ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು
ಹರ್ದೀಪ್ ಸಿಂಗ್ ನಿಜ್ಜಾರ್ನ್ನು ಹತ್ಯೆ ಮಾಡಿದ ಮೂರು ಹಂತಕರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.ಭಾರತದ ಜತೆಗಿನ ನಮ್ಮ ಸಂಬಂಧದಲ್ಲಿ ಯಾವುದೇ ಬದಲಾವಣೆಗೊಂಡಿಲ್ಲ. ಈ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತೇವೆ ಎಂದು RCMP ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಡಲು ಕಾರಣವಾಗಿದ್ದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ (Hardeep Singh Nijjar) ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹರ್ದೀಪ್ ಸಿಂಗ್ ನಿಜ್ಜಾರ್ನ್ನು ಹತ್ಯೆ ಮಾಡಿದ ಮೂರು ಹಂತಕರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು, ಮೂವರು ಭಾರತೀಯರಾದ ಕರಣ್‌ಪ್ರೀತ್ ಸಿಂಗ್, 28, ಕಮಲ್‌ಪ್ರೀತ್ ಸಿಂಗ್, 22 ಮತ್ತು ಕರಣ್ ಬ್ರಾರ್, 22 ಎಂಬವವರನ್ನು ಬಂಧಿಸಿದ್ದಾರೆ.
ಭಾರತದ ಜತೆಗಿನ ನಮ್ಮ ಸಂಬಂಧದಲ್ಲಿ ಯಾವುದೇ ಬದಲಾವಣೆಗೊಂಡಿಲ್ಲ. ಈ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತೇವೆ ಎಂದು RCMP ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ತನಿಖಾಧಿಕಾರಿಗಳು ಕೆಲವು ತಿಂಗಳ ಹಿಂದೆ ಕೆನಡಾದಲ್ಲಿ ಈ ಶಂಕಿತರ ಬಗ್ಗೆ ಕಣ್ಗಾವಲು ಇರಿಸಿದ್ದರು. ಈ ಹಿಟ್ ಸ್ಕ್ವಾಡ್‌ನ ಸದಸ್ಯರು ನಿಜ್ಜರ್‌ನ ಹತ್ಯೆ ಮಾಡು ಸಂಧರ್ಭದಲ್ಲಿ ಒಂದೊಂದು ಪಾತ್ರವನ್ನು ವಹಿಸಿದರು, ಒಬ್ಬ ನಿಜ್ಜರ್‌ನ್ನು ಶೂಟ್ ಮಾಡಲು, ಮತ್ತೊಬ್ಬ ಡ್ರೈವರ್ ಮತ್ತು ಇನ್ನೊಬ್ಬ ಸ್ಪಾಟರ್‌ಗಳಾಗಿದ್ದರು.
ಕೆನಡಾದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ US ಕಾನೂನು ಜಾರಿ ಸಂಸ್ಥೆಯ ಸಹಾಯವನ್ನು ಪಡೆದಿದ್ದಾರೆ. ಇನ್ನು ಈ ತನಿಖೆ ಇಲ್ಲಿಗೆ ಕೊನೆಗೊಂಡಿಲ್ಲ. ಈ ಹತ್ಯೆಯ ಹಿಂದೆ ಇನ್ನು ಅನೇಕರ ಪಾತ್ರವಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಅವನ್ನು ಕೂಡ ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ ಎಂದು ಸಹಾಯಕ RCMP ಕಮಿಷನರ್ ಡೇವಿಡ್ ಟೆಬೌಲ್ ಹೇಳಿದರು.
ಜೂನ್ 18, 2023 ರಂದು ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರದಲ್ಲಿ ಸಂಜೆ ಪ್ರಾರ್ಥನೆಯ ಸಮಯದಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ಮೇಲೆ ಗುಂಡು ಹಾರಿಸಲಾಗಿದೆ. ಇನ್ನು ಈ ಹತ್ಯೆ ಬಗ್ಗೆ ಟೊರೊಂಟೊದಲ್ಲಿ ನಡೆದ ಖಾಲ್ಸಾ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ, ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಕೈವಾಡ ಇದೆ ಎಂದು ಹೇಳಿದ್ದರು.
ಇದನ್ನೂ ಓದಿ: ಭಾರತ ಸೂಪರ್ ಪವರ್ ಆಗುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ, ಸಂಸತ್ತಿನಲ್ಲಿ ಗುಡುಗಿದ ಪಾಕ್ ನಾಯಕ
ಆದರೆ ಕೆನಡಾದ ಈ ಹೇಳಿಕೆಯನ್ನು ಭಾರತವು ವಿರೋಧಿಸಿತ್ತು. ಅಂತಹ ಹೇಳಿಕೆಗಳು ಪ್ರತ್ಯೇಕತಾವಾದ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ಕಾರಣವಾಗಬಹುದು, ಎಚ್ಚರಿಕೆಯಿಂದ ಹೇಳಿಕೆ ನೀಡಿ ಎಂದು ಹೇಳಿತ್ತು. ಈ ಹೇಳಿಕೆಯಿಂದ ರಾಜತಾಂತ್ರಿಕ ತೊಂದರೆಗಳನ್ನು ಕೂಡ ಕೆನಡಾ ಅನುಭವಿಸಿತ್ತು. ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾ ಬಿಡುವಂತೆ ಹೇಳಿತ್ತು. ಇದಕ್ಕೆ ಉತ್ತರವಾಗಿ ಭಾರತ ಕೂಡ ಭಾರತದಲ್ಲಿರುವ ರಾಯಭಾರಿಗಳನ್ನು ಕೆನಡಾಕ್ಕೆ ಕಳುಹಿಸಿತ್ತು.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:48 pm, Sat, 4 May 24