ ಕ್ಯುರೆಂಚರ್’ ತತ್ವವನ್ನು ಅಭಿವೃದ್ಧಿಪಡಿಸಿದರು. ಅಂದರೆ ‘ಇಷ್ಟವನ್ನು ಗುಣಪಡಿಸಲು ಅವಕಾಶ ಮಾಡಿಕೊಡಿ’ ಎಂದರ್ಥ. ಹೀಗಾಗಿ ಹೋಮಿಯೋಪತಿ ಲೈಕ್ ಕ್ಯೂರ್ಸ್ ಲೈಕ್’ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.

ಹೋಮಿಯೋಪತಿ ಮಹತ್ವ:

ಹೋಮಿಯೋಪತಿಯು ರೋಗವನ್ನು ಗುಣಪಡಿಸುವ ಒಂದು ಸಮಗ್ರ ವಿಧಾನವಾಗಿದೆ. ಇದು ದೇಹದ ನೈಸರ್ಗಿಕ ಚಿಕಿತ್ಸಾ ಪ್ರಕ್ರಿಯೆಯಾಗಿದೆ. ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಸಮಬಂಧಿಸಿದಂತೆ ಚಿಕಿತ್ಸೆ ನೀಡುವಲ್ಲಿ ಹೋಮಿಯೋಪತಿಯ ಪರಿಣಾಮಕತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ಅಲರ್ಜಿಗಳು, ಆಸ್ತಮಾ, ಖಿನ್ನತೆ ಅಥವಾ ಆತಂಕದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಈ ಪದ್ಧತಿಯನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ಹೋಮಿಯೋಪತಿ ಔಷಧಿಗಳನ್ನು ಖನಿಜಗಳು, ಸಸ್ಯಗಳಂತಹ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಈ ದಿನವು ಹೋಮಿಯೋಪತಿಯನ್ನು ವೈದ್ಯಕೀಯ ವ್ಯವಸ್ಥೆಯಾಗಿ ಅರಿವು ಮೂಡಿಸಲು ಮತ್ತು ಅದರ ಅಭ್ಯಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತದೆ.

ಇದನ್ನೂ ಓದಿ: Ragi Cake: ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಆರೋಗ್ಯಕರ ಕೇಕ್

ವಿಶ್ವ ಹೋಮಿಯೋಪತಿ ದಿನದ ಥೀಮ್‌ :

ಪ್ರತಿವರ್ಷ ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲು ನಿರ್ಧಿಷ್ಟ ಥೀಮ್‌ನ್ನು ಆಯ್ಕೆ ಮಾಡಲಾಗುತ್ತದೆ. ಈ ವರ್ಷ ಒಂದು ಆರೋಗ್ಯ, ಒಂದು ಕುಟುಂಬ ಎಂಬ ಥೀಮ್‌ನ ಅಡಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಇದು ಜನರಲ್ಲಿ ಹೋಮಿಯೋಪತಿಯ ಚಿಕಿತ್ಸೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಹೋಮಿಯೋಪತಿ ಮತ್ತು ಅದರ ಔಷಧಿಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಥೀಮ್‌ಗಳನ್ನು ಆಧರಿಸಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಭಾರತದಲ್ಲಿ ಹೋಮಿಯೋಪತಿ:

ಹೋಮಿಯೋಪತಿಯು ಭಾರತದಲ್ಲಿ ವ್ಯಾಪಕವಾಗಿ ಹರಡಿರುವ ಹಾಗೂ ಜನಪ್ರಿಯ ವೈದ್ಯಕೀಯ ವ್ಯವಸ್ಥೆಯಾಗಿದೆ. ಭಾರತವು ಜಾಗತಿಕವಾಗಿ ಅತಿದೊಡ್ಡ ಹೋಮಿಯೋಪತಿ ಔಷಧ ತಯಾರಿಕೆ ಮತ್ತು ವ್ಯಾಪರಗಳಲ್ಲಿ ಒಂದಾಗಿದೆ. ಹೋಮಿಯೋಪತಿ ಭಾರತದಲ್ಲಿ ಆಯುರ್ವೇದದಂತೆ ಜನಪ್ರಿಯವಾಗಿದೆ. ಇವೆರಡೂ ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

Published On - 12:16 pm, Mon, 10 April 23

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ