ಮೇರಿ ಮಾಟಿ, ಮೇರಾ ದೇಶ್ ಅಭಿಯಾನದಡಿ ಪುರಿಯಲ್ಲಿ ಆಯೋಜನೆಗೊಂಡಿದ್ದ ‘ಪಂಚ ಪ್ರಾಣ ಪ್ರತಿಜ್ಞಾ’ ಕಾರ್ಯಕ್ರದಮಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಭಾಗವಹಿಸಿದ್ದರು.ಇದಕ್ಕೂ ಮುನ್ನ ಹಣಕಾಸು ಸಚಿವರು ಮತ್ತು ಶಿಕ್ಷಣ ಸಚಿವರು ಪುರಿ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದರ್ಶನದ ನಂತರ ನಿರ್ಮಲಾ ಸೀತಾರಾಮನ್ ಮತ್ತು ಧರ್ಮೇಂದ್ರ ಪ್ರಧಾನ್ ಪುರಿಯ ಬ್ಲೂ ಫ್ಲಾಗ್ ಬೀಚ್‌ಗೆ ಆಗಮಿಸಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ಮರಳು ಕಲೆಯನ್ನು ವೀಕ್ಷಿಸಿದರು. ಇದೇ ವೇಳೆ ಸುದರ್ಶನ್ ಮೇರಿ ಮಾಟಿ ಮೇರಾ ದೇಶ್ ಎಂಬ ವಿಷಯದ ಕುರಿತು ಕಲಾಕೃತಿಯನ್ನು ಸಿದ್ಧಪಡಿಸಿದ್ದರು.
ಮೇರಿ ಮಾಟಿ, ಮೇರಾ ದೇಶ್’ ಕಾರ್ಯಕ್ರಮದಡಿ ‘ಪಂಚ ಪ್ರಾಣ ಪ್ರತಿಜ್ಞಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ವಿದೇಶಿಯರ ಗುಲಾಮಗಿರಿಯ ಕಾಲದಲ್ಲಿ ನಮ್ಮಲ್ಲಿ ಮೂಡಿರುವ ಮನಸ್ಥಿತಿಯನ್ನು ಹೋಗಲಾಡಿಸುವುದು ಬಹಳ ಮುಖ್ಯ.
ಆಗ ಮಾತ್ರ 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುತ್ತದೆ ಮತ್ತು ಭಾರತದ ಬಗ್ಗೆ ಹೆಮ್ಮೆ ಪಡುವ ವಾತಾವರಣ ನಿರ್ಮಾಣವಾಗಲಿದೆ ಎಂದರು.
#WATCH | Union ministers Nirmala Sitharaman, Dharmendra Pradhan and BJP leader Sambit Patra attended a plantation drive and ‘Panch Pran Pledge’ under ‘Meri Maati, Mera Desh’ programme in Puri, Odisha. pic.twitter.com/WztG1PEWLZ
— ANI (@ANI) August 17, 2023
ಈ ಕಾರ್ಯಕ್ರಮವು ಆಗಸ್ಟ್ 9 ರಿಂದ ಪ್ರಾರಂಭವಾಗಿದೆ ಮತ್ತು ಈ ಅಭಿಯಾನವು ಆಗಸ್ಟ್ 30 ರವರೆಗೆ ನಡೆಯಲಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವೀರಯೋಧರನ್ನು ಗೌರವಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನದಡಿ ದೇಶದಾದ್ಯಂತ ವೀರ ಯೋಧರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಮತ್ತಷ್ಟು ಓದಿ: ಆಜಾದಿ ಕಾ ಅಮೃತ್ ಮಹೋತ್ಸವ್ ಸಮಾರೋಪದೊಂದಿಗೆ ‘ಮೇರಿ ಮಾಟಿ ಮೇರಾ ದೇಶ್ ಅಭಿಯಾನ’ಕ್ಕೆ ಚಾಲನೆ; ದೇಶದ ಹುತಾತ್ಮರಿಗೆ ನಮನ
ಮೇರಿ ಮಾಟಿ ಮೇರಾ ದೇಶ್ ಅಭಿಯಾನದ ಅಡಿಯಲ್ಲಿ, 16 ಆಗಸ್ಟ್ 2023 ರಿಂದ ಬ್ಲಾಕ್, ಪುರಸಭೆ, ಕಾರ್ಪೊರೇಷನ್ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮಗಳು ಆರಂಭವಾಗಿವೆ. ಸಮಾರೋಪ ಸಮಾರಂಭವನ್ನು 30 ಆಗಸ್ಟ್ 2023 ರಂದು ನವದೆಹಲಿಯ ಕಧ್ವತಿ ಪಥ್‌ನಲ್ಲಿ ಗಣ್ಯರ ಸಮ್ಮುಖದಲ್ಲಿ ನಿಗದಿಪಡಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Thu, 17 August 23