ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕಕ್ರಿಯೆ ಅತ್ಯಾಚಾರವಲ್ಲ, ಇದಕ್ಕೆ ಆಕೆ ಒಪ್ಪಿಗೆ ಅಗತ್ಯವಿಲ್ಲ : ಮಧ್ಯಪ್ರದೇಶ ಹೈಕೋರ್ಟ್

|

Updated on: May 04, 2024 | 3:56 PM

ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ, ಇದಕ್ಕೆ ಆಕೆಯ ಒಪ್ಪಿಗೆ ಅಗತ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್​​​ ಆದೇಶ ನೀಡಿದೆ. ಮಧ್ಯಪ್ರದೇಶದ ಮಹಿಳೆಯೊಬ್ಬರು ತನ್ನ ಪತಿ ತನ್ನೊಂದಿಗೆ ಒತ್ತಾಯ ಪೂರಕವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಹೈಕೋರ್ಟ್​​ ಈ ರೀತಿ ಪ್ರತಿಕ್ರಿಯಿಸಿದೆ.

ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕಕ್ರಿಯೆ ಅತ್ಯಾಚಾರವಲ್ಲ, ಇದಕ್ಕೆ ಆಕೆ ಒಪ್ಪಿಗೆ ಅಗತ್ಯವಿಲ್ಲ : ಮಧ್ಯಪ್ರದೇಶ ಹೈಕೋರ್ಟ್
Follow us on

ಮಧ್ಯಪ್ರದೇಶದ (madhya pradesh) ಮಹಿಳೆಯೊಬ್ಬರು  ನನ್ನ ಪತಿ ನನ್ನ ಜತೆಗೆ ಒತ್ತಾಯ ಪೂರಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದು ಅತ್ಯಾಚಾರ ಎಂದು ಆಕೆ ದೂರು ನೀಡಿದ್ದಾಳೆ. ಈ ಬಗ್ಗೆ ಮಧ್ಯಪ್ರದೇಶದ ಹೈಕೋರ್ಟ್ ವಿಚಾರಣೆ ​​​ ನಡೆಸಿದೆ.  ವೈವಾಹಿಕ ಅತ್ಯಾಚಾರ ಎಂಬುದನ್ನು ಭಾರತೀಯ ಕಾನೂನಿನಲ್ಲಿ ಗುರುತಿಸಲಾಗಿಲ್ಲ. ಇಂತಹ ಪ್ರಕರಣಗಳಲ್ಲಿ ಪತ್ನಿಯ ಒಪ್ಪುಗಿಲ್ಲದೆ ನಡೆಸಿದ ಅಸ್ವಾಭಾವಿಕ ಲೈಂಗಿಕ ಕ್ರಿಯೆಯನ್ನು ( unnatural sex) ಅತ್ಯಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಬುದ್ಧವಾರ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದಾಗ ಹೈಕೋರ್ಟ್​​ ಈ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ. ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಯನ್ನು ಹೊಂದಿದ್ದಾನೆ ಎಂದು ಆರೋಪಿಸಿ ಪತಿಯ ಮೇಲೆ ದಾಖಲಿಸಿದ ಎಫ್ಐಆರ್​​​ನ್ನು ರದ್ದುಗೊಳಿಸುವಂತೆ ಕೋರ್ಟ್​​ ಆದೇಶ ನೀಡಿದೆ. ಇದರ ಜತೆಗೆ ಪ್ರಕರಣ ವಿಚಾರಣೆಯನ್ನು ಮುಂದುವರಿಸುವುದು ಸರಿಯಲ್ಲ ಎಂದು ಹೇಳಿದೆ. ಪತಿಯು ತನ್ನ ಪತ್ನಿಯೊಂದಿಗೆ ಗುದ ಸಂಭೋಗದಲ್ಲಿ ತೊಡಗಿದರೆ ಅದು ಅತ್ಯಾಚಾರವಾಗುವುದಿಲ್ಲ ಎಂದು  ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರು ಏಕಪೀಠ ಹೇಳಿದೆ.

ಇನ್ನು ಪತಿಗಿಂತ ಹೆಂಡತಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿದ್ದರು ಆಕೆಯ ಜತೆಗೆ ಒತ್ತಾಯ ಪೂರಕ ಲೈಂಗಿಕ ಕ್ರಿಯೆ ನಡೆಸಿದರು  ಅದು ಅಪರಾಧವಲ್ಲ ಎಂದು ಹೇಳಿದೆ. ಐಪಿಸಿ ಸೆಕ್ಷನ್ 375 ರ ಅಡಿಯಲ್ಲಿ ‘ಅತ್ಯಾಚಾರ’ದ ಬಗ್ಗೆ ವಿವರಿಸಲಾಗಿದೆ. ಮಹಿಳೆಯ ಗುದದ್ವಾರದೊಳಗೆ ಪತಿ ತನ್ನ  ಶಿಶ್ನವನ್ನು ಹಾಕಿದಾಗ ಹಾಗೂ ಪತಿಯಿಂದ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಯ ನಡೆಸಿದರೆ ಅದು ಅತ್ಯಾಚಾರ ಆಗುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ರೋಹಿತ್ ವೇಮುಲ ದಲಿತನೇ ಅಲ್ಲ; ಹೈಕೋರ್ಟ್​ಗೆ ಪೊಲೀಸರ ಅಂತಿಮ ವರದಿ

ಕಾನೂನುಬದ್ಧವಾಗಿ ವಿವಾಹವಾದ ಪತ್ನಿಯೊಂದಿಗೆ ಪತಿಯು ಅಸ್ವಾಭಾವಿಕ ಲೈಂಗಿಕತೆಯನ್ನು ಹೊಂದಿರುವುದರಿಂದ ಐಪಿಸಿಯ ಸೆಕ್ಷನ್ 377 ರ ಅಡಿಯಲ್ಲಿ ಅಪರಾಧವಲ್ಲ ಎಂದು ನ್ಯಾಯಮೂರ್ತಿ ಜಿಎಸ್ ಅಹ್ಲುವಾಲಿಯಾ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇನ್ನು ಐಪಿಸಿಯ ಸೆಕ್ಷನ್ 376 ಬಿ ಪ್ರಕಾರ ವಿಚ್ಛೇದನ ನಂತರ ಬೇರೆ ಬೇರೆ ವಾಸವಾಗಿದ್ದರೆ ಮತ್ತು ಇಬ್ಬರಲ್ಲಿ ಒಬ್ಬರ ಒಪ್ಪಿಗೆ ಇಲ್ಲದ್ದಿದರೆ ಆಗಾ ಅಸ್ವಾಭಾವಿಕ ಲೈಂಗಿಕ್ರಿಯೆ ನಡೆಸಿದ್ದರೆ ಅದು ಅತ್ಯಾಚಾರ ಎಂದು ಅಭಿಪ್ರಾಯಪಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Sat, 4 May 24