ಸಂಸತ್​​ನಲ್ಲಿ ಹಮಾಸ್ ಕುರಿತ ಪ್ರಶ್ನೆಯ ಉತ್ತರಕ್ಕೆ ಸಹಿ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ ಮೀನಾಕ್ಷಿ ಲೇಖಿ

|

Updated on: Dec 09, 2023 | 1:03 PM

ನಿಮಗೆ ತಪ್ಪು ಮಾಹಿತಿ ನೀಡಲಾಗಿದೆ. ಈ ಪ್ರಶ್ನೆ ಮತ್ತು ಈ ಉತ್ತರದೊಂದಿಗೆ ನಾನು ಯಾವುದೇ ಪೇಪರ್‌ಗೆ ಸಹಿ ಮಾಡಿಲ್ಲ  ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪ್ರಧಾನ ಮಂತ್ರಿ ಕಚೇರಿಯನ್ನು ಟ್ಯಾಗ್ ಮಾಡಿದ್ದಾರೆ.

ಸಂಸತ್​​ನಲ್ಲಿ ಹಮಾಸ್ ಕುರಿತ ಪ್ರಶ್ನೆಯ ಉತ್ತರಕ್ಕೆ ಸಹಿ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ ಮೀನಾಕ್ಷಿ ಲೇಖಿ
ಮೀನಾಕ್ಷಿ ಲೇಖಿ
Follow us on

ದೆಹಲಿ ಡಿಸೆಂಬರ್ 09 : ಹಮಾಸ್‌ (Hamas)ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಕುರಿತ ಪ್ರಶ್ನೆಯೊಂದಿಗೆ ಯಾವುದೇ ಪೇಪರ್‌ಗೆ ಸಹಿ ಮಾಡಿಲ್ಲ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ (Meenakshi Lekhi) ಇಂದು(ಶನಿವಾರ) ಸ್ಪಷ್ಟಪಡಿಸಿದ್ದಾರೆ. ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಅನ್ ಸ್ಟಾರ್ಡ್ ಕ್ವೆಶ್ಚನ್ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ(social media) ಪ್ರಸಾರವಾದ ನಂತರ ಕೇಂದ್ರ ಸಚಿವರಿಂದ ಪ್ರತಿಕ್ರಿಯೆ ಬಂದಿದೆ.

ಲೇಖಿ ಅವರ ಟ್ವೀಟ್ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವರು ಸ್ಪಷ್ಟನೆ ನೀಡಲಿದ್ದು, ತಾಂತ್ರಿಕ ದೋಷ ಕಂಡುಬಂದಿದೆ ಎಂದು ಹೇಳಿದ್ದಾರೆ. ಮೀನಾಕ್ಷಿ ಲೇಖಿ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಮತ್ತು ನವದೆಹಲಿ ಕ್ಷೇತ್ರದ ಸಂಸದರಾಗಿದ್ದಾರೆ.

ನಿಮಗೆ ತಪ್ಪು ಮಾಹಿತಿ ನೀಡಲಾಗಿದೆ. ಈ ಪ್ರಶ್ನೆ ಮತ್ತು ಈ ಉತ್ತರದೊಂದಿಗೆ ನಾನು ಯಾವುದೇ ಪೇಪರ್‌ಗೆ ಸಹಿ ಮಾಡಿಲ್ಲ  ಎಂದು ಲೇಖಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪ್ರಧಾನ ಮಂತ್ರಿ ಕಚೇರಿಯನ್ನು ಟ್ಯಾಗ್ ಮಾಡಿದ್ದಾರೆ.


ಏತನ್ಮಧ್ಯೆ, ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಲೇಖಿ ಅವರ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿದ್ದು, ಅವರ ಪ್ರತಿಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಮೀನಾಕ್ಷಿ ಲೇಖಿ ಜೀ ಅವರು ತಮ್ಮ ಪ್ರತಿಕ್ರಿಯೆಯನ್ನು ನಿರಾಕರಿಸುತ್ತಿದ್ದಾರ. ನಾನು ಸಹಿ ಮಾಡಿಲ್ಲ. ಆದರೆ ಹಾಗೆ ಮಾಡಿದವರು ಯಾರು ಎಂದು ಗೊತ್ತಿಲ್ಲ ಎಂದು ಹೇಳುತ್ತಿದ್ದಾರ. ಅವರು ಇದು ನಕಲಿ ಪ್ರತಿಕ್ರಿಯೆ ಎಂದು ಹೇಳುತ್ತಿದ್ದಾರೆಯೇ, ಹೌದು ಎಂದಾದರೆ ಇದು ಗಂಭೀರ ಉಲ್ಲಂಘನೆ ಮತ್ತು ಚಾಲ್ತಿಯಲ್ಲಿರುವ ನಿಯಮಗಳ ಉಲ್ಲಂಘನೆಯಾಗಿದೆ. ಆಕೆಯಿಂದ ಸ್ಪಷ್ಟೀಕರಣಕ್ಕಾಗಿ ಕೃತಜ್ಞರಾಗಿರುತ್ತೇನೆ ಚತುರ್ವೇದಿ ಹೇಳಿದ್ದಾರೆ.

ಉದ್ದೇಶಿತ PQ ಪ್ರಕಾರ, ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಯಾವುದೇ ಪ್ರಸ್ತಾಪವನ್ನು ಭಾರತ ಸರ್ಕಾರ ಹೊಂದಿದೆಯೇ ಮತ್ತು ಇಸ್ರೇಲ್ ಸರ್ಕಾರವು ಯಾವುದೇ ಬೇಡಿಕೆಯನ್ನು ಎತ್ತಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆಯನ್ನು ಕೋರಿ ಕಾಂಗ್ರೆಸ್ ಸಂಸದ ಕುಂಬಕುಡಿ ಸುಧಾಕರನ್ ಅವರು ಈ ಪ್ರಶ್ನೆಯನ್ನು ಕೇಳಿದ್ದಾರೆ.


ಭಾರತದಲ್ಲಿನ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಅವರು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ, ಅದೇ ರೀತಿ ಮಾಡಲು ಕೇಂದ್ರವನ್ನು ವಿನಂತಿಸಿದ್ದಾರೆ, ಆದರೆ ಭಾರತ ಸರ್ಕಾರವು ಪ್ಯಾಲೆಸ್ತೀನ್ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿಲ್ಲ.

ಇದನ್ನೂ ಓದಿ: ಗಾಜಾ ಪಟ್ಟಿಯಲ್ಲಿ ಹಮಾಸ್​ 16 ವರ್ಷಗಳ ಆಳ್ವಿಕೆ ಅಂತ್ಯ, ಗಾಜಾ ನಮ್ಮ ವಶ: ಇಸ್ರೇಲ್​​ ರಕ್ಷಣಾ ಸಚಿವ

ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಇಸ್ರೇಲ್-ಹಮಾಸ್ ಸಂಘರ್ಷದಿಂದ ಉಂಟಾಗುವ ಹದಗೆಟ್ಟ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು “ಸಂಯಮ ಮತ್ತು ಯುದ್ದ ನಿಲ್ಲಿಸಲು ಕರೆ ನೀಡಿದ್ದಾರೆ.
ನಾವು ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಕಾಳಜಿ ವಹಿಸುತ್ತೇವೆಯ ಸಂಯಮ, ಯುದ್ದ ನಿಲ್ಲಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷದ ಶಾಂತಿಯುತ ಪರಿಹಾರಕ್ಕೆ ಒತ್ತು ನೀಡಿದ್ದೇವೆ” ಎಂದು ಎಸ್ ಜೈಶಂಕರ್ ಲೋಕಸಭೆಯಲ್ಲಿ ನಿನ್ನೆ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕದನ ವಿರಾಮಗಳು ಮತ್ತು ಒತ್ತೆಯಾಳುಗಳ ಬಿಡುಗಡೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದರು.ಈ ತಿಂಗಳ ಆರಂಭದಲ್ಲಿ ಯುಎಇಯಲ್ಲಿ ನಡೆದ COP28 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಭೇಟಿಯಾಗಿದ್ದು”ಘರ್ಷಣೆಗೆ ಎರಡು-ರಾಜ್ಯ ಪರಿಹಾರ” ವನ್ನು ಒತ್ತಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ