
ನವದೆಹಲಿ, ಮೇ 20: ಇಚ್ಛಾಶಕ್ತಿ, ತಂತ್ರಜ್ಞಾನ ಎರಡಿದ್ದರೆ ದೇಶದಲ್ಲಿ ಯಾವ ಬದಲಾವಣೆಯೂ ಕಷ್ಟವಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಹೇಳಿದ್ದಾರೆ. ಈ ಮೊದಲು ನಮ್ಮ ಸರ್ಕಾರವು ಟಿಜಿಟಲ್ ಪೇಮೆಂಟ್ ಪರಿಚಯಿಸಿದಾಗ ಹಳ್ಳಿಗಳಲ್ಲಿರುವವರು, ರೈತರು ಇದೆಲ್ಲಾ ಹೇಗೆ ಬಳಸೋಕಾಗುತ್ತೆ ಎಂದು ಕೆಲವರು ಹೇಳಿದ್ದರು. ಆದರೆ ಈಗ ಹಳ್ಳಿಗಳಿಂದ ಹಿಡಿದು ತರಕಾರಿ ವ್ಯಾಪಾರ, ಸಣ್ಣಪುಟ್ಟ ವ್ಯವಹಾರ ಮಾಡುವವರು ಕೂಡ ಈ ಡಿಜಿಟಲ್ ಪಾವತಿಯನ್ನು ಬಳಕೆ ಮಾಡುತ್ತಿದ್ದಾರೆ ಎಂದರು.
ಪ್ರಲ್ಹಾದ್ ಜೋಶಿ ಇಂದು ನವದೆಹಲಿಯಲ್ಲಿ ಡಿಪೋ ದರ್ಪಣ್, ಅನ್ನ ಮಿತ್ರ ಮತ್ತು ಅನ್ನ ಸಹಾಯತ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದರು. ಡಿಜಿಟಲ್ ನಾವೀನ್ಯತೆಯ ಮೂಲಕ ದೇಶದ ಆಹಾರ ಭದ್ರತೆಯನ್ನು ಮುನ್ನಡೆಸುವ ಸರ್ಕಾರದ ಗುರಿಯೊಂದಿಗೆ ಈ ಅಪ್ಲಿಕೇಶನ್‌ಗಳು ಹೊರಬಂದಿವೆ ಎಂದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ಯೋಜನೆಗಳು ತಲುಪುವಂತಾಗಬೇಕು ಎಂಬುದು ಸರ್ಕಾರದ ಆಲೋಚನೆ. ಈ ಇಚ್ಛಾಶಕ್ತಿ ಮೊದಲೇ ಇದ್ದರೂ ಅದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯವಾಗುತ್ತದೆ ಎಂದರು. ಕಳೆದ 11 ವರ್ಷಗಳಲ್ಲಿ ಭಾರತ ಸರ್ಕಾರವು ಡಿಬಿಟಿ, ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.
ಇ-ಆಡಳಿತದ ಸಾಧನವಾಗಿ ಈ ಅಪ್ಲಿಕೇಶನ್‌ಗಳು ದೇಶದ ಕೃಷಿ ಮೂಲಸೌಕರ್ಯ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಹೆಚ್ಚಿದ ದಕ್ಷತೆ, ಸೇವಾ ಗುಣಮಟ್ಟ, ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಅವು ಬೆಳೆಸುತ್ತವೆ ಎಂದರು.
ಇತ್ತೀಚಿನ ತಂತ್ರಜ್ಞಾನದ ಮೂಲಕ ಈ ಅಪ್ಲಿಕೇಶನ್‌ಗಳು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸುಗಮಗೊಳಿಸುತ್ತವೆ.
Launched Depot Darpan, Anna Mitra and Anna Sahayata at Bharat Mandapam, New Delhi, in the presence of Hon’ble Ministers of State Shri @blvermaup ji and Smt. @Nimu_Bambhaniya ji, along with senior officials of the Department of @fooddeptgoi.
These platforms, launched under the… pic.twitter.com/L2exEuQBZl
— Pralhad Joshi (@JoshiPralhad) May 20, 2025
ಡಿಪೋ ದರ್ಪಣ್ ಮೊಬೈಲ್ ಅಪ್ಲಿಕೇಶನ್ ಮೇಲ್ವಿಚಾರಣಾ ಅಧಿಕಾರಿಗಳಿಗೆ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಗೋದಾಮಿನ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಸ್ಮಾರ್ಟ್ ಗೋದಾಮಿನ ತಂತ್ರಜ್ಞಾನಗಳು, ಸಿಸಿಟಿವಿ ಕಣ್ಗಾವಲು ಮತ್ತು ಐಒಟಿ ಸಂವೇದಕಗಳೊಂದಿಗೆ ಸಂಯೋಜಿಸಲ್ಪಟ್ಟಿದೆ.
ಮತ್ತಷ್ಟು ಓದಿ: ಇ-ಕಾಮರ್ಸ್ ತಾಣಗಳಲ್ಲಿ ಪಾಕ್ ಸರಕು ಮಾರಿದರೆ ಹುಷಾರ್: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ
ಮತ್ತೊಂದೆಡೆ, ಅನ್ನ ಸಹಾಯತಾ ಅಪ್ಲಿಕೇಶನ್ ಇದೇ ಮೊದಲ ಬಾರಿಗೆ ಧ್ವನಿ ಮತ್ತು ಸಂದೇಶ ಕುಂದುಕೊರತೆ ವೇದಿಕೆಯಾಗಿದ್ದು, ನಾಗರಿಕರು ತಮ್ಮ ಸ್ಥಳೀಯ ಭಾಷೆಗಳಲ್ಲಿ ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಪ್ರತಿಕ್ರಿಯೆಯೊಂದಿಗೆ ದೂರುಗಳನ್ನು ನೋಂದಾಯಿಸಲು ಅನುವು ಮಾಡಿಕೊಡುತ್ತದೆ.
Speaking at the launch of Depot Darpan, Anna Mitra & Anna Sahayata at Bharat Mandapam, New Delhi https://t.co/Dz6cksvFCU
— Pralhad Joshi (@JoshiPralhad) May 20, 2025
ಇದಲ್ಲದೆ, ಅನ್ನ ಮಿತ್ರ ಎಫ್‌ಡಿಎಸ್ ಡೀಲರ್‌ಗಳು, ಆಹಾರ ನಿರೀಕ್ಷಕರು, ಜಿಲ್ಲಾ ಅಧಿಕಾರಿಗಳು ಸೇರಿದಂತೆ ಇತರರಿಗೆ ಪಡಿತರ ವಿತರಣೆಗೆ ನೈಜ-ಸಮಯದ ಕಮಾಂಡ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಾಸಿಕ ಮಾರಾಟ, ತಪಾಸಣೆ ವರದಿಗಳು ಮತ್ತು ಸರ್ಕಾರಿ ನವೀಕರಣಗಳ ಮಾಹಿತಿಯನ್ನು ಸಹ ಒದಗಿಸುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Tue, 20 May 25